ರಾಷ್ಟ್ರೀಯ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

Sandeep Malannavar
ರಾಷ್ಟ್ರೀಯ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ
WhatsApp Group Join Now
Telegram Group Join Now

ಬೆಳಗಾವಿ ಜ., ೦೭- ಕೆ.ಎಲ್.ಎಸ್ ಸಂಸ್ಥೆಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಪಾಟ್ನಾದ ಲೆಕ್ಸ್ ವೇದಿಕಾ ಕಾನೂನು ಪತ್ರಿಕೆಯಿಂದ ಆಯೋಜಿಸಲ್ಪಟ್ಟ ಖ್ಯಾತಿಯ ರಾಷ್ಟ್ರೀಯ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು  ಗೆದ್ದಿದ್ದಾರೆ. ಈ ಸ್ಪರ್ಧೆಯು “ಸರ್ಕಾರದ ಕೃತ್ರಿಮ ಬುದ್ಧಿಮತ್ತೆಯನ್ನು ಪೊಲೀಸಿಂಗ್‌ನಲ್ಲಿ ಬಳಸುವುದು ನಾಗರಿಕರ ಗೌಪ್ಯತೆ ಮತ್ತು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆಯೇ” ಎಂಬ ಸಮಕಾಲೀನ ಪ್ರಕರಣಕ್ಕೆ ಕೇಂದ್ರೀಕೃತವಾಗಿತ್ತು. ನೀಹಾರಿಕಾ ಮಿಶ್ರಾ, ನೆತ್ರಾವತಿ ಫಟಕಲ್ ಮತ್ತು ಆರ್ಯ ಹಂಜಿ ಅವರು ಭಾರತಾದಾದ್ಯಂತದ 21ಕ್ಕೂ ಹೆಚ್ಚು ತಂಡಗಳನ್ನು ಹಿಂದಿಕ್ಕಿ ₹10,000 ನಗದು ಪ್ರತಿಯನ್ನು ಗೆದ್ಡಿದರು. ಈ ಸ್ಪರ್ಧೆಯು  ಎಐಯ ಪಾತ್ರಕ್ಕೆ ಬೆಳೆಯುತ್ತಿರುವ ಆತಂಕಗಳನ್ನು ಎತ್ತಿ ತೋರಿಸಿತು.

ಕರ್ನಾಟಕ ಕಾನೂನು ಸಂಸ್ಥೆಯ  ಅಧ್ಯಕ್ಷ ಪಿ.ಎಸ್.  ಸಾವಕಾರ , ನಿರ್ವಹಣಾ ಮಂಡಳಿ ಅಧ್ಯಕ್ಷ  .ಕೆ. ತಗಾರೆ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಆರ್.ಎಸ್. ಮುತಾಲಿಕ್, ನಿರ್ವಹಣಾ ಸದಸ್ಯರು, ಪ್ರಾಂಶುಪಾಲ ಡಾ. ಎ.ಎಚ್. ಹವಾಲ್ದಾರ್, ಮೂಟ್ ಕೋರ್ಟ್ ವಿಭಾಗ ಅಧ್ಯಕ್ಷ ಸಹಾಯಕ ಪ್ರಾಧ್ಯಾಪಕ ಅಶ್ವಿನಿ ಪರಬ್, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಗೆಲುವಿನ ತಂಡವನ್ನು ಅಭಿನಂದಿಸಿದ್ದಾರೆ.

WhatsApp Group Join Now
Telegram Group Join Now
Share This Article