ಯರಗಟ್ಟಿ : ’ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಬೆಳೆ ಸಾಲ ನೀಡಲಾಗುತ್ತಿದೆ. ಸಾಲ ಪಡೆದ ರೈತರು ನಿಗದಿತ ಅವಧಿಯೊಳಗೆ ಮರು ಪಾವತಿಸಬೇಕು. ಒಂದು ದಿನ ತಡವಾದರೂ ಶೇಕಡ ೧೨ರ? ಬಡ್ಡಿ ಕಟ್ಟಬೇಕಾಗುತ್ತದೆ’ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕಿ ಎಚ್ಚರಿಸಿದರು
ಸಮೀಪದ ಸತ್ತಿಗೇರಿ ಗ್ರಾಮದ ಮಳಿಮಲ್ಲೇಶ್ವರ ಕೃಷಿ ಪತ್ತಿನ ಸಹಕಾರ ಸಂಘದಿಂದ ರೈತರಿಗೆ ಮಂಜೂರು ಮಾಡಿದ್ದ ನಾಲ್ಕು ಕೋಟಿ ಸಾಲವನ್ನು ಶನಿವಾರ ವಿತರಿಸಿ ಅವರು ಮಾತನಾಡಿದರು.
ಮಾಜಿ ಶಾಸಕ ದಿ. ಆನಂದ ಮಾಮನಿಯವರ ಅವಧಿಯಲ್ಲಿ ರೈತರಿಗೆ ಬೆಳೆಸಾಲ, ಟ್ರ್ಯಾಕ್ಟರ್ ಸಾಲ ಸೇರಿದಂತೆ ಅನೇಕ ಸಾಲ ಸೌಲಭ್ಯಗಳನ್ನ ಮಾಡಿ ಅವರ ಬೆನ್ನಿಗೆ ನಿಂತಿದ್ದರು. ಬೇರೆ ಯಾವುದೇ ರಾಜ್ಯದಲ್ಲೂ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಬೆಳೆ ಸಾಲ ನೀಡುತ್ತಿಲ್ಲ. ಕರ್ನಾಟಕದಲ್ಲಿ ಮಾತ್ರ ನೀಡಲಾಗುತ್ತಿದೆ. ಬೆಳೆ ಸಾಲ ಮಿತಿಯನ್ನು ? ೨ ಲಕ್ಷದವರೆಗೂ ವಿಸ್ತರಿಸಲಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದಾಗ ಬೆಳೆ ಸಾಲವನ್ನು ಮನ್ನಾ ಮಾಡಲಾಗಿದೆ. ಕಾಂಗ್ರಾಸ್ ಸರ್ಕಾರ ಯಾವುದೇ ಕಾರಣಕ್ಕೂ ಸಾಲ ಮನ್ನಾ ಮಾಡುವುದಿಲ್ಲವೆಂದು ಹೇಳಿದೆ. ಹಾಗಾಗಿ, ಸಾಲ ಪಡೆದಿರುವ ರೈತರು ಮೈ ಮರೆಯಬಾರದು. ಸಾಲ ಪಡೆದ ಪೂರ್ಣ ಹಣವನ್ನು ಅವಧಿಗಿಂತ ಮುಂಚಿತವಾಗಿ ಮರುಪಾವತಿಸಬೇಕು ಎಂದರು.
ಸಾನಿಧ್ಯವನ್ನು ಚಂದ್ರಶೇಖರ ಶಿರ್ವಾಚಾರ್ಯ ಸ್ವಾಮಿಜಿ, ಅಧ್ಯಕ್ಷತೆಯನ್ನು ಪಿಕೆಪಿಎಸ್ ಅಧ್ಯಕ್ಷ ಮಹಾಂತೇಶ ಗೋಡಿ, ಪಿಕೆಪಿಎಸ್ ಉಪಾಧ್ಯಕ್ಷ ಪರ್ವಾತೆವ್ವ ಹರಳಿ, ವಹಿಸಿದ್ದರು ಗ್ರಾ. ಪಂ. ಅಧ್ಯಕ್ಷ ಗುರು ವಾಲಿ, ಮಾಜಿ ಜಿ. ಪಂ. ಸದಸ್ಯ ಅಜೀತಕುಮಾರ ದೇಸಾಯಿ, ಮಾಜಿ ತಾ. ಪಂ. ಅಧ್ಯಕ್ಷ ಪರ್ವಗೌಡ ಪಾಟೀಲ, ರೈನಾಪೂರ ಪಿಕೆಪಿಎಸ್ ಅಧ್ಯಕ್ಷ ವಿಠ್ಠಲ ಬಂಟನೂರ, ಈರಣ್ಣಾ ಚಂದರಗಿ, ಪಿಕೆಪಿಎಸ್ ಸದಸ್ಯರಾದ ಗೌರವ್ವ ಪಾಟೀಲ, ಸುಶೀಲಾ ವಾಲಿ, ಲಕ್ಷ್ಮಣ ಹೆಗಡಿ, ಇಬ್ರಾಹಿಂಸಾಬ ಮುಲ್ಲಾ, ಶ್ರೀಶೈಲ ಸವದತ್ತಿ, ಗುರುಪಾದ ಗೋಡಿ, ಬಸವರಾಜ ಮುನ್ಯಾಳ, ಷಣ್ಮುಖ ಬಳಿಗಾರ, ದುರಗಪ್ಪ ಬಂಡಿವಡ್ಡರ, ನಿಂಗಪ್ಪ ತುರಮಂದಿ, ಬ್ಯಾಂಕ್ ನೀರಿಕ್ಷಕರಾದ ಎಸ್. ಎಸ್. ಗೋಣಿ, ಬ್ಯಾಂಕ್ ವ್ಯವಸ್ಥಾಪಕ ಎಂ. ಎಂ. ಸಿದ್ದನ್ನವರ, ಮುಖ್ಯ ಕಾರ್ಯನಿರ್ವಾಹಕ ಸಂಗಮೇಶ ಸಂಗಪ್ಪನ್ನವರ ಸೇರಿದಂತೆ ಅನೇಕರು ಇದ್ದರು.