ಹುಕ್ಕೇರಿ: ಮೀನು ಸಾಕಾಣಿಕೆ ಒಂದು ಉತ್ತಮ ಆದಾಯವಾಗಿದ್ದು, ಸ್ವ-ಸಹಾಯ ಸಂಘದ ಮಹಿಳೆಯರು ಮೀನುಗಾರಿಕೆಯಲ್ಲಿ ತೊಡಗಿ ತಮ್ಮ ಆದಾಯದ ಮೂಲವನ್ನು ಹೆಚ್ಚಿಕೊಳ್ಳಬೇಕು. ಎಂದು ಬೆಳಗಾವಿಯ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಎಲ್.ಕುಮಾರ ಹೆಳಿದರು.
ಅವರು ಬುಧವಾರ ಜರುಗಿದ ತಾಲೂಕು ಪಂಚಾಯತ ಸಭಾಭವನದಲ್ಲಿ ಸ್ವ-ಸಹಾಯ ಸಂಘದ ಮಹಿಳೆಯರಿಗೆ ಮತ್ಸ್ಯ ಸಂಜೀವಿನಿ ತರಬೇತಿಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರು ಸರಕಾರದ ಈ ಸೌಲಭ್ಯ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಿ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ತಾ.ಪಂ ಇಓ ಟಿ.ಆರ.ಮಲ್ಲಾಡದ ತಾಲೂಕಿನ ಮಹಿಳೇಯರು ಸ್ವ-ಸಹಾಯ ಸಂಘದಮೂಲಕ ಆರ್ಥೀಕ ಸಹಾಯ ಪಡೆದು ಮತ್ಸ್ಯ ಸಂಜೀವಿನಿ ಯೋಜನೆ ಹಿಟ್ನಿ, ಮತ್ತಿವಡೆ, ನಾಗನೂರ ಕೆ.ಡಿ., ಹುಲ್ಲೋಳಿ ಗ್ರಾಮ ಗಳ ಪಂಚಾಯತ ವ್ಯಾಪ್ತಿಯಲ್ಲಿ ಬರುವ ೬ ಕೆರೆಗಳಲ್ಲಿ ಮೀನು ಕೃಷಿ ಮಾಡಲು ಪಂಚಾಯತಿ ಮತ್ತು ಸಂಜೀವಿನಿ ಒಕ್ಕೂಟಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ.ಎಂದರು.
ಕೆರೆಗಳಲ್ಲಿ ಮೀನು ಕೃಷಿ ಮಾಡುವ ಮೂಲಕ ಮಹಿಳೆಯರ ಆದಾಯ ಹೆಚ್ಚಿಸುವ ಜೊತೆಗೆ ಗ್ರಾಮ ಪಂಚಾಯತಿಗೆ ತೆರಿಗೆ ಕೂಡಾ ಬರುತ್ತದೆ ಅಂತಾ ಸದುಪಯೋಗ ಮಾಡಿಕೊಳ್ಳಬೆಕು ಇಲಾಖೆಯ ಮೂಲಕ ಸಹಾಯ ಸಹಕಾರ ನಿಡುತ್ತೆವೆಂದರು.
ಹಿಡಕಲ್ ಡ್ಯಾಂ ಮೀನುಗಾರಿಕೆ ಇಲಾಖೆ ಉಪ ನಿರ್ದೆಶಕ ಇಸ್ತಿಯಾರ ಫಠಾಣ ತರಬೇತಿಯನ್ನು ನಡೆಸಿಕೊಟ್ಟರು. ತರಬೇತಿಯಲ್ಲಿ ಮೀನು ಸಾಕಾಣಿಕೆಯಲ್ಲಿ ಮೀನಿನ ಮರಿಗಳ ಬಗ್ಗೆ, ೬ ವಿದಧ ಜಾತಿಗಳಿದ್ದು ಇವುಗಳನ್ನು ಮಾತ್ರ ನಾವು ಸಾಕಾಣಿಕೆ ಮಾಡಬೇಕು. ಮೊದಲು ಕೆರೆಗಳನ್ನು ಪರಿಶೀಲನೆ ಮಾಡಿ ಯಾವ ತರಹದ ಮಣ್ಣು ಇದೆ, ಗಾತ್ರದ ಆಧಾರದಲ್ಲಿ ಯೋಜನೆ ರೂಪಿಸಕೊಳ್ಳಬೇಕು. ಕೆರೆಗೆ ಮೊದಲು ಸುಣ್ಣದ ನೀರು, ಶೆಗಣಿ ನೀರು ಬೆರೆಸವು ಮೂಲಕ ಮೀನು ಸಾಕಾಣಿಕೆಗೆ ವಾತಾವರಣ ನಿರ್ಮಿಸಬೇಕು ಎಂದರು. ಒಂದು ಮೀನು ಬೆಳೆಯಲು ಕನಿ? ೬-೯ ತಿಂಗಳು ಬೇಕಾಗುತ್ತದೆ. ಒಂದು ಎಕರೆಗೆ ೩೦೦೦೦ ಮೀನಿನ ಮರಿಗಳನ್ನು ಬಿಡಲು ಅವಕಾಶವಿದೆ. ೧೦೦೦ ಮೀನಿನ ಮರಿಗಳಿಗೆ ರೂ. ೩೦೦ ರಿಂದ ೪೦೦ ಗಳ? ಖರ್ಚಾಗುತ್ತದೆ.
ಈ ಸರ್ಭದಲ್ಲಿ ಮೀನುಗಾರಿಕೆ ಇಲಾಖೆ ಬೆಳಗಾವಿ ಉಪರ್ದೇಶಕರು ಸಿದ್ದಪ್ಪ, ಭೀಮಶಿ ಗೊರಕನಾಥ ಪ್ರಭಾರ ಟಿ.ಪಿ.ಎಂ., ಮಹಾಂತೇಶ ಬಾದವನಮಠ ಐ.ಇ.ಸಿ. ಸಂಯೋಜಕರು, ಬಾಬಾಜಿ ಪಾಟೀಲ ಬಿ.ಎಂ. ಕೃಷಿ, ಬಿ.ಎಂ. ವಿಜಯ ಕಾಂಬಳೆ ಕೃಷಿಯೇತರ, ಶ್ರೀನಿವಾಸ ಬೇಟಗಾರ ಸಿ.ಎಸ್., ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.