ಮರದ ನಿರ್ಮಿತಿ ಕುಸಿದು ಐವರು ಸಾವನ್ನಪ್ಪಿ, 40 ಮಂದಿಗೆ ಗಾಯ

Ravi Talawar
ಮರದ ನಿರ್ಮಿತಿ ಕುಸಿದು ಐವರು ಸಾವನ್ನಪ್ಪಿ, 40 ಮಂದಿಗೆ ಗಾಯ
WhatsApp Group Join Now
Telegram Group Join Now

ಭಗ್ಪತ್​(ಉತ್ತರ ಪ್ರದೇಶ): ಜೈನ ಸಮುದಾಯದ ಕಾರ್ಯಕ್ರಮಕ್ಕೆ ನಿರ್ಮಿಸಲಾಗಿದ್ದ ಮರದ ನಿರ್ಮಿತಿ ಕುಸಿದು ಐವರು ಸಾವನ್ನಪ್ಪಿ, 40 ಮಂದಿ ಗಾಯಗೊಂಡ ಘಟನೆ ಉತ್ತರ ಪ್ರದೇಶದ ಭಗ್ಪತ್​ನ ಬರುತ್ ಎಂಬಲ್ಲಿ ಮಂಗಳವಾರ ಸಂಜೆ​ ನಡೆಯಿತು.

ಈ ಕುರಿತು ಜಿಲ್ಲಾಧಿಕಾರಿ ಅಸ್ಮಿತ ಲಾಲ್ ಪ್ರತಿಕ್ರಿಯಿಸಿ, “ಮಂಗಳವಾರ ಸಂಜೆ ಈ ಘಟನೆ ನಡೆಯಿತು. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗಾಗಲೇ 20 ಮಂದಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ” ಎಂದರು.

ಭಗ್ಪತ್​​ ಎಸ್​ಪಿ ಅರ್ಪಿತ ವಿಜಯ್​ವರ್ಗೀಯಾ ಮಾತನಾಡಿ, “ಘಟನೆಯ ತನಿಖೆ ನಡೆಯುತ್ತಿದೆ. 2-3 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ತಿಳಿಸಿದರು.

ಕಳೆದ 30 ವರ್ಷಗಳಿಂದಲೂ ಬರುತ್​ನಲ್ಲಿ ಜೈನ ಸಮುದಾಯ ಲಡ್ಡು ಮಹೋತ್ಸವ ಕಾರ್ಯಕ್ರಮ ಆಯೋಜಿಸುತ್ತಿದೆ. ಈ ಬಾರಿ ಮರದ ನಿರ್ಮಿತಿ ಕುಸಿದಿದ್ದು, ಘಟನೆ ಸಂಭವಿಸಿತು. ಜಿಲ್ಲಾಡಳಿತ ಮತ್ತು ಅಗ್ನಿ ಶಾಮಕದಳ ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯ ನಡೆಸಿದೆ” ಎಂದು ಅವರು ಮಾಹಿತಿ ನೀಡಿದರು.

WhatsApp Group Join Now
Telegram Group Join Now
Share This Article