ಎಟಿಎಂ ಸಿಬ್ಬಂದಿಯಿಂದಲೇ ರೂ.16 ಲಕ್ಷ ಲೂಟಿ: ಐವರ ಬಂಧನ

Ravi Talawar
ಎಟಿಎಂ ಸಿಬ್ಬಂದಿಯಿಂದಲೇ ರೂ.16 ಲಕ್ಷ ಲೂಟಿ: ಐವರ ಬಂಧನ
WhatsApp Group Join Now
Telegram Group Join Now

ಬೆಂಗಳೂರು: ಸರ್ಜಾಪುರ ರಸ್ತೆಯ ದೊಡ್ಡ ಕನ್ನಹಳ್ಳಿಯ ಖಾಸಗಿ ಬ್ಯಾಂಕ್‌ ಎಟಿಎಂಗೆ ಮುಖಕ್ಕೆ ಬೆಡ್‌ಶೀಟ್‌ ಕಟ್ಟಿಕೊಂಡು ನುಗ್ಗಿ, ಯಂತ್ರವನ್ನು ಗ್ಯಾಸ್‌ ಕಟ್ಟರ್‌ನಿಂದ ಕತ್ತರಿಸಿ ದರೋಡೆ ಮಾಡಿದ ಪ್ರಕರಣ ರೋಚಕ ತಿರುವು ಪಡೆದುಕೊಂಡಿದೆ.

16.50 ಲಕ್ಷ ರೂ. ಲಪಟಾಯಿಸಿದದ್ದ ಎಟಿಎಂ ಯಂತ್ರಕ್ಕೆ ಹಣ ತುಂಬುವ ಕಂಪನಿಯ ಐವರು ಸಿಬ್ಬಂದಿಗಳನ್ನು ಬೆಳ್ಳಂದೂರು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಸೆಕ್ಯೂರ್‌ ವ್ಯಾಲ್ಯೂ ಇಂಡಿಯಾ ಲಿಮಿಟೆಡ್‌ ಕಂಪನಿಯ ಫೀಲ್ಡ್‌ ಆಪರೇಷನ್‌ ಮ್ಯಾನೇಜರ್‌ ಪ್ರತಾಪ್‌ (32), ಎಟಿಎಂ ಆಫೀಸರ್‌ ಪವನ್‌ ಕಲ್ಯಾಣ್‌ (28), ಎಟಿಎಂ ಇನ್‌ಚಾರ್ಜ್‌ ಧರ್ಮೇಂದ್ರ (52), ಮಡಿವಾಳ ಏರಿಯಾ ಬ್ರಾಂಚ್‌ ಹೆಡ್‌ ರಾಘವೇಂದ್ರ (36) ಹಾಗೂ ಅಸಿಸ್ಟೆಂಟ್‌ ಮ್ಯಾನೇಜರ್‌ ಮಹೇಶ್‌ (30) ಬಂಧಿತ ಆರೋಪಿಗಳು. ಆರೋಪಿಗಳಿಂದ 13.50 ಲಕ್ಷ ರೂ. ಜಪ್ತಿ ಮಾಡಲಾಗಿದೆ.

ಆರೋಪಿಗಳು ಜುಲೈ 1ರಂದು ಸರ್ಜಾಪುರ ರಸ್ತೆಯ ದೊಡ್ಡಕನ್ನಹಳ್ಳಿಯ ಆ್ಯಕ್ಸಿಸ್‌ ಬ್ಯಾಂಕ್‌ ಎಟಿಎಂ ಯಂತ್ರಕ್ಕೆ 16.50 ಲಕ್ಷ ರೂ. ತುಂಬಲು ಆರೋಪಿಗಳು ತೆರಳಿದ್ದರು. ಆದರೆ ಎಟಿಎಂ ಯಂತ್ರದಲ್ಲಿ ತಾಂತ್ರಿಕ ದೋಷದ ಕಾರಣ ಹಣ ತುಂಬದೆ ವಾಪಸ್‌ ಬಂದಿದ್ದರು. ಮತ್ತೆ ಜು.2ರಂದು ಹಣ ತುಂಬಲು ಹೋದಾಗಲೂ ಎಟಿಎಂ ಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಹಣ ತುಂಬಿರಲಿಲ್ಲ.

ಈ ತಾಂತ್ರಿಕ ದೋಷ ಹಾಗೂ ಹಣ ತುಂಬದೇ ಇರುವ ವಿಚಾರವನ್ನು ಆರೋಪಿಗಳು ಬ್ಯಾಂಕ್‌ಗೆ ತಿಳಿಸಿರಲಿಲ್ಲ. ಆದರೆ, ಈ ಎಟಿಎಂ ಯಂತ್ರ ದಲ್ಲಿ ಯಾವುದೇ ಹಣದ ವ್ಯವಹಾರ ನಡೆಯದೆ ಇರುವುದರಿಂದ ಅನುಮಾನಗೊಂಡ ಬ್ಯಾಂಕ್‌ ಅಧಿಕಾರಿಗಳು ಜು.6ರಂದು ಎಟಿಎಂ ಕೇಂದ್ರಕ್ಕೆ ಬಂದಾಗ ಎಟಿಎಂ ಯಂತ್ರವನ್ನು ಗ್ಯಾಸ್‌ ಕಟ್ಟರ್‌ನಿಂದ ಕತ್ತರಿಸಿ ದರೋಡೆ ಮಾಡಿರುವುದು ಬೆಳಕಿಗೆ ಬಂದಿದೆ.

WhatsApp Group Join Now
Telegram Group Join Now
Share This Article