ಬಳ್ಳಾರಿ. ಸೆ. 20: ನಗರದ ಬಿಐಟಿಎಂ ಕಾಲೇಜಿನ ವಿದ್ಯಾರ್ಥಿನಿ ಅಲಿಯ ಸಮ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ನಲ್ಲಿ ಹಾನರ್ಸ್ ನೊಂದಿಗೆ ಪ್ರಥಮ ರ್ಯಾಂಕ್ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ಕಾಲೇಜಿನ ಪ್ರಾನ್ಸುಪಾಲರಾದ ಬಸವರಾಜ್ ತಿಳಿಸಿದರು.
ಅವರು ಇಂದು ನಗರದ ಸಿರುಗುಪ್ಪ ರಸ್ತೆಯಯಲ್ಲಿರುವ ಕಾಲೇಜಿನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ, ನಗರದ ಹೋಮ್ ಗಾರ್ಡ್ ಮುಖ್ಯಸ್ಥರಾದ ಶಕಿಬ್ ಅವರ ಪುತ್ರಿ ಅಲಿಯಾ ಸಮ ವಿದ್ಯಾರ್ಥಿನಿ ಎಲೆಕ್ಟ್ರಾನಿಕ್ ಡಿಪಾರ್ಟ್ಮೆಂಟ್ ನಲ್ಲಿ ನಮ್ಮ ಕಾಲೇಜಿನಲ್ಲಿ ಅಭ್ಯಾಸ ಮಾಡಿ ಕ್ಲಾಸ್ ಟಾಪರ್ ಆಗಿದ್ದಾರೆ. ಜೊತೆಗೆ ಅವರು 18 ವಿಷಯಗಳಿಗಿಂತ ಹೆಚ್ಚು ವಿಷಯಗಳನ್ನು ಅಭ್ಯಾಸ ಮಾಡಿ 73ಕ್ರೆಡಿಟ್ ಗಳೊಂದಿಗೆ 160ಕ್ರೆಡಿಟ್ ಜೊತೆಗೆ ಹೆಚ್ಚಿನ ಅಂದರೆ 73 ಕ್ರೆಡಿಟ್ಗಳನ್ನು ಪಡೆದುಕೊಂಡು ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ. ಪ್ರಯುಕ್ತ ಎಂದು ಶಕೀಬ್ ದಂಪತಿಗಳ ಪುತ್ರಿಯಾದ ಅಲಿಯಾ ಸಮ ಅವರನ್ನು ಕಾಲೇಜ್ ಆಡಳಿತ ಮಂಡಳಿಯಿಂದ ಸನ್ಮಾನಿಸಿ ಗೌರವಿಸುತ್ತಿದ್ದೇವೆ ಎಂದರು. ಈಗ ಸದ್ಯ ಸೀಮನ್ಸ್ ಕಂಪನಿಯಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ, ಇವರ ಸಾಧನೆಯನ್ನು ಇಂಡಿಯನ್ ಬುಕ್ಕ ಪ್ರಕಾಶ್ ನಲ್ಲಿ ದಾಖಲಿಸಲಾಗಿದೆ ಎಂದು ತಿಳಿಸಿದರು.
2021 ರಲ್ಲಿ ನಮ್ಮ ಕಾಲೇಜ್ ಅಟಾನಾಮಸ್ ಕಾಲೇಜ್ ಆಗಿ ಪರಿವರ್ತನೆಗೊಂಡಾಗಿನಿಂದ ದೇಶದಲ್ಲಿ ನಮ್ಮ ಕಾಲೇಜ್ ಕಳೆದ ಸಾಲಿನಲ್ಲಿ 73 ನೇ ಸ್ಥಾನದಲ್ಲಿದ್ದು ಈಗ 70ನೇ ಸ್ಥಾನಕ್ಕೆ ಮೇಲ್ದರ್ಜೆಗೆ ಏರಿದೆ ಎಂದು ಹರ್ಷವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾಲೇಜ್ ವತಿಯಿಂದ ಅಲಿಯಾ ಸಮ ಅವರನ್ನು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಶರಣರೆಡ್ಡಿ, ಪಿ ಆರ್ ಓ ಬಸವರಾಜ್ ಬಿಸಲಹಳ್ಳಿ ಸೇರಿದಂತೆ ಕಾಲೇಜಿನ ಸಿಬ್ಬಂದಿಗಳು, ಅಲಿಯಾ ತಂದೆ ಶಖಿಬ್ ತಾಯಿ ಮತ್ತು ತಮ್ಮ ಇದ್ದರು.