ಬಳ್ಳಾರಿ. ಸೆ. ೨೬: ವಿಜಯ ದಶಮಿ ಪ್ರಯುಕ್ತ ಐದನೇ ದಿನದ ಅಂಗವಾಗಿ ಇಂದು ಶುಕ್ರವಾರದಂದು
ಇಂದಿನ ಅಲಂಕಾರ ಅನ್ನಪೂರ್ಣ ದೇವಿಗೆ,
ನವದುರ್ಗೆಯರಲ್ಲಿ ಕೂಷ್ಮಾಂಡ ದುರ್ಗಾ ಗೆ, ದಶಮಹಾ ವಿದ್ಯೆಗಳಲ್ಲಿ ಧೂಮವತಿ ದೇವಿ ಗೆ ಹಾಗೆಯೇ ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ ತ್ರಿಶಕ್ತಿ ರೂಪಗಳಿಗೆ ಕುಂಕುಮಾರ್ಚನೆ ಸಹಸ್ರನಾಮ ಹಾಗೆಯೇ ಕದಂಬ ವೃಕ್ಷಕ್ಕೆ ವಿಶೇಷ ಪೂಜೆಗಳನ್ನು ನಡೆಸಲಾಯಿತು.
ಹೀಗೆಯೇ ದಿನಕ್ಕೊಂದರಂತೆ ವಿಶೇಷ ಅಲಂಕಾರಗಳೊಂದಿಗೆ ವಿಜಯ ದಶಮಿವರೆಗೆ ಪೂಜೆಗಳು ನಡೆಯುತ್ತವೆ. ಆದ್ದರಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸೀತಾರಾಮ ಆಶ್ರಮಮ್ ಟ್ರಸ್ಟ್ ನ ಪದಾಧಿಕಾರಿಗಳು, ಸದಸ್ಯರು ಭಕ್ತರಲ್ಲಿಕೊರಿದ್ದಾರೆ.
ಸೀತಾರಾಮ ಆಶ್ರಮದಲ್ಲಿ ಐದನೇ ದಿನದ ಶರನ್ನವರಾತ್ರಿ ಉತ್ಸವ


