ಇಂದು ಮತ್ತೆ ನೂರಾರು ವಿಮಾನಗಳು ರದ್ದು
ಫೆ.೧೦ರ ಬಳಿಕ ಸ್ಥಿರ ಕಾರ್ಯಾಚರಣೆ : ಇಂಡಿಗೋ ಭರವಸೆ
ದೇವನಹಳ್ಳಿ, ಡಿ., ೦೫- ಇಂಡಿಗೋ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಇಂದೂ ಸಹ ಮುಂದುವರಿದಿದ್ದು, ಬೆಂಗಳೂರಿನ ಕೇಂಪೇಗೌಡ ವಿಮಾನ ನಿಲ್ದಾಣದಲ್ಲಿಯೇ ಇಂದು ಮತ್ತೆ ೧೦೨ ವಿಮಾನಗಳ ಸಂಚಾರ ರದ್ದಾಗಿದೆ. ದೇಶಾದ್ಯಂತ ಬೆಂಗಳೂರು ಸೇರಿ ಹಲವೆಡೆ ೫೦೦ ಕ್ಕೂ ಅಧಿಕ ವಿಮಾನಗಳ ಹಾರಾಟ ರದ್ದುಗೊಂಡಿದೆ. ಬೆಂಗಳೂರಲ್ಲಿ ೫೦ ಡಿಪಾರ್ಚರ್ ಹಾಗೂ ೫೨ ಅರೈವಲ್ ವಿಮಾನಗಳು ಕ್ಯಾನ್ಸಲ್ ಆಗಿದ್ದು, ೩೦ಕ್ಕೂ ಹೆಚ್ಚು ವಿಮಾನಗಳ ಹಾರಾಟ ವಿಳಂಬಗೊಂಡಿದೆ. ಇದರಿಂದಾಗಿ ರೊಚ್ಚಿಗೆದ್ದ ಪ್ರಯಾಣಿಕರು ಇಂಡಿಗೋ ಕೌಂಟರ್ ಬಳಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. , ಬೆಂಗಳೂರು ಸೇರಿ ಹಲವೆಡೆ ವಿಮಾನ ಪ್ರಯಾಣಿಕರು ಪರದಾಡುವಂತಾಗಿದೆ.
ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಹಿನ್ನೆಲೆ ಕೆಂಪೇಗೌಡ ಏರ್?ಪೋರ್ಟ್?ನ ಅರೈವಲ್ ಗೇಟ್ ಖಾಲಿ ಖಾಲಿ ಇರೋ ದೃಶ್ಯಗಳು ಕಂಡುಬಂದಿವೆ. ಹೊರ ರಾಜ್ಯಗಳಿಂದಲೂ ಇಂಡಿಗೋ ವಿಮಾನಗಳು ಬಾರದ ಹಿನ್ನಲೆ, ಪ್ರಯಾಣಿಕರಿಲ್ಲದೆ ಆಗಮನದ ದ್ವಾರಗಳು ಬಿಕೋ ಎನ್ನುತ್ತಿವೆ. ಪ್ರಯಾಣಿಕರಿಲ್ಲದ ಕಾರಣ ಟ್ಯಾಕ್ಸಿ ಚಾಲಕರೂ ಬಾಡಿಗೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ದೆಹಲಿ ವಿಮಾನ ನಿಲ್ದಾಣದಲ್ಲಿ ಆಗಮನ ಮತ್ತು ನಿರ್ಗಮನ ಸೇರಿದಂತೆ ೨೨೦ ಕ್ಕೂ ಹೆಚ್ಚು ವಿಮಾನಗಳು ಮತ್ತು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ೯೦ ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಂಡಿವೆ ಎಂದು ಮೂಲಗಳು ತಿಳಿಸಿವೆ.
ವಿಮಾನಗಳ ಹಾರಾಟ ರದ್ದಾಗಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದು, ವಿಮಾನಯಾನ ಸಂಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಕಳೆದೆರಡು ದಿನಗಳಿಂದ ದೇಶಿಯ ಮತ್ತು ಅಂತಾರಾಷ್ಟ್ರೀಯ ವಿಮಾನ ಹಾರಾಟದಲ್ಲಿ ವ್ಯಾಪಕ ಅಡಚಣೆ ಎದುರಿಸುತ್ತಿರುವ ಇಂಡಿಗೋ ಸಂಸ್ಥೆ, ಈ ಕುರಿತು ತಮ್ಮ ಗ್ರಾಹಕರು ಮತ್ತು ಉದ್ಯಮ ಪಾಲುದಾರರಲ್ಲಿ ಕ್ಷಮೆಯಾಚಿಸಿದೆ.
ಫೆಬ್ರವರಿ ೧೦, ೨೦೨೬ ರ ವೇಳೆಗೆ ಮಾತ್ರ ಸಾಮಾನ್ಯ ಮತ್ತು ಸ್ಥಿರ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಪುನಃಸ್ಥಾಪಿಸುವ ನಿರೀಕ್ಷೆಯಿದೆ. ಮುಂದಿನ ಮೂರು ದಿನಗಳಲ್ಲಿ ವಿಮಾನ ರದ್ದತಿ ಮುಂದುವರಿಯುತ್ತದೆ ಮತ್ತು ಅಡೆತಡೆಗಳನ್ನು ಕಡಿಮೆ ಮಾಡಲು ಡಿಸೆಂಬರ್ ೮ ರಿಂದ ವಿಮಾನ ಕಾರ್ಯಾಚರಣೆಯನ್ನು ಕಡಿಮೆ ಮಾಡಲಾಗುತ್ತದೆ ವಿಮಾನಯಾನ ಸಂಸ್ಥೆ ತಿಳಿಸಿದೆ.
ಈ ಕುರಿತು ಕ್ಷಮೆಯಾಚಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಇಂಡಿಗೋ, ಸಮಸ್ಯೆ ಅನುಭವಿಸಿದ ಗ್ರಾಹಕರು ಮತ್ತು ನಮ್ಮ ಉದ್ಯಮದ ಪಾಲುದಾರರಲ್ಲಿ ನಾವು ಮನಃಪೂರ್ವಕ ಕ್ಷಮೆ ಯಾಚಿಸುತ್ತೇವೆ. ಇಂಡಿಗೋ ತಂಡಗಳು ಪರಿಸ್ಥಿತಿ ನಿರ್ವಹಿಸಿ, ಸಾಮಾನ್ಯ ರೀತಿ ಕಾರ್ಯಾಚರಣೆ ನಡೆಸಲು ಡಿಜಿಸಿಎ, ಬಿಸಿಎಸಿ ಮತ್ತು ಎಎಐ ಹಾಗೂ ವಿಮಾನ ನಿಲ್ದಾಣದ ನಿರ್ವಾಹಕರ ಬೆಂಬಲದೊಂದಿಗೆ ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದೆ.
ವಿಮಾನಗಳ ಹಾರಾಟದಲ್ಲಿ ವ್ಯತ್ಯಯದ ಕಾರಣ ಪ್ರಯಾಣಿಕರು ತೀವ್ರ ಆಕ್ರೋಶಗೊಂಡಿದ್ದಾರೆ. ಹೀಗಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಏರ್??ಪೋರ್ಟ್??ನಲ್ಲಿ ಮುಂಜಾಗೃತೆ ವಹಿಸಲಾಗಿದೆ. ಭದ್ರತೆಗೆ ಟರ್ಮಿನಲ್ ೧ರಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಬಿಗಿ ಬಂದೋಬಸ್ತ್?? ಕೈಗೊಳ್ಳಲಾಗಿದೆ. ಪೊಲೀಸರ ಬಳಿಯೇ ಬಂದು ಪ್ರಯಾಣಿಕರು ಅಸಮಾಧಾನ ಹೊರಹಾಕ್ತಿರುವ ಪ್ರಸಂಗಗಳೂ ನಡೆಯುತ್ತಿವೆ.
ಒಂದೆಡೆ ಇಂಡಿಗೋ ಪ್ಲೈಟ್??ಗಳಿಲ್ಲದೆ ಏರ್?ಪೋರ್ಟ್??ನಲ್ಲಿ ಪ್ರಯಾಣಿಕರು ಪರದಾಟ ನಡೆಸುತ್ತಿದ್ದರೆ, ಮತ್ತೊಂದೆಡೆ ಪ್ರಯಾಣಿಕರಿಲ್ಲದೆ ಏರ್??ಪೋರ್ಟ್?? ಬಸ್??ಗಳು ಖಾಲಿ ಖಾಲಿಯಾಗಿವೆ. ಕೆಂಪೇಗೌಡ ವಿಮಾನ ನಿಲ್ದಾಣದಿಂದ ವಿವಿಧ ಭಾಗಗಳಿಗೆ ಸಂಚರಿಸುವ ಬಸ್??ಗಳು ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿವೆ. ಪ್ರಯಾಣಿಕರಿಗಾಗಿ ಬಿಎಂಟಿಸಿಯ ವಾಯುವಜ್ರ ಮತ್ತು ಕೆಎಸ್‌ಆರ್ಟಿಸಿಯ ಫ್ಲೈ ಬಸ್?ಗಳ ಚಾಲಕರು ಕಾದು ಕುಳಿತಿದ್ದಾರೆ. ಕಳೆದ ಮೂರು ದಿನಗಳಿಂದ ಬಿಎಂಟಿಸಿ ಕಲೆಕ್ಷನ್ ಸಂಪೂರ್ಣ ಕುಸಿತ ಕಂಡಿದ್ದು, ಪ್ರಯಾಣಿಕರಿಲ್ಲದ ಕಾರಣ ಬಸ್??ಗಳು ಖಾಲಿಯಾಗಿ ಸಂಚರಿಸಬೇಕಾದ ಸ್ಥಿತಿ ಉದ್ಭವವಾಗಿದೆ.


