ಹಸಿರು ಕ್ರಾಂತಿ ವರದಿ, ಜಮಖಂಡಿ; ಕಬ್ಬಿನ ಬೆಳೆಗೆ ಸರ್ಕಾರ ನಿಗದಿ ಪಡಿಸಿರುವ 3300 ರೂಗಳನ್ನು ನೀಡುವದಾಗಿ ಓಪ್ಪಿರುವ ಸಕ್ಕರೆ ಕಾರ್ಖಾನೆಗಳು ಇದಕ್ಕಾಗಿ ಅಧುಕೃತ ಮುಚ್ಚಳಿಕೆ ಪತ್ರ ನೀಡದೇ ಕಾರ್ಖಾನೆಗಳನ್ನು ಪ್ರಾರಂಭಿಸಿದ್ದನ್ನು ಪ್ರಶ್ನಿಸಿ ಸೋಮವಾರ ರೈತರು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ತಾಲೂಕಿನ ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆ ಹಾಗೂ ಜಮಖಂಡಿ ಶುಗರ್ಸ ನವರು ಸರ್ಕಾರದ ಅದೇಶಿಸಿರುವ ಬೆಲೆಯನ್ನು ಅಧಿಕೃತ ಮುಚ್ಚಳಿಕೆ ಮೂಲಕ ರೈತರಿಗೆ ತಿಳಿಸದೇ ಕಾರ್ಖಾನೆಗಳನ್ನು ಪ್ರಾರಂಭಿಸಲು ಮುಂದಾಗಿದ್ದಾರೆ, ಬಾಕಿ ಉಳಿಸಿ ಕೊಂಡಿರುವ ಬಿಲ್‌ನ ಬಗ್ಗೆಯೂ ಚಕಾರ ಎತ್ತಿಲ್ಲವಾದ್ದರಿಂದ ಅಧಿಕಾರಿಗಳು ಮಧ್ಯ ಪ್ರವೇಶಿಸಿ, ಕಾರ್ಖಾನೆಯ ಮಾಲಿಕರಿಗೆ ಸೂಕ್ತ ನಿರ್ದೇಶನ ನೀಡಬೇಕು ಮತ್ತು ಸರ್ಕಾರದ ಅದೇಶವನ್ನು ಪಾಲಿಸುವಂತೆ ತಾಕೀತು ಮಾಡಬೇಕೆಂದು ರೈತರು ಮನವಿ ಸಲ್ಲಿಸಿದು.
ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಮನವಿ ಸ್ವೀಕರಿಸಿ ಮಾತನಾಡಿ ಖುದ್ದಾಗಿ ಮುಖ್ಯಮಂತ್ರಿಗಳೇ ತಿಳಿಸಿರುವಂತೆ ಬಾಗಲಕೋಟೆ ಜಿಲ್ಲೆಯ ಎಲ್ಲಾ ಸಕ್ಕರೆ ಕಾರ್ಖಾನೆಗಳು 3300 ರೂ.ಗಳ ಬೆಲೆ ನೀಡಬೇಕು ಎಂಬುದನ್ನು ಎಲ್ಲ ಕಾರ್ಖಾನೆ ಮಾಲಿಕರು ಒಪ್ಪಿ ಕೊಂಡಿದ್ದಾರೆ. ಇನ್ನರೆಡು ದಿನಗಳಲ್ಲಿ ನಿರಾಣಿ ಹಾಗೂ ಜಮಖಂಡಿ ಸಕ್ಕರೆ ಕಾರ್ಖಾನೆಗಳ ಅಧಿಕೃತ ದರ ನಿಗದಿಯ ಕುರಿತು ಘೋಷಣೆ ಮಾಡಲಿದ್ದಾರೆ ರೈತರು ವಿಚಲಿತರಾಗದೇ ತಮ್ಮ ಕಾರ್ಯಗಳಲ್ಲಿ ತೊಡಗಬೇಕು ಎಂದು ತಿಳಿಸಿದರು. ಸರ್ಕಾರ ರೈತರ ಪರ ವಾಗಿ ಕೆಲಸ ಮಾಡುತ್ತಿದೆ. ರೈತರ ಸಮಸ್ಯೆಗೆ ಸ್ಪಂಧಿಸಲಾಗಿದೆ. ಬಾಕಿ ಬಿಲ್‌ಗಳ ಪಾವತಿಗೆ ಎಲ್ಲ ಕಾರ್ಖಾನೆಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ತಹಸೀಲ್ದಾರ ಅನೀಲ ಬಡಿಗೇರ, ಸಿಪಿಐ ಮಲ್ಲಪ್ಪ ಮಡ್ಡಿ, ಪಿಎಸ್‌ಐ ಅನೀಲ ಕುಂಬಾರ ಸ್ಥಳದಲ್ಲಿದ್ದರು. ರೈತ ಮುಖಂಡರಾದ ರಾಜು ನದಾಫ, ಶ್ರೀಶೈಲ ಭೂಮಾರ, ಡಾ.ಅಜಯ ಕುಲಕರ್ಣಿ, ಸಿದ್ದುಗೌಡ ಪಾಟಿಲ, ಸದಾಶಿವ ಕಲೂತಿ, ಸುರೇಶ ಹಂಚಿನಾಳ, ಗೂಡುಸಾಬ, ಕಲ್ಲಪ್ಪ ದೇಸಾಯಿ, ದಾನಗೌಡ ಶ್ರೀಶೈಲ ಮೈಗೂರ ಸೇರಿದಂತೆ ಅನೇಕರು ಇದ್ದರು.


