ಸಾರ್ವಜನಿಕರ ಗಮನಕ್ಕೆ

Ravi Talawar
ಸಾರ್ವಜನಿಕರ ಗಮನಕ್ಕೆ
WhatsApp Group Join Now
Telegram Group Join Now
ಗದಗ ಅಗಸ್ಟ 31; ನರೇಗಲ್ಲ ಪಟ್ಟಣದ ಸಾರ್ವಜನಿಕರಿಗೆ ತಿಳಿಯಪಡಿಸುವುದೆನೆಂದರೆ, ಕಾರ್ಯಾಲಯದ ವ್ಯಾಪ್ತಿಯಲ್ಲಿ ಬರುವ ರಿ.ಸ.ನಂ 199/*/4 ರಲ್ಲಿನ ನಾಗರಿಕ ಸೌಲಭ್ಯಕ್ಕೆ ಮೀಸಲು ಇರುವ ಆಸ್ತಿ ನಂ 343 ಪ್ಲಾಟ ನಂ 24 ರ ಒಟ್ಟು ವಿಸ್ತೀರ್ಣ 291.10 ಚದರ ಮೀಟರ ಜಾಗೆಯನ್ನು ನರೇಗಲ್ಲ ಪಟ್ಟಣದಲ್ಲಿ ಕೃಷಿ ಅಧಿಕಾರಿಗಳು ರೈತ ಸಂಪರ್ಕ ಕೇಂದ್ರಕ್ಕೆ ಕೃಷಿ ಪರಿಕರಗಳ ಸಂಗ್ರಹಕ್ಕೆ ಗೋದಾಮು ಸ್ಥಾಪಿಸಲು ಮತ್ತು ನರೇಗಲ್ಲ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಬರುವ ರಿ ಸ ನಂ 226/*/3 ರಲ್ಲಿನ ನಾಗರಿಕ ಸೌಲಭ್ಯಕ್ಕೆ ಮೀಸಲು ಇರುವ ಆಸ್ತಿ ನಂ 350 ಪ್ಲಾಟ ನಂ 25 ರ ಒಟ್ಟು ವಿಸ್ತೀರ್ಣ 296.59 ಚದರ ಮೀಟರ ಜಾಗೆಯನ್ನು ನರೇಗಲ್ಲ ಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರ ನರೇಗಲ್ಲ ರವರು ಆರೋಗ್ಯ ಮಂದಿರ ಕಟ್ಟಡವನ್ನು ನಿರ್ಮಾಣ ಮಾಡಲು ನಿವೇಶನ ಮಂಜೂರಿಸಲು ನಿಯಮಾನುಸಾರವಾಗಿ ಠರಾವು ಪಾಸು ಮಾಡಲಾಗಿದೆ.

ಸಾರ್ವಜನಿಕರು ಈ ಬಗ್ಗೆ ಆಕ್ಷೇಪಣೆ, ಸಲಹೆ ಸೂಚನೆಗಳು ಇದ್ದಲ್ಲಿ ಈ ಪ್ರಕಟಣೆ ಪ್ರಚುರಗೊಂಡ 07 ದಿನಗಳ ಒಳಗಾಗಿ ನರೇಗಲ್ ಪಟ್ಟಣ ಪಂಚಾಯತ್ ಕಾರ್ಯಾಲಯಕ್ಕೆ ಲಿಖಿತವಾಗಿ ಸ್ಪಷ್ಟ ಕಾರಣಗಳೊಂದಿಗೆ ಸಲಹೆ/ಸೂಚನೆ/ಆಕ್ಷೇಪಣೆಗಳನ್ನು ಸಲ್ಲಿಸತಕ್ಕದ್ದು ಎಂದು ನರೇಗಲ್ ಪಟ್ಟಣ ಪಂಚಾಯತ್ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ನರೇಗಲ್ ಪಟ್ಟಣ ಪಂಚಾಯತ್ ಕಾರ್ಯಾಲಯದ ಮುಖ್ಯಾಧಿಕಾರಿ ದೂ.ಸಂ. 9741377297 ಸಂಪರ್ಕಿಸಬಹುದಾಗಿದೆ.

WhatsApp Group Join Now
Telegram Group Join Now
Share This Article