ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಅವ್ಯವಹಾರ; ಸಿಬಿಐ ತನಿಖೆಗೆ ಆಗ್ರಹಿಸಿ ನಾಳೆಯಿಂದ ರೈತರ ಅನಿರ್ದಿಷ್ಟ ಧರಣಿ

Ravi Talawar
ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಅವ್ಯವಹಾರ; ಸಿಬಿಐ ತನಿಖೆಗೆ ಆಗ್ರಹಿಸಿ ನಾಳೆಯಿಂದ ರೈತರ ಅನಿರ್ದಿಷ್ಟ ಧರಣಿ
WhatsApp Group Join Now
Telegram Group Join Now

ಚನ್ನಮ್ಮನ ಕಿತ್ತೂರು: ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಖಾರ್ಕಾನೆಯಲ್ಲಿ ನಡೆದ ಅವ್ಯವಹಾರಗಳ ಪ್ರಕರಣವನ್ನು ಸಿ.ಬಿ.ಆಯ್ ತನಿಕೆಗೆ ಆದೇಶ ನೀಡುವ ವರೆಗೆ ಅನಿರ್ದಿಷ್ಠಾವಧಿ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾ ಸಂಘ (ಒಕ್ಕೂಟ)ದ ಪದಾಧಿಕಾರಿಗಳು ಸರ್ವ ಸದಸ್ಯರು ಹಾಗೂ ಕಾರ್ಖಾನೆ ಶೇರುದಾರರು ಹಾಗೂ ರೈತರು ಗುರುವಾರ ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ಸುದ್ದಿ ಗೋಷ್ಢಿ ನಡೆಸಿ ತಿಳಿಸಿದರು.

ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದಾಗಿನಿಂದ ಅನೇಕ ಅವ್ಯವಹಾರಗಳನ್ನು ಮಾಡುವ ಮೂಲಕ ಕಾರ್ಖಾನೆಯನ್ನು ಅವನತಿ ಅಂಚಿಗೆ ತಂದು ನಿಲ್ಲಿಸಿದ್ದಾರೆ. ಸರಕಾರಗಳು ರೈತರಿಗೆ ಅನುಕೂಲವಾಗಲಿ ಎಂದು ಸಹಕಾರಿ ಕ್ಷೇತ್ರಕ್ಕೆ ಕೋಟ್ಯಾತಂರ ರೂಪಾಯಿ ಹಣ ಖರ್ಚು ಮಾಡುತ್ತಿವೆ ಆದರೆ ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಈಗಿರುವ ಆಡಳಿತ ಮಂಡಳಿ ಕೇಂದ್ರ ಮತ್ತು ರಾಜ್ಯ ಸರಕಾರ ನೀಡಿದ ಸಹಾಯ ಧನವನ್ನು ಆಡಳಿತ ಮಂಡಳಿ ದುರುಪಯೋಗ ಮಾಡಿಕೊಂಡು ಕಾರ್ಖಾನೆಗೆ ಹಾನಿ ಮಾಡಿದೆ ಎಂದು ಕಳೆದ ಎರಡು ವರ್ಷಗಳ ಹಿಂದೆ ರೈತ ಸಂಘಟನೆಗಳು ಹಾಗೂ ಶೇರುದಾರರು ಮತ್ತು ಈ ಭಾಗದ ರೈತರು ಸುಮಾರು ಐದು ದಿನಗಳ ಹೋರಾಟ ಮಾಡಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರು ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಅನೇಕ ಹೋರಾಟಗಳು ನಡೆಯುತ್ತಿದ್ದರು ಪ್ರಸ್ತುತ ಇರುವ ಆಡಳಿತ ಮಂಡಳಿ ಕಾರ್ಖಾನೆಗೆ ಅನ್ಯಾಯ ಮಾಡುವುದನ್ನು ನಿಲ್ಲಿಸುತ್ತಿಲ್ಲ. ಈ ಕಾರ್ಯದಲ್ಲಿ ಆಡಳಿತ ಮಂಡಳಿಯೊಂದಿಗೆ ಕಾರ್ಖಾನೆಯ ಪ್ರಮುಖ ಆಡಳಿತ ಅಧಿಕಾರಿಗಳು ಹಾಗೂ ಈ ಹಿಂದಿನ ವ್ಯವಸ್ಥಾಪಕ ನಿರ್ದೇಶಕರುಗಳು ಕೂಡ ಕೈ ಜೋಡಿಸಿ ಕಾರ್ಖಾನೆ ಅವನತಿಗೆ ಕಾರಣರಾಗಿದ್ದಾರೆ.

2021 ಜುಲೈ 26 ರಂದು ಬೆಳಗಾವಿ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಕಿತ್ತೂರು ತಹಶೀಲ್ದಾರರ ಸೋಮಲಿಂಗಪ್ಪ ಹಾಲಗಿ ಅವರು ಕಾರ್ಖಾನೆಯಿಂದ ಸಕ್ಕರೆ ಸಾಗಿಸುತ್ತಿದ್ದ 4 ಲಾರಿ ವಶಕ್ಕೆ ಪಡೆದು ಪರಿಶೀಲಿಸಿ ಇನ್‌ವೈಸ್‌ನಲ್ಲಿ ನಮೂದಿಸಿದಕ್ಕಿಂತ ಹೆಚ್ಚು ಸಕ್ಕರೆ ಲಾರಿಗಳಲ್ಲಿ ಸಾಗಿಸಲಾಗುತ್ತಿತ್ತು ಎಂದು ಆರೋಪಿಸಿ ವರದಿಯಲ್ಲಿ ಸಲ್ಲಿಸಿರುತ್ತಾರೆ. (ಇದೆ ರೀತಿ ಬೇನಾಮಿ ಸುಮಾರು 1 ಲಕ್ಷ ಕ್ವಿಂಟಲ್ ಸಕ್ಕರೆ ಅಂದಾಜು 350 ಕ್ಕೂ ಹೆಚ್ಚು ಲಾರಿಗಳಲ್ಲಿ ಸಕ್ಕರೆ ಸಾಗಾಟವಾಗಿದೆ ಎಂದು ಕಂಡು ಬಂದಿದೆ.)

ಕಾರ್ಖಾನೆಯವರು ಸರಕಾರಕ್ಕೆ ಹಾಗೂ ಸಕ್ಕರೆ ಆಯುಕ್ತರಿಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸಕ್ಕರೆ ಸ್ಟಾಕ್ 136.5 ಕ್ವಿಂಟಲ್ ಇದೆ ಎಂದು ಮಾಹಿತಿ ನೀಡಿದ್ದರು ಆದರೆ ಬಾಕಿ ಬಿಲ್ ಹಾಗೂ ಅವವ್ಯಾಹಾರದ ವಿರುದ್ಧ 2021 ನವೆಂಬರ 23 ರಂದು ರೈತರು ಹೋರಾಟ ಮಾಡಿ ಸಕ್ಕರೆ ಸ್ಟಾಕ್ ಎಷ್ಟು ಇದೆ ಎಂದು ಕಾರ್ಖಾನೆ ಆಡಳಿತ ಮಂಡಳಿ ತಿಳಿಸಬೇಕು ಎಂದು ಒತ್ತಾಯಿಸಿದರಿಂದ ಹೋರಾಟದ ಎರಡನೇ ದಿನ ಅಧ್ಯಕ್ಷ ನಾಸೀರ ಬಾಗವಾನ ಹಾಗೂ ವ್ಯವಸ್ಥಾಪಕ ನಿರ್ದೇಶಕ ವಿಶ್ವನಾಥ ಹಿರೇಮಠ ಹಾಗೂ ಸರ್ವ ನಿರ್ದೇಶಕರು 13800 ಕ್ವಿಂಟಲ್ ಸಕ್ಕರೆ ಇದೆ ಎಂದು ಮಾಹಿತಿ ನೀಡಿದರು ಆದರು ರೈತರು ತಮ್ಮ ಹೋರಾಟ ಮುಂದುವರೆಸಿ ಗೋದಾಮಿನಲ್ಲಿ ಇದ್ದ ಸಕ್ಕರೆ ಚೀಲ ಎಣಿಕೆಯನ್ನು ಹಿಂದಿನ ಕಿತ್ತೂರು ತಹಶೀಲ್ದಾರ, ಬೈಲಹೊಂಗಲ ಡಿವೈಎಸ್‌ಪಿ, ಕಿತ್ತೂರು ಸಿಪಿಆಯ್ ಹಾಗೂ ಪಿಎಸ್‌ಆಯ್ ಸಮ್ಮುಖದಲ್ಲಿ ಎಣಿಕೆ ಮಾಡಿದ್ದರಿಂದ ಹೋರಾಟದ ಐದನೇ ದಿನ ಕಾರ್ಖಾನೆ ಗೋದಾಮಿನಲ್ಲಿ 18412 ಕ್ವಿಂಟಲ್ ಸಕ್ಕರೆ ದೊರೆತ್ತಿದೆ. ಈ ಎರಡು ಸಕ್ಕರೆ ವಿವರಣೆಯನ್ನು ಕಾರ್ಖಾನೆ ಲೇಟರ್ ಪ್ಯಾಡ್‌ನಲ್ಲಿ ವ್ಯವಸ್ಥಾಪಕ ನಿರ್ದೇಶಕರು ಮಾಹಿತಿ ನೀಡಿದ್ದಾರೆ. ಆದರೆ 18412 ಕ್ವಿಂಟಲ್ ಸಕ್ಕರೆ ಏನ್ನು ಮಾಡಿದ್ದಾರೆ ಎಂದು ಮಾಹಿತಿ ಇದುವರೆಗೂ ದೊರೆಯುತ್ತಿಲ್ಲ.

ಸಾಗಾಣಿಕೆ ಮತ್ತು ಕಟಾವಕ್ಕಾಗಿ ಮುಂಗಡ ಹಣವನ್ನು ಹಿಂದಿನ ವ್ಯವಸ್ಥಾಪಕರುಗಳು ಕಾರ್ಯ ನಿರ್ವಹಿಸುತ್ತಿರುವ ವೇಳೆ ಒಂದು ಬಾರಿ ರೂ 5 ಕೋಟಿ, ಮತ್ತೋಮ್ಮೆ ರೂ 02. ಕೋಟಿ 50 ಲಕ್ಷ ಇದೇ ರೀತಿ ಸುಮಾರು ಬಾರಿ ಮುಂಗಡ ಹಣವಾಗಿ ರೂ 37 ಕೋಟಿ 50 ಲಕ್ಷ ಹಣ ನೀಡಲಾಗಿದ್ದು ಈ ಹಣ ವಸೂಲಿಗೆ 254 ಕೇಸ್ ದಾಖಲಿಸಿದ್ದು ಅವು ಯಾವ ಹಂತದಲ್ಲಿ ಇವೆ ಎಂದು ಯಾರಿಗು ಗೊತ್ತಿಲ್ಲಾ.

ಈಗಿರುವ ಆಡಳಿತ ಮಂಡಳಿ ಚುನಾವಣಾ ಸಂದರ್ಭದಲ್ಲಿ ಪ್ಯಾನಲ್‌ಗೆ ಪೂರ್ಣ ಬಹುಮತ ದೊರೆತರೆ 2017-18 ನೇ ಸಾಲಿನ 594 ರೂ ರೈತರಿಗೆ ನೀಡಬೇಕಾದ ಕಬ್ಬಿನ ಬಾಕಿ ಬಿಲ್ ಒಂದು ವಾರದಲ್ಲಿ ನೀಡುವುದಾಗಿ ಬರವಸೆ ನೀಡಿದ್ದರು. ಅದರಲ್ಲಿ 200 ರೂ ಮಾತ್ರ ನೀಡಿದ್ದಾರೆ ಇನ್ನು 394 ರೂ ಬಾಕಿ ಉಳಿಸಿಕೊಂಡಿದ್ದಾರೆ. ಸುಮಾರು 1400 ರೈತರ ಅಂದಾಜು ರೂ 5 ಕೋಟಿ 51 ಲಕ್ಷ 600 ಕಬ್ಬಿನ ಬಾಕಿ ಬಿಲ್ ನೀಡಬೇಕಾಗಿದೆ.

ಹೊಸದಾಗಿ 1600 ಶೇರ್ ಮಾಡಲಾಗಿದೆ ಅದರಿಂದ ಸುಮಾರು ರೂ 3 ಕೋಟಿ 22 ಲಕ್ಷ 56 ಸಾವಿರ ರೂಪಾಯಿ ಜಮೆಯಾಗೆದೆ ಜಮೆಯಾದ ಹಣ ಯಾವುದಕ್ಕೆ ಬಳಕೆ ಮಾಡಿದ್ದಾರೆ ಎಂಬುವುದನ್ನು ತನಿಖೆ ಮಾಡಬೇಕು.

ಕಂಬದ ತಂತಿ ಬೆಲಿ ನಿರ್ಮಾಣ ಹಾಗೂ ಕಾರ್ಖಾನೆ ಆವರಣದಲ್ಲಿ ಇರುವ ವಸತಿ ಗೃಹಗಳನ್ನು ನೆಲ ಸಮ ಮಾಡಲಾಗಿದೆ ಈಗಿರುವ ಕಾರ್ಖಾನೆ ಪರಿಸ್ಥಿತಿಯಲ್ಲಿ ಇದನ್ನೇಲ ಮಾಡುವ ಅವಶ್ಯಕತೆ ಇತ್ತಾ? ಮಾಡಬೇಕಾದರೆ ಇದನ್ನು ಯಾವ ಮಹಾ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದ್ದಾರೆ ಇದಕ್ಕೆ ಎಷ್ಟು ಖರ್ಚು ಮಾಡಲಾಗಿದೆ ಎಂಬುವುದು ತಿಳಿದು ಬಂದಿಲ್ಲ. ಮಹಾ ಸಭೆಯಲ್ಲಿ ತಿರ್ಮಾಣ ತೆಗೆದುಕೊಳ್ಳದೆ ವೇ ಬ್ರಿಜ್ (ತೂಕದ) ನವೀಕರಣ ಮಾಡಲಾಗಿದೆ. ಗಂಧಕ ರಹೀತ ಯಂತ್ರಗಳನ್ನು ತೆರವು ಮಾಡಲಾಗಿದೆ. ಇದೇ ರೀತಿ ಅನೇಕ ಚಟುವಟಿಕೆ ಮಾಡುವ ಮೂಲಕ ಕಾರ್ಖಾನೆಯನ್ನು ಅವನತಿಯ ಅಂಚಿಗೆ ತಂದಿದ್ದಾರೆ ಅದಕ್ಕಾಗಿ ಕಾರ್ಖಾನೆಯಲ್ಲಿ ನಡೆದ ಈ ಎಲ್ಲ ಅವ್ಯವಹಾರಗಳ ವಿರುದ್ದ ನಾಳೆ (ಸೆ 20) ರಂದು ಕಾರ್ಖಾನೆ ಆವರಣದಲ್ಲಿರುವ ಆಡಳಿತ ಕಛೇರಿ ಎದುರು ಈ ಪ್ರಕರಣವನ್ನು ಸಿ.ಬಿ.ಆಯ್ ತನಿಕೆಗೆ ಆದೇಶ ನೀಡುವ ವರೆಗೆ ಅನಿರ್ದಿಷ್ಠಾವಧಿ (ಅಹೋರಾತ್ರಿ) ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾ ಸಂಘ (ಒಕ್ಕೂಟ)ದ ಪದಾಧಿಕಾರಿಗಳು ಸರ್ವ ಸದಸ್ಯರು ಹಾಗೂ ಕಾರ್ಖಾನೆ ಶೇರುದಾರರು ಹಾಗೂ ರೈತರು ತಿಳಿಸಿದ್ದಾರೆ.

ಈ ವೇಳೆ ಭೀರಪ್ಪ ದೇಶನೂರ, ಬಸವರಾಜ ಮೋಕಾಶಿ, ಬಸಮಗೌಡ ಪಾಟೀಲ, ರುದ್ರಪ್ಪ ಕೊಡ್ಲಿ, ಸುರೇಶ ಕರವಿನಕೊಪ್ಪ, ಶಿವನಪ್ಪಾ ವಾಲಿ, ಸೈಯದಷಾ ಪೀರಜಾದೆ, ಆದ್ಮ ಹೊಂಗಲ, ಸೇರಿದಂತೆ ಅನೇಕರು ಇದ್ದರು.

WhatsApp Group Join Now
Telegram Group Join Now
Share This Article