ರಾಜ್ಯದಲ್ಲಿ ಇಂದು ಇಂಧನ ಬೆಲೆಯಲ್ಲಿ ಏರಿಳಿತ

Ravi Talawar
ರಾಜ್ಯದಲ್ಲಿ ಇಂದು ಇಂಧನ ಬೆಲೆಯಲ್ಲಿ ಏರಿಳಿತ
WhatsApp Group Join Now
Telegram Group Join Now

ಬೆಂಗಳೂರು(ಜೂ.23) ಕರ್ನಾಟಕದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಕಳೆದ ಕೆಲ ದಿನಗಳಿಂದ ವ್ಯತ್ಯಾಸವಾಗುತ್ತಿದೆ. ಜೂನ್ 16ರಂದು ರಾಜ್ಯ ಸರ್ಕಾರ ಮಾರಾಟ ತೆರಿಗೆ ಹೆಚ್ಚಿಸುವ ಮೂಲಕ ಶಾಕ್ ನೀಡಿತ್ತು. ಇದಾದ ಬಳಿಕ ಏರಿಳಿತ ಕಾಣುತ್ತಿರುವ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಿಂದ ಜನಸಾಮಾನ್ಯರು ಹೈರಣಾಗುತ್ತಿದ್ದಾರೆ. ಇಂದು ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಇಂದನ ಬೆಲೆಯಲ್ಲಿ ಬದಲಾವಣೆಯಾಗಿದೆ. ನಿನ್ನೆ 6 ಪೈಸೆ ಏರಿಕೆಯಾಗಿದ್ದರೆ, ಇಂದು 6 ಪೈಸೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 102.86 ರೂಪಾಯಿ ಆಗಿದ್ದರೆ, ಡೀಸೆಲ್ ದರ ಪ್ರತಿ ಲೀಟರ್‌ಗೆ 88.94 ರೂಪಾಯಿ ಆಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಡೀಸೆಲ್ ಬೆಲೆ 87.62 ರೂಪಾಯಿ ಆಗಿದ್ದರೆ, ಪೆಟ್ರೋಲ್ ಬೆಲೆ 94.72 ರೂಪಾಯಿ ಆಗಿದೆ. ಇನ್ನು ಚೆನ್ನೈನಲ್ಲಿ ಪೆಟ್ರೋಲ್ ದರ 100.85 ರೂಪಾಯಿ, ಡೀಸೆಲ್ ಬೆಲೆ 92.43 ರೂಪಾಯಿ ಆಗಿದೆ. ಗೋವಾದಲ್ಲಿ ನಿನ್ನೆಯಿಂದ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ 1 ರೂಪಾಯಿ ತೆರಿಗೆ ಏರಿಕೆ ಮಾಡಲಾಗಿದೆ. ಹೀಗಾಗಿ ಗೋವಾದಲ್ಲೂ ಇಂದನ ದುಬಾರಿಯಾಗಿದೆ.

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪೆಟ್ರೋಲ್ ದರದ ವಿವರ ಇಲ್ಲಿದೆ.

ಬಾಗಲಕೋಟೆ: ಪೆಟ್ರೋಲ್ ದರ: 103.21 ರೂ

ಬೆಳಗಾವಿ: ಪೆಟ್ರೋಲ್ ದರ: 102.68 ರೂ

ಧಾರವಾಡ: ಪೆಟ್ರೋಲ್ ದರ: 102.62 ರೂ

ಗದಗ: ಪೆಟ್ರೋಲ್ ದರ: 103.80ರೂ

ಹಾವೇರಿ: ಪೆಟ್ರೋಲ್ ದರ: 103.72 ರೂ

ಉತ್ತರ ಕನ್ನಡ: ಪೆಟ್ರೋಲ್ ದರ: 103.91ರೂ

ವಿಜಯಪುರ: ಪೆಟ್ರೋಲ್ ದರ: 102.64ರೂ

ಬೆಂಗಳೂರು ಗ್ರಾಮಾಂತರ: ಪೆಟ್ರೋಲ್ ದರ: 102.66ರೂ

ಬೆಂಗಳೂರು ನಗರ: ಪೆಟ್ರೋಲ್ ದರ: 102.86 ರೂ

ಚಿಕ್ಕಬಳ್ಳಾಪುರ: ಪೆಟ್ರೋಲ್ ದರ:103.48 ರೂ

ಚಿತ್ರದುರ್ಗ: ಪೆಟ್ರೋಲ್ ದರ: 104.22ರೂ

ದಾವಣಗೆರೆ: ಪೆಟ್ರೋಲ್ ದರ: 104.33ರೂ

ಕೋಲಾರ: ಪೆಟ್ರೋಲ್ ದರ: 102.60ರೂ

ರಾಮನಗರ: ಪೆಟ್ರೋಲ್ ದರ: 102.98 ರೂ

ಶಿವಮೊಗ್ಗ: ಪೆಟ್ರೋಲ್ ದರ: 103.85 ರೂ

ತುಮಕೂರು: ಪೆಟ್ರೋಲ್ ದರ: 104.39 ರೂ

ಬಳ್ಳಾರಿ: ಪೆಟ್ರೋಲ್ ದರ: 104.71 ರೂ

ಬೀದರ್: ಪೆಟ್ರೋಲ್ ದರ: 103.47ರೂ

ಕಲಬುರಗಿ: ಪೆಟ್ರೋಲ್ ದರ: 103.43ರೂ

ಕೊಪ್ಪಳ: ಪೆಟ್ರೋಲ್ ದರ: 103.82ರೂ

ರಾಯಚೂರು: ಪೆಟ್ರೋಲ್ ದರ:103.78 ರೂ

ವಿಜಯನಗರ: ಪೆಟ್ರೋಲ್ ದರ: 105.01 ರೂ

ಯಾದಗಿರಿ: ಪೆಟ್ರೋಲ್ ದರ: 103.71 ರೂ

ಚಾಮರಾಜನಗರ: ಪೆಟ್ರೋಲ್ ದರ: 102.66ರೂ

ಚಿಕ್ಕಮಗಳೂರು: ಪೆಟ್ರೋಲ್ ದರ: 104.91 ರೂ

ದಕ್ಷಿಣ ಕನ್ನಡ: ಪೆಟ್ರೋಲ್ ದರ: 102.32ರೂ

ಹಾಸನ: ಪೆಟ್ರೋಲ್ ದರ: 102.72ರೂ

ಕೊಡಗು: ಪೆಟ್ರೋಲ್ ದರ: 103.90 ರೂ

ಮಂಡ್ಯ: ಪೆಟ್ರೋಲ್ ದರ: 103.12ರೂ

ಮೈಸೂರು : ಪೆಟ್ರೋಲ್ ದರ: 102.41ರೂ

ಉಡುಪಿ: ಪೆಟ್ರೋಲ್ ದರ: 102.28ರೂ

 

WhatsApp Group Join Now
Telegram Group Join Now
Share This Article