ಧಾರವಾಡ ಕೆಐಎಡಿಬಿ ಕಚೇರಿ ಎದುರು ವಿಜಯಪುರ ಜಿಲ್ಲೆಯ ಮುಳವಾಡ ಗ್ರಾಮದ ರೈತರ ಉಪವಾಸ ಸತ್ಯಾಗ್ರಹ 

Ravi Talawar
ಧಾರವಾಡ ಕೆಐಎಡಿಬಿ ಕಚೇರಿ ಎದುರು ವಿಜಯಪುರ ಜಿಲ್ಲೆಯ ಮುಳವಾಡ ಗ್ರಾಮದ ರೈತರ ಉಪವಾಸ ಸತ್ಯಾಗ್ರಹ 
WhatsApp Group Join Now
Telegram Group Join Now
 ಧಾರವಾಡ: ವಿಜಯಪುರ ಜಿಲ್ಲೆಯ ಕೋಲಾರ ತಾಲೂಕಿನ ಮುಳವಾಡ ಗ್ರಾಮದ ರೈತರ ಜಮೀನು ಸ್ವಾಧೀನಪಡಿಸಿಕೊಂಡ ಕೆಐಎಡಿಬಿ ರೈತರಿಗೆ ಒಂದೇ ಕಂತಿನಲ್ಲಿ ಪರಿಹಾರ ವಿತರಿಸದೇ ಮೋಸ ಮಾಡಿದೆ ಎಂದು ಆರೋಪಿಸಿ ಮುಳವಾಡ ಭೂ ಹಿತರಕ್ಷಣಾ ನಿರಾಶ್ರಿತರ ರೈತ ಸಂಘದ ನೇತೃತ್ವದಲ್ಲಿ ರೈತರು ಗುರುವಾರದಿಂದ ಧಾರವಾಡ ಕೆಐಎಡಿಬಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಮುಳವಾಡ ಗ್ರಾಮದಲ್ಲಿ ಕೈಗಾರಿಗೆ ಪ್ರದೇಶಾಭಿವೃದ್ಧಿ ಮಂಡಳಿ 3,230 ಎಕರೆ ಜಮೀನವನ್ನು 2012ರಲ್ಲಿ ಸ್ವಾಧೀನ ಪಡಿಸಿಕೊಂಡಿದೆ. ಈ ಜಮೀನಿಗೆ ನ್ಯಾಯಯುತ ಪರಿಹಾರವನ್ನು ಒಂದೇ POGO ಪರಿಹಾರ ವಿತರಿಸದೇ ಹಂತ
ಹಂತವಾಗಿ ಪರಿಹಾರ ವಿತರಿಸುತ್ತಾ ಬಂದಿದ್ದು ರೈತರಿಗೆ ದೊಡ್ಡಮಟ್ಟದಲ್ಲಿ ಮೋಸವಾಗಿದೆ ಎಂದು ಆರೋಪಿಸಿದರು. ರೈತರ ಜಮೀನಿನಲ್ಲಿ ಬರುವಂತಹ ಮನೆ, ಗಿಡ, ಮರಗಳ, ಕೊಳವೆ ಬಾವಿಗಳಿಗೆ ಪರಿಹಾರ ನೀಡಿಲ್ಲ. ನಮಗೆ ಪರಿಹಾರ ನೀಡುವವರೆಗೂ ರೈತರೆಲ್ಲರೂ ಲಕ್ಕಮ್ಮನಹಳ್ಳಿ ಕೆ.ಐ.ಎ.ಡಿ.ಬಿ. ಕಚೇರಿ ಎದುರು ಉಪವಾಸ ನಡೆಸಿದ್ದೇವೆ ಎಂದರು. ಬೇಡಿಕೆ ಈಡೇರುವವರೆಗೂ ನಿರಂತರ ಸತ್ಯಾಗ್ರಹ ಮುಂದುವರಲಿದೆ ಎಂದು ರೈತರು ತಿಳಿಸಿದ್ದಾರೆ.
ಸಂಘದ ಅಧ್ಯಕ್ಷ ಶಿವಾನಂದ ಕೆಂಗಲಗುತ್ತಿ, ಬಸವರಾಜ ಬೀಳಗಿ, ಅರ್ಜುನ ಹರಿಜನ, ಶ್ರೀಶೈಲ. ಕೆಂಗಲಗುತ್ತಿ, ರವಿ ಪಾಟೀಲ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಧಾರವಾಡ ಕೆಐಎಡಿಬಿ ಕಚೇರಿ ಎದುರು ವಿಜಯಪುರ ಜಿಲ್ಲೆಯ ಕೋಲಾರ ತಾಲೂಕಿನ ಮುಳವಾಡ ಗ್ರಾಮದ ರೈತರ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ
WhatsApp Group Join Now
Telegram Group Join Now
Share This Article