ಬೆಂಗಳೂರು: ಇನ್ನು ಮುಂದೆ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಓವರ್‌ಸ್ಪೀಡ್‌ನಲ್ಲಿ ಚಲಾಯಿಸುವವರು ಹುಷಾರಾಗಿರಬೇಕು. ರ್ಯಾಶ್ ಡ್ರೈವಿಂಗ್ ಮಾಡುವವರು ಕಂಬಿ ಎಣಿಸುವ ದಿನಗಳು ಬಂದಿವೆ. ಹೈವೇಯಲ್ಲಿ ಹಿಡಿಯೋರಿಲ್ಲ ಎಂದು ಓವರ್‌ಸ್ಪೀಡ್ ಹೋದರೆ ನಿಮ್ಮ ಮೇಲೆ ಎಫ್‌ಐಆರ್ ದಾಖಲಾಗಲಿದೆ.
ನಿನ್ನೆ ಮೈಸೂರು ಬೆಂಗಳೂರು ಹೈವೇ ಸಿಸಿಟಿವಿಗಳನ್ನು ಸಂಚಾರಿ ಮತ್ತು ರಸ್ತೆ ಸುರಕ್ಷತೆ ಎಡಿಜಿಪಿ ಅಲೋಕ್ ಕುಮಾರ್ ಪರಿಶೀಲನೆ ಮಾಡಿದ್ದರು. ಪರಿಶೀಲನೆ ವೇಳೆ ಒಂದೇ ದಿನ 150ಕ್ಕೂ ಹೆಚ್ಚು ಅತಿ ವೇಗದ ಚಾಲನೆ ಕೇಸ್‌ಗಳು ಪತ್ತೆಯಾಗಿವೆ. ಇದರಿಂದ ಓವರ್‌ಸ್ಪೀಡ್‌ಗೆ ಬ್ರೇಕ್ ಹಾಕಲು ಎಡಿಜಿಪಿ ಅಲೋಕ್ ಕುಮಾರ್ ಹೊಸ ಅಸ್ತ್ರ ಕೈಗೆತ್ತಿಕೊಂಡಿದ್ದು, ಆಗಸ್ಟ್ 1ರಿಂದ ಅದನ್ನು ಚಲಾಯಿಸಲಿದ್ದಾರೆ.