ನೇಸರಗಿ. ಜಿಲ್ಲಾ ಪಂಚಾಯತ್ ವ್ಯಾಪ್ತಿಯ ದೊಡ್ಡ ಗ್ರಾಮ ನೇಸರಗಿ ಗ್ರಾಮದಲ್ಲಿ ಹಳ್ಳಿ ಸೊಗಡಿನ ಸಂಪೂರ್ಣ ಹಳ್ಳಿಗಳಲ್ಲಿಯೇ ಚಿತ್ರೀಕರಣ ಮತ್ತು ಕಥೆ, ಹಂದರ, ಹಳ್ಳಿಯ ಸಂಸ್ಕೃತಿ ಬಿಂಬಿಸುವ ” ಊರಿನ ಗ್ರಾಮಸ್ಥರಲ್ಲಿ ವಿನಂತಿ ಚಿತ್ರದ ಚಿತ್ರೀಕರಣವು ಗ್ರಾಮದ ಪೇಟೆ ಓಣಿ, ಕರ್ನಾಟಕ ಚೌಕ ಪ್ರದೇಶಗಲ್ಲಿ ಅನೇಕ ಕಲಾವಿದರಿಂದ ನಟನೆಯ ಹಾಗೂ ನೃತ್ಯದ ಹಾಡುಗಳ ಚಿತ್ರೀಕರಣ ಕಳೆದ 3 ದಿನಗಳಿಂದ ಅದ್ದೂರಿಯಾಗಿ ನೆರವೇರಿತು.
ಹಳ್ಳಿ ಹಳ್ಳಿಗೆ ಹೋಗಿ ನಾಟಕ ಮಾಡಿ ಅಲ್ಲಿ ಸಂಗ್ರಹಿಸಿದ ಹಣದಿಂದ ಜೀವನ ಸಾಗಿಸುವ ಹಿಂದಿನ ಕಲಾವಿದರ ಜೀವನ ಆಧಾರಿಸಿ ಚಿತ್ರಕಥೆ ಬರೆಯಲಾಗಿದೆ ಎಂದು ಚಲನಚಿತ್ರ ಚಿತ್ರಕಥೆ,ನಿರ್ದೇಶಕರಾದ ಎಮ್ ವಾಯ್. ಕೃಷ್ಣ ಹೇಳಿದರು. ನೂರಾರು ನೂತನ ಉತ್ಸಾಹಿ, ಯುವ ಟ್ಯೂಬ್ ಕಲಾವಿದರಿಗೆ ನಟನೆಗೆ ಅವಕಾಶ ನೀಡಲಾಗಿದೆ ಎಂದರು. ಈ ಚಲನಚಿತ್ರವನ್ನು ಭದ್ರಾವತಿ ಮೂವಿ ಮೇಕರ್ಸ ಅಡಿ ನಿರ್ಮಾಣ ಆಗುತ್ತಿದ್ದು, ಚಲನಚಿತ್ರಕ್ಕೆ ಸುಮಾರು 4 ಕೋಟಿ ರೂಪಾಯಿಗಳ ಖರ್ಚು ಆಗಬಹುದು ಎಂದು ನಿರ್ಮಾಪಕ ಕುಮಾರ ಭದ್ರಾವತಿ ಹೇಳಿದರು.
ತಾರಂಗಣದಲ್ಲಿ ಶಿವರಾಜ ಕೆ ಆರ ಪೇಟ, ವಿನೋದ ಆನಂದ, ಹಾರ್ನಿಲ, ನವ ನಟಿ ರಮ್ಯಾ, ಇನ್ನೂ ಅನೇಕ ಹೊಸ ನುರಿತ ಯುವ್ ಟ್ಯೂಬ್ ಕಲಾವಿದರನ್ನು ಪರಿಚಯಿಸಲಾಗುತ್ತಿದೆ. ಈಗಾಗಲೇ ಕೊಯಿರಾ, ಗುಂಡ್ಲುಪೇಟ, ಹತ್ತಿಗುಪ್ಪೆ, ನೇಸರಗಿಯಲ್ಲಿ ಇನ್ನೂ ಎರಡು ದಿನ ವೀರಭದ್ರೇಶ್ವರ ದೇವಸ್ಥಾನ, ಪ್ರಾಚೀನ ವಾಸ್ತುಶಿಲ್ಪ ಜೋಡಗುಡಿ, ಕಲ್ಮೇಶ್ವರ ದೇವಸ್ಥಾನಗಲ್ಲಿ ಚಿತ್ರೀಕರಣ, ನಂತರ ಚಚಡಿ ಗ್ರಾಮದಲ್ಲಿ ಚಿತ್ರೀಕರಣ ನಡೆಯಲಿದ್ದು ಇಲ್ಲಿನತನಕ ಸುಮಾರು 70% ಚಿತ್ರೀಕರಣವಾಗಿದೆ. ಚಿತ್ರಕ್ಕೆ ಸಂಗೀತ. ವಂಶಿ, ಸಹ ನಿರ್ದೇಶಕರು. ಮದು ಮಿಲಿಂದ, ಶಿವಕುಮಾರ ಇವರದು ಇರಲಿದೆ.
ಕಳೆದ 3 ದಿನಗಳಿಂದ ನಡೆಯಿತ್ತಿರುವ ಚಿತ್ರೀಕರಣವನ್ನು ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು, ಶಾಲೆ, ಕಾಲೇಜು ವಿದ್ಯಾರ್ಥಿಗಳ ತಂಡ ಬಹಳ ಪ್ರಮಾಣದಲ್ಲಿ ಆಗಮಿಸುತ್ತಿದ್ದು ಚಲನಚಿತ್ರದ ಚಿತ್ರೀಕರಣ ನೋಡಿ ಸಂಭ್ರಮಿಸುತ್ತಿದ್ದಾರೆ.