ಇಂದಿನಿಂದ ಲಾಲ್‌ಬಾಗ್‌ನಲ್ಲಿ ಫ್ಲವರ್‌ ಶೋ ಆರಂಭ

Ravi Talawar
ಇಂದಿನಿಂದ ಲಾಲ್‌ಬಾಗ್‌ನಲ್ಲಿ ಫ್ಲವರ್‌ ಶೋ ಆರಂಭ
WhatsApp Group Join Now
Telegram Group Join Now

ಬೆಂಗಳೂರು, ಆಗಸ್ಟ್ 07: ಸ್ವಾತಂತ್ರ್ಯ ದಿನಾಚರಣೆಗೆ ದಿನಗಣನೆ ಶುರುವಾಗಿದೆ. ಪ್ರತಿ ಬಾರಿ ಸ್ವಾತಂತ್ರ್ಯ ದಿನಾಚರಣೆ ಹತ್ತಿರವಾದಂತೆ ಬೆಂಗಳೂರಿನ ಲಾಲ್‌ಬಾಗ್‌ನ ಫಲಪುಷ್ಟ  ಪ್ರದರ್ಶನದತ್ತ ಎಲ್ಲರ ಚಿತ್ತ ಹರಿಯುತ್ತದೆ. ಸಸ್ಯಕಾಶಿಯಲ್ಲಿ ಪುಷ್ಪಲೋಕವೇ ಧರೆಗಿಳಿಯುತ್ತದೆ. ಇದೀಗ ಇಂದಿನಿಂದ (ಆ.07) ಲಾಲ್‌ಬಾಗ್‌ನಲ್ಲಿ ಫ್ಲವರ್‌ ಶೋ ಆರಂಭಗೊಳ್ಳಲಿದ್ದು, 12 ದಿನ ಪ್ರದರ್ಶನಗೊಳ್ಳಲಿದೆ.

ಬ್ರಿಟೀಷರ ಸೊಲ್ಲಡಗಿಸಿದ್ದ ವೀರವನಿತೆ ಕಿತ್ತೂರು ರಾಣಿ, ಆಂಗ್ಲರ ನಿದ್ದೆಗೆಡಿಸಿದ್ದ ವೀರ ಸಂಗೊಳ್ಳಿ ರಾಯಣ್ಣ ಇವರಿಬ್ಬರೂ ಸ್ವಾತಂತ್ರ್ಯ ಮತ್ತು ಸ್ವಾಭಿಮಾನದ ಸಂಕೇತ. ಸ್ವಾತಂತ್ರ್ಯೋತ್ಸವ ನಿಮಿತ್ತ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ತೋಟಗಾರಿಕಾ ಇಲಾಖೆ ನಡೆಸುವ 218ನೇ ಫಲಪುಷ್ಪ ಪ್ರದರ್ಶನದಲ್ಲಿ ಕಿತ್ತೂರಿನ ವೀರ ಪರಂಪರೆ ಅನಾವರಣಗೊಳ್ಳುತ್ತಿದೆ. ಸಿಎಂ ಸಿದ್ದರಾಮಯ್ಯ ಬೆಳಗ್ಗೆ 10 ಗಂಟೆಗೆ ಗಾಜಿನ ಮನೆಯಲ್ಲಿ ಫ್ಲವರ್ ಶೋಗೆ ಚಾಲನೆ ನೀಡಲಿದ್ದಾರೆ. 12 ದಿನಗಳ ಪ್ರದರ್ಶನಕ್ಕೆ 10 ಲಕ್ಷಕ್ಕೂ ಅಧಿಕ ಮಂದಿ ಸಾಕ್ಷಿಯಾಗುವ ನಿರೀಕ್ಷೆ ಇದೆ.

WhatsApp Group Join Now
Telegram Group Join Now
Share This Article