ಸೋಶಿಯಲ್‌ ಮೀಡಿಯಾ ಮೂಲಕ ಪಾಕ್‌ ಉಗ್ರರೊಂದಿಗೆ ನಂಟು; ದೆಹಲಿಯಲ್ಲಿ ಐವರ ಬಂಧನ

Ravi Talawar
ಸೋಶಿಯಲ್‌ ಮೀಡಿಯಾ ಮೂಲಕ ಪಾಕ್‌ ಉಗ್ರರೊಂದಿಗೆ ನಂಟು; ದೆಹಲಿಯಲ್ಲಿ ಐವರ ಬಂಧನ
WhatsApp Group Join Now
Telegram Group Join Now

ನವದೆಹಲಿ: ದೆಹಲಿ ಪೊಲೀಸ್​​​​​​ ವಿಶೇಷ ಘಟಕವು​​​ ಸಾಮಾಜಿಕ ಜಾಲತಾಣದ ಮೂಲಕ​ ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಐವರನ್ನು ಬಂಧಿಸಿದೆ. ಆರೋಪಿಗಳಿಂದ ಸುಧಾರಿತ ಕಚ್ಛಾ ಸ್ಫೋಟಕ(ಐಇಡಿ)ಗಳನ್ನು ತಯಾರಿಸಲು ಬಳಸುವ ಕೆಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೂಲಗಳ ಪ್ರಕಾರ, ಆರೋಪಿಗಳು ಪಾಕಿಸ್ತಾನದ ಉಗ್ರ ಸಂಘಟನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಸಂಪರ್ಕದಲ್ಲಿದ್ದರು. ಈ ಎಲ್ಲಾ ಖಾತೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ತನಿಖಾಧಿಕಾರಿಗಳ ಪ್ರಕಾರ, ಈ ಭಯೋತ್ಪಾದಕ ಸಂಘಟನೆಯ ಗುಂಪಿನ ಪ್ರಮುಖ ಸದಸ್ಯ ಅಶ್ರಫ್​​​ ಡ್ಯಾನಿಷ್ ಎಂಬಾತ ಭಾರತದಿಂದ ಪಾಕ್ ಮೂಲದ ವ್ಯಕ್ತಿಗಳೊಂದಿಗೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್​ಗಳ ಮೂಲಕ ಸಂಪರ್ಕ ಸಾಧಿಸುತ್ತಿದ್ದ. ಈ ಮೂಲಕ ಭಾರತದಲ್ಲಿ ಯುವಕರನ್ನು ಮೂಲಭೂತವಾದಿಗಳನ್ನಾಗಿ ಮಾಡಲು ಮತ್ತು ಅವರನ್ನು ತಮ್ಮ ಜಾಲಕ್ಕೆ ಸೇರಿಸಿಕೊಳ್ಳಲು ಯತ್ನಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಗುಂಪು ದೇಶದಲ್ಲಿ ಕೋಮು ದ್ವೇಷ ಹರಡಲು ಮತ್ತು ಧಾರ್ಮಿಕ ಸಾಮರಸ್ಯ ಕದಡಲು ಹಲವು ಆನ್‌ಲೈನ್ ಗುಂಪುಗಳನ್ನು ನಡೆಸುತ್ತಿತ್ತು ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

ಇನ್ನೂ 4ರಿಂದ 5 ರಾಜ್ಯಗಳಲ್ಲಿ ದಾಳಿ ನಡೆಸಲಾಗುವುದು. ಸುಮಾರು ಎಂಟು ಶಂಕಿತರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇಲ್ಲಿಯವರೆಗೆ, ಐವರನ್ನು ಬಂಧಿಸಲಾಗಿದೆ. ಈ ಪೈಕಿ ಇಬ್ಬರನ್ನು ದೆಹಲಿ ಮತ್ತು ಓರ್ವನನ್ನು ಮಧ್ಯಪ್ರದೇಶ, ಹೈದರಾಬಾದ್​ ಹಾಗೂ ರಾಂಚಿಯಿಂದ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article