ಹಿಂದೂ  ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ಕಠಿಣ ಕ್ರಮಕ್ಕೆ  ಸುಭಾಷ ಪಾಟೀಲ ಅಗ್ರಹ

Ravi Talawar
ಹಿಂದೂ  ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ಕಠಿಣ ಕ್ರಮಕ್ಕೆ  ಸುಭಾಷ ಪಾಟೀಲ ಅಗ್ರಹ
WhatsApp Group Join Now
Telegram Group Join Now
ಬೆಳಗಾವಿ.ನಿನ್ನೆ  ಜಿಲ್ಲೆಯ ಹುಕ್ಕೇರಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ
ಮಾರಣಾಂತಿಕ ಹಲ್ಲೆ ನಡೆಸಿದವರನ್ನು ಪೋಲಿಸ ವಶಕ್ಕೆ ಪಡೆದು ಸೂಕ್ತ ಕಾನೂನಾತ್ಮಕವಾಗಿ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಪೋಲಿಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂದೆ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಿತು.
ಮಾಧ್ಯಮದವರೊಂದಿಗೆ  ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ಮಾತನಾಡಿ ಇತ್ತಿಚಿಗೆ ಬೆಳಗಾವಿ ಜಲ್ಲೆಯ ಹುಕ್ಕೇರಿ
ತಾಲೂಕಿನ ಇಂಗಳಿ ಗ್ರಾಮದಲ್ಲಿ ನಡೆದ ಹಿಂದೂ ಕಾರ್ಯಕರ್ತರ ಮೇಲಿನ ಹಲ್ಲೆಯನ್ನು ಭಾರತೀಯ ಜನತಾ ಪಾರ್ಟಿ
ತೀವೃವಾಗಿ ಖಂಡಿಸುತ್ತದೆ, ಗೋ ಶಾಲೆಯಿಂದ ಗೋವುಗಳನ್ನು ತೆಗೆದುಕೊಂದು ಹೋಗಿದ್ದನ್ನು ನೋಡಿ
5 ಜನ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಪ್ರಶ್ನೆ ಮಾಡಿದ್ದಾರೆ. ಪ್ರಶ್ನೆ ಮಾಡಿದ್ದಕ್ಕೆ ದಲ್ಲಾಲಿಗಳು ಹಿಂದೂ
ಕಾರ್ಯಕರ್ತರನ್ನು ಮರಕ್ಕೆ ಕಟ್ಟಿ ಹಾಕಿ ಮನಸೋಇಚ್ಚೆ ತಳಿಸಿದ್ದಾರೆ, ಈ ಕೃತ್ಯದ ವಿಡಿಯೋಗಳು ಇಗಾಗಲೇ ಸಾಮಾಜಿಕ
ಜಾಲತಾಣದಲ್ಲಿ ಮತ್ತು ಸುದ್ದಿ ಮಾದ್ಯಮದಲ್ಲಿ ಹರಿದಾಡುತ್ತಿವೆ.
ಈ ಘಟನೆಯು ಯಮಕನಮರಡಿ ಪೋಲಿಸ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಹಿಂದೂ ಕಾರ್ಯಕರ್ತರು ನಂತರ ಪೋಲಿಸ ಠಾಣೆಗೆ ದೂರು ದಾಖಲಿಸಲು ಹೋದಾಗ ಹಿಂದೂ ಕಾರ್ಯರ್ತರನ್ನು
ಅವಾಚ್ಯ ಶಬ್ದಗಳಿಂದ ನಿಂದಿಸಿ ದೂರು ದಾಖಲಿಸಿಕೊಳ್ಳದೇ ಉದ್ಧಟತನ ಪ್ರದರ್ಶಿಸಿದ್ದಾರೆ. ಪೋಲಿಸರು ಯಾರ ಕುಮ್ಮಕ್ಕಿನಿಂದ
ಈ ರೀತಿ ಮಾಡಿದ್ದಾರೆಂದು ತಿಳಿಯಬೇಕಾಗಿದೆ
ತಾವು ಈ ಕೂಡಲೇ ಈ ಪ್ರಕರಣಕ್ಕೆ ಸಂಬಂದಪಟ್ಟ ವಿಡಿಯೋದಲ್ಲಿ ಕಾಣಿಸಿರುವ
ಹಲ್ಲೆಕೊರರನ್ನು ಬಂಧಿಸಿ ಅವರ ಮೇಲೆ ಎಫ್.ಐ.ಆರ್ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇವೆ.
ಹಾಗೂ ಉದ್ಧಟತನ ಮೆರದ ಪೋಲಿಸ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಅಗ್ರಹಿಸಿದರು.
ಹಲ್ಲೆಗೊಳಗಾದ ಹಿಂದೂ ಕಾರ್ಯಕರ್ತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದರು. ಇದೇ ವೇಳೆ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಅವರು ಆಗಮಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
     ಈ ಸಂದರ್ಭದಲ್ಲಿ ಮುಖಂಡ ಬಸವರಾಜ ಹುಂದ್ರಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ ದೇಶಪಾಂಡೆ, ಮಲ್ಲಿಕಾರ್ಜುನ ಮಾದಮ್ಮನವರ, ಧನಶ್ರೀ ದೇಸಾಯಿ, ಮುರುಗೇಂದ್ರಗೌಡ ಪಾಟೀಲ, ಈರಯ್ಯ ಖೋತ, ಜಿಲ್ಲಾ ಉಪಾಧ್ಯಕ್ಷ ಬಸನಗೌಡ ಕೊಳದೂರ, ಜಿಲ್ಲಾ ಮಾಧ್ಯಮ ಪ್ರಮುಖ ಸಚಿನ್ ಕಡಿ, ಜಿಲ್ಲಾ ಕೋಶಾಧ್ಯಕ್ಷ ಸಂತೋಷ ದೇಶನೂರ, ಮುಖಂಡರಾದ ಧನಂಜಯ ಜಾಧವ, ರಾಜೇಶ ನೆರ್ಲಿ, ಶಿವಾನಂದ ಹನುಮಸಾಗರ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮಹಾಂತೇಶ ಚಿನ್ನಪ್ಪಗೌಡ್ರ, ಶ್ರೀಕರ ಕುಲಕರ್ಣಿ,ಮನೋಜ ಪಾಟೀಲ, ಪ್ರಶಾಂತ ಅಮ್ಮಿನಭಾವಿ, ಮಹಾಂತೇಶ ವಕ್ಕುಂದ, ಪಂಡಿತ ಓಗಲೆ, ಪ್ರಸಾದ್ ದೇವರಮನಿ, ಆನಂದ ಬಾಗೋಡಿ, ಶ್ವೇತಾ ಜಗದಾಳೆ, ವೀರಭದ್ರ ಪೂಜಾರಿ, ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article