ಫೀಲ್ಡ್ ಮಾರ್ಷಲ್  ಕೆ ಎಂ ಕಾರ್ಯಪ್ಪನವರ ಪುಣ್ಯ ಸ್ಮರಣೆ

Ravi Talawar
ಫೀಲ್ಡ್ ಮಾರ್ಷಲ್  ಕೆ ಎಂ ಕಾರ್ಯಪ್ಪನವರ ಪುಣ್ಯ ಸ್ಮರಣೆ
WhatsApp Group Join Now
Telegram Group Join Now
 ಧಾರವಾಡ: ಭಾರತೀಯ ಸೇನೆಯ ಪ್ರಥಮ ದಂಡನಾಯಕ ಹೆಮ್ಮೆಯ ಕನ್ನಡಿಗ, ಫೀಲ್ಡ್ ಮಾರ್ಷಲ್  ಕೆ ಎಂ ಕಾರ್ಯಪ್ಪನವರ ಪುಣ್ಯ ಸ್ಮರಣೆಯ ಸಂದರ್ಭದಲ್ಲಿ ಅವರ ಅಪ್ರತಿಮ ದೇಶಸೇವೆ ಶೌರ್ಯ ಸಾಹಸ ಶಿಸ್ತಿನ ಗುಣಗಳನ್ನು ಆದರ ಪೂರ್ವಕವಾಗಿ ಸ್ಮರಿಸೋಣ ಎಂದು ನಿವೃತ್ತ ಬ್ರಿಗೇಡಿಯರ್ ಸುಧೀಂದ್ರ ಇಟ್ನಾಳ ಇವರು ಹೇಳಿದರು.  ಶ್ರೀಯುತರು ಫೀಲ್ಡ್ ಮಾರ್ಷಲ ಕೆ ಎಂ ಕಾರ್ಯಪ್ಪನವರ ಪುಣ್ಯ ಸ್ಮರಣೆಯಂಗವಾಗಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಕಾರ್ಗಿಲ ಸ್ಥೂಪದಲ್ಲಿ ಫೀಲ್ಡ ಮಾರ್ಷಲ ಕೆ ಎಂ ಕಾರ್ಯಪ್ಪನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು ಮುಂದುವರೆದು ಮಾತನಾಡಿದ ಅವರು ಕೆ ಎಂ ಕಾರ್ಯಪ್ಪನವರು ಕಮಾಂಡರ ಇನ್ ಚೀಫ ಆಗಿ ನೇಮಕವಾದ ಜನೇವರಿ ೧೫ ರಂದೇ ಪ್ರತಿವರ್ಷ ಸೇನಾ ದಿನವನ್ನು ಆಚರಿಸಲಾಗುತ್ತದೆ ಅವರ ಜೀವನ ಚರಿತ್ರೆ ಸಾಹಸಗಾಥೆ ಎಲ್ಲರಿಗೂ ಪ್ರೇರಣೆಯಾಗಿದೆ ಎಂದರು.
         ಈ ಸಂದರ್ಭದಲ್ಲಿ ಚಂದ್ರಶೇಖರ ಅಮಿನಗಡ,  ಉದಯ ಯಂಡಿಗೇರಿ , ಬಸವರಾಜ ತಾಳಿಕೋಟಿ , ಬಸವರಾಜ ವಸ್ತ್ರದ, ಪಂಡಿತ್ ಮುಂಜಿ, ತಿಮ್ಮಪೂರ ವೀರಭದ್ರ ನವಲಗುಂದ ಶಿರಿಯಣ್ಣವರ ಅಲ್ಲದೆ ನಿವೃತ್ತ ಯೋಧರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article