ಟ್ರೈನಿ ಐಎಎಸ್​ ಅಧಿಕಾರಿ ಪೂಜಾ ಖೇಡ್ಕರ್ ವಿರುದ್ಧ ಎಫ್​ಐಆರ್​

Ravi Talawar
ಟ್ರೈನಿ ಐಎಎಸ್​ ಅಧಿಕಾರಿ ಪೂಜಾ ಖೇಡ್ಕರ್ ವಿರುದ್ಧ ಎಫ್​ಐಆರ್​
WhatsApp Group Join Now
Telegram Group Join Now

ಮಹಾರಾಷ್ಟ್ರದ ವಿವಾದಿತ ಟ್ರೈನಿ ಐಎಎಸ್​ ಅಧಿಕಾರಿ ಪೂಜಾ ಖೇಡ್ಕರ್ ವಿರುದ್ಧ ಕೇಂದ್ರ ಲೋಕಸೇವಾ ಆಯೋಗ ಫೋರ್ಜರಿ ಪ್ರಕರಣದಡಿಯಲ್ಲಿ ಎಫ್​ಐಆರ್​ ದಾಖಲಿಸಿದೆ.

ಐಎಎಸ್ ಅಕಾಡೆಮಿಗೆ ಹಾಜರಾಗಲು ಜುಲೈ 23ರವರೆಗೆ ಗಡುವು ನೀಡಲಾಗಿತ್ತು, ಇಲ್ಲಿಯವರೆಗೂ ಪೂಜಾ ಆ ಕಡೆ ತಲೆ ಹಾಕಿಲ್ಲ. ಪೂಜಾ ಅವರು ದುಷ್ಕೃತ್ಯದ ಮೂಲಕ ತಮಗೆ ಅನುಮತಿಸಿದ್ದ ಮಿತಿಯನ್ನು ಮೀರಿ ಹಲವು ಪ್ರಯತ್ನಗಳನ್ನು ಪಡೆದಿರುವುದು ತನಿಖೆಯಿಂದ ಗೊತ್ತಾಗಿದೆ. ಹೀಗಾಗಿ ಇವರ ನೇಮಕಾತಿಯನ್ನೇ ರದ್ದುಗೊಳಿಸುವಂತ ಗಂಭೀರ ಕ್ರಮ ಕೈಗೊಳ್ಳಲು ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ ಎಂದಿದೆ.

ಅಂತೆಯೇ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ತಮಗೆ ಅನುಮತಿಸಿದ್ದ ಮಿತಿಗೂ ಮೀರಿದ ಪ್ರಯತ್ನ ಪಡೆಯಲು ಪೂಜಾ ಅವರು ನಕಲಿ ದಾಖಲೆಗಳನ್ನು ಸಲ್ಲಿಸಿರುವುದು ತನಿಖೆಯಿಂದ ತಿಳಿದುಬಂದಿದೆ.

ಇದರಲ್ಲಿ ಅವರ ಹೆಸರು ಬದಲಾವಣೆ, ತಂದೆ ಹಾಗೂ ತಾಯಿಯ ಹೆಸರು ಬದಲಿಸಿರುವುದು, ಭಾವಚಿತ್ರ ಬದಲಾವಣೆ ಹಾಗೂ ಸಹಿ ಮತ್ತು ಇ–ಮೇಲ್ ವಿಳಾಸ, ಮೊಬೈಲ್‌ ಮತ್ತು ಮನೆಯ ವಿಳಾಸವನ್ನು ಬದಲಿಸುವ ಮೂಲಕ ತಮ್ಮ ಗುರುತು ಮರೆಮಾಚಿ ಆಯೋಗವನ್ನು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪೂಜಾ ಅವರ ತರಬೇತಿಯನ್ನು ತಡೆಹಿಡಿಯಲಾಗಿದೆ. ಮಸ್ಸೂರಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್​ಗೆ ಅವರು ನಿನ್ನೆಯ ಒಳಗೆ ರಿಪೋರ್ಟ್ ಮಾಡಿಕೊಳ್ಳಬೇಕಿತ್ತು.

ಜುಲೈ 16 ರಂದು ಮಹಾರಾಷ್ಟ್ರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನಿತಿನ್ ಗಾದ್ರೆ ಅವರು ಪೂಜಾ ಖೇಡ್ಕರ್ ಅವರಿಗೆ ಪತ್ರ ಬರೆದು, ಸರ್ಕಾರದೊಂದಿಗೆ ಅವರ ತರಬೇತಿ ಅವಧಿಯನ್ನು ಕೊನೆಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಪೂಜಾ ಖೇಡ್ಕರ್ ಅವರು ಅಕಾಡೆಮಿಗೆ ವರದಿ ಮಾಡಿಲ್ಲ ಅಥವಾ ಪತ್ರಕ್ಕೆ ಉತ್ತರಿಸಿಲ್ಲ ಎಂದು ಮೂಲಗಳು ತಿಳಿಸಿವೆ.

 

WhatsApp Group Join Now
Telegram Group Join Now
Share This Article