ಜಮಖಂಡಿ: ನಗರದ ಎಸ್.ಆರ್.ಎ. ಕ್ಲಬ್ ಸಭಾ ಭವನದಲ್ಲಿ ಅಂತರಾಷ್ಟಿಯ ಫೋಟೋಗ್ರಾಫರ ದಿನಾಚರಣೆ ಕರ‍್ಯಕ್ರಮದಲ್ಲಿ ನಗರದ ಹಿರಿಯ ವೃತ್ತಿನಿರತ ಛಾಯಾ ಚಿತ್ರಗ್ರಾಹಕ ಅಶೋಕ ಜೋಶಿ ಮತ್ತು ತಾಲೂಕಿನ ಹಿಪ್ಪರಗಿ ಗ್ರಾಮದ ಈರನಗೌಡ ಪಾಟೀಲ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಲಯನ್ಸ್ ಸಂಸ್ಥೆ ಡಾ.ಎಂ.ಪಿ.ತಾನಪ್ಪಗೋಳ, ಕಾರ್ಯದರ್ಶಿ ಆನಂದ ಚೌಗಲಾ, ಖಜಾಂಚಿ ರಮೇಶ ಕೋರಿ, ನಾಡೋಜ ಡಾ.ಹೆಚ್.ಜಿ.ದಡ್ಡಿ, ಡಾ.ರಂಗನಾಥ ಸೋನವಾಲ್ಕರ, ಡಾ.ಶ್ರೀಶೈಲ ತೇಲಿ, ಎಂ.ಡಿ. ಕುಂಬಾರ, ರಾಜು ಅಕ್ಕಿ, ಸುನೀಲ ಮುರಗೋಡ, ಚಿನ್ಮಯ ಜಿರಲಿ, ವಿಜಯ ಕಟಗಿ, ಚಿದಾನಂದ ಚೆಟ್ಟರ, ಶಿದ್ರಾಮ ಶಿವಾಪೂರ ಸಹಿತ ಹಲವರು ಇದ್ದರು.