ಯರಗಟ್ಟಿಯಲ್ಲಿ ಮುಂದುವರೆದ ರೈತರ ಪ್ರತಿಭಟನೆ

Pratibha Boi
ಯರಗಟ್ಟಿಯಲ್ಲಿ ಮುಂದುವರೆದ ರೈತರ ಪ್ರತಿಭಟನೆ
WhatsApp Group Join Now
Telegram Group Join Now

ಯರಗಟ್ಟಿ: ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಐದನೇ ದಿನವೂ ರೈತರ ಪ್ರತಿಭಟನೆ ಮುಂದುವರೆದಿದ್ದು, ರೈತರ ರಸ್ತೆ ತಡೆಯಿಂದ ದಿನವಿಡಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ರೈತರು ರಸ್ತೆ ಮೇಲೆಯೇ ಅಡುಗೆ ಮಾಡಿ ಊಟ ಮಾಡಿದರು.ಬೆಂಬಲ ಬೆಲೆ ಘೋ?ಣೆ ಆಗುವವರೆಗೆ ಈ ಹೋರಾಟ ಮುಂದುವರೆಯುತ್ತದೆ ಎಂದು ರೈತ ಮುಖಂಡರು ಮಹಾಂತೇಶ ತೋಟಗಿ ತಿಳಿಸಿದ್ದು.ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಸೋಮು ರೈನಾಪೂರ ಮಾತನಾಡಿದ ಶುಕ್ರವಾರ ಯರಗಟ್ಟಿ ಸಂಪೂರ್ಣ ಬಂದ್ ಇರುತ್ತದೆ ಮತ್ತು ಸರಕಾರ ೨೪ ಗಂಟೆ ಒಳಗೆ ಬೆಂಬಲ ಬೆಲೆ ಘೋ?ಣೆ ಮಾಡಬೇಕು ಎಂದು ಆಗ್ರಹಿಸಿದರು.ಈ ವೇಳೆ ಪಂಚನಗೌಡ ದ್ಯಾಮನಗೌಡರ, ಕುಮಾರ ಹಿರೇಮಠ, ಡಾ. ವಿಶ್ವನಾಥ ತಾವಂಶಿ, ವಿರೇಶ ಸೋಬರದಮಠ, ಉದಯ ಕರ್ಜಗಿಮಠ, ಶಂಕರೆಪ್ಪ ವಜ್ರಮಟ್ಟಿ, ಕೃಷಿ ಸಮಾಜದ ರಾಜ್ಯಾಧ್ಯಕ್ಷ ಮಾಣಿಕ್ಯ ಚಿಲ್ಲೂರ, ನಿರ್ಮಾಲಾ ಹನಸಿ, ಗೂಳಪ್ಪ ಕುಂಬಾರ, ಬಾಳಪ್ಪ ತಡಸಿ, ಯಕ್ಕೇರೆಪ್ಪ ತಳವಾರ, ಬಸವರಾಜ ಬಿಜ್ಜೂರ, ಯಲ್ಲನಾಯ್ಕ ನಾಯ್ಕರ, ಸಂತೋ? ದೇವರಡ್ಡಿ, ರಂಗಪ್ಪ ಗಂಗರಡ್ಡಿ, ಸೋಮು ರೈನಾಪೂರ, ರಾಮಕೃ? ಎಳ್ಳಮ್ಮಿ, ಲಕ್ಕಪ್ಪ ಬಿಜ್ಜನವರ, ಮಹಾದೇವ ಯಂಡ್ರಾವಿ, ಸಿಂಧೂರ ತೆಗ್ಗಿ, ಮುತ್ತು ವೀರಾಪೂರ, ಹಾಗೂ ಸವದತ್ತಿ, ಮುನವಳ್ಳಿ, ಮತ್ತು ಸುತ್ತಲಿನ ರೈತರು ಇದ್ದರು.

 

WhatsApp Group Join Now
Telegram Group Join Now
Share This Article