ಬಳ್ಳಾರಿ 17: ರಾಘವ ಕಲಾಮಂದಿರದಲ್ಲಿ, ರಾಘವ ಮೆಮೋರಿಯಲ್ ಅಸೋಸಿಯೇಷನ್, ವತಿಯಿಂದ ಹಮ್ಮಿಕೊಂಡಿದ್ದ ಬಳ್ಳಾರಿ ರಾಘವರ 78ನೇ ವಾರ್ಷಿಕ ಪುಣ್ಯ ತಿಥಿ ಕಾರ್ಯಕ್ರಮವನ್ನು ಸಂಸ್ಥೆಯ ಪದಾಧಿಕಾರಿಗಳು ಜ್ಯೋತಿ ಬೆಳಗಿಸಿ, ಪುಷ್ಪಾಂಜಲಿ ಅರ್ಪಿಸುವ ಮೂಲಕ ಉದ್ಘಾಟಿಸಿದರು.
ಬಳ್ಳಾರಿ ರಾಘವರ ಬಗ್ಗೆ ನಿವೃತ್ತ ಉಪನ್ಯಾಸಕರೂ ಸಂಸ್ಥೆಯ ಕಾರ್ಯಕಾರಿಣಿ ಸದಸ್ಯರೂ ಆಗಿರುವ ಏನ್.ಬಸವರಾಜು ರವರು ಮಾತನಾಡುತ್ತಾ ನಾಟಕ ರಂಗದಲ್ಲಿ ಅದ್ವಿತೀಯ ನಟನಾಗಿ ಬಳ್ಳಾರಿಯ ಕೀರ್ತಿಯನ್ನು ಜಗತ್ತಿಗೆ ಸಾರಿದವರು.1880 ರಲ್ಲಿ ಜನಿಸಿದ ರಾಘವಾಚಾರ್ಯರು 1946 ಎಪ್ರೆಲ್ 16 ರಂದು ಹಂಪಿ ಹುಣ್ಣಿಮೆಯಂದು ಸ್ವರ್ಗಸ್ಥರಾದರು.
ಮಹಾತ್ಮ ಗಾಂಧೀಜಿ ಮತ್ತು ವಿಶ್ವಕವಿ ರವೀಂದ್ರನಾಥ ಟ್ಯಾಗೋರ್ ರವರು ರಾಘವ ರ ನಾಟಕವನ್ನು ನೋಡಿ ರಾಘವರನ್ನು ಪ್ರಶಂಸಿದರು.ಪಂಚಭಾಷೆಗಳಲ್ಲಿ ಅಭಿನಯಿಸಿದ್ದಲ್ಲದೆ ನಾಟಕರಂಗದಲ್ಲಿ ತರಬೇಕಾದ ಸುಧಾರಣೆಗಳ ಬಗ್ಗೆ ದೇಶ ವಿದೇಶಗಳಲ್ಲಿ ಸುತ್ತಿ ಅಧ್ಯಯನ ಮಾಡಿದರು.
ಕೋಲಾಚಲಂ ಶ್ರೀನಿವಾಸರಾವ್ ಮತ್ತು ಸೋದರ ಮಾವರಾಗಿದ್ದ ಆಂಧ್ರ ಚಾರಿತ್ರಿಕ ನಾಟಕ ಪಿತಾ ಮಹ ಧರ್ಮಾವರಂ ಕೃಷ್ಣಮಾಚಾರ್ಯರ ನಾಟಕಗಳಲ್ಲಿ ಅಭಿನಯಿದರು ವೃತ್ತಿಯಲ್ಲಿ ಖ್ಯಾತ ವಕೀಲರಾಗಿ ಪ್ರವೃತ್ತಿಯಲ್ಲಿ ಅದ್ಭುತ ನಟರಾಗಿ ಅಪಾರ ಸೇವೆ ಮಾಡಿ ಚಿರಸ್ಮರಣೀಯರಾಗಿದ್ದಾರೆಂದರು. ಕಾರ್ಯಕ್ರಮ ನಿರ್ವಹಣೆ ಯನ್ನು ಗೌರವ ಕಾರ್ಯದರ್ಶಿ ಗಳಾದ ಎನ್.ಪ್ರಕಾಶ್,ರವರು ನಿರ್ವಹಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಶ್ರೀ ಕೆ ಚನ್ನಪ್ಪ, ಅಧ್ಯಕ್ಷರಾದ ಶ್ರೀ ಕೆ ಕೊಟೆಶ್ವರ ರಾವ್,ಉಪಾಧ್ಯಕ್ಷ ರಾದ ಶ್ರೀ ರಮೇಶ್ ಗೌಡ ಪಾಟೀಲ್,ಶ್ರೀ ಹೆಚ್ ವಿಷ್ಣುವರ್ಧನ್ ರೆಡ್ಡಿ, ಖಜಾಂಚಿ ಶ್ರೀ ಪಿ ಧನಂಜಯ, ಜಂಟಿ ಕಾರ್ಯದರ್ಶಿ ಶ್ರೀ ಯಂ ರಾಮಾಂಜನೇಯಲು, ಕೆ.ರಾಮಾಂಜನೇಯಲು, ಚೆಲ್ಲಾ ಅಮರೇಂದ್ರ ನಾಥ ಚೌದರಿ,ಟಿ.ಜಿ.ವಿಠಲ್,ಡಾ.ರಮೇಶ ಗೋಪಾಲ್, ಕೆ ಶ್ಯಾಮ ಸುಂದರ, ಎನ್ ಯಶವಂತ ರಾಜು, ರಾಮ ಬ್ರಹ್ಮ,ವಿ ರಾಮಚಂದ್ರ,ಶೇಷ ರೆಡ್ಡಿ, ರಮಣಪ್ಪ ಭಜಂತ್ರಿ ಕಲಾವಿದರು ಭಾಗವಹಿಸಿದ್ದರು.ನಂತರ ಧಾತ್ರಿ ರಂಗ ಸಂಸ್ಥೆ ಸಿರಿಗೇರಿ ತಂಡದಿಂದ ಮತ್ತು ಶ್ರೀ ಮಹಾಂತೇಶ್ ರಾಮದುರ್ಗ ರಚನೆ – ನಿರ್ದೇಶನದಲ್ಲಿ ಸೋರುತಿಹುದು ಸಂಬಂಧ ಕನ್ನಡ ನಾಟಕ ಪ್ರದರ್ಶನ ಗೊಂಡು ಪ್ರೇಕ್ಷಕರ ಮನ ಸೂರೆ ಗೊಂಡಿತು.