ಬೆಳಗಾವಿ.ಇಂದಿನಿಂದ ಜಾರಿಯಾದ ನೂತನ ಜಿ ಎಸ್ ಟಿ ಕಾಯ್ದೆಯನ್ನು ಭಾಜಪಾ ಬೆಳಗಾವಿ ಉತ್ತರ ಮಂಡಲದ ವತಿಯಿಂದ ನಗರದ ಹುತಾತ್ಮ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ಹಂಚಿ ಸ್ವಾಗತಿಸಲಾಯಿತು.
ರೈತರ, ಬಡವರ, ಮಧ್ಯಮ ವರ್ಗದ ಜನರ ಹೊಸ ಆಶಾಕಿರಣವಾಗಿ ಬಂದಿರುವ ನೂತನ ಜಿ ಎಸ್ ಟಿ ಕಾಯ್ದೆ ಈ ಎಲ್ಲರ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸಲಿದೆ. ಈ ಸಂಭ್ರಮಾಚರಣೆಯಲ್ಲಿ ಬೆಳಗಾವಿ ಉತ್ತರ ಮಂಡಲದ ಅಧ್ಯಕ್ಷರಾದ ವಿಜಯ ಕೊಡಗನೂರ, ಮಹಾನಗರ ಜಿಲ್ಲೆಯ ಉಪಾಧ್ಯಕ್ಷರಾದ ಮಹಾಂತೇಶ ವಕ್ಕುಂದ, ವಿನೋದ ಲಂಗೋಟಿ ಸೇರಿದಂತೆ ಭಾಜಪಾದ ಪ್ರಮುಖ ಕಾರ್ಯಕರ್ತರು, ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನ ಯಶಸ್ವಿಗೊಳಿಸಿದರು.


