ಬಳ್ಳಾರಿ.ಮೇ 17: ತಾಲೂಕಿನ ಹದ್ದಿನಗುಂಡುನಿಂದ ಚಾಗನೂರು ಕಪ್ಪಗಲ್ಲು, ಸಿರಿವಾರ, ಬಾಲಾಜಿನಗರ ಕ್ಯಾಂಪ್, ಶ್ರೀಧರಗಡ್ಡೆ, ಲಕ್ಷ್ಮೀನಗರ, ಸೋಮಸಮುದ್ರ ಮಾರ್ಗದಿಂದ
ಕೊಳಗಲ್ ಮಾರ್ಗಕ್ಕೆ ರೈಲ್ವೆ ಟ್ರ್ಯಾಕ್ ಹಾಕುವುದಕ್ಕೆ ಡ್ರೋನ್ ಸರ್ವೆ ಕಾರ್ಯ ಮಾಡುತ್ತಿದ್ದು ಈ ಪ್ರದೇಶವು ಬಳ್ಳಾರಿ ನಗರಕ್ಕೆ ಹತ್ತಿರ ಮತ್ತು ಸದರಿ ಜಮೀನುಗಳು ಕೃಷಿ ಜಮೀನು ಗಳಾಗಿರುವುದರಿಂದ ಸದರಿ ರೇಲ್ವೆ ಟ್ರ್ಯಾಕನ್ನು ಬೇರೆ ಕಡೆಗೆ ಬದಲಾಯಿಸಬೇಕೆಂದು ಮೇಲ್ಕಂಡ ಗ್ರಾಮದ ರೈತರುಗಳು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿ ಒತ್ತಾಯಿಸಿದರು.
ಬಳ್ಳಾರಿ ತಾಲೂಕು ವ್ಯಾಪ್ತಿಯಲ್ಲಿ ಬರುವ ಹದ್ದಿನಗುಂಡು ನಿಂದ ಚಾಗನೂರು ಕಪ್ಪಗಲ್ಲು, ಸಿರಿವಾರ, ಬಾಲಾಜಿನಗರ ಕ್ಯಾಂಪ್, ಶ್ರೀಧರಗಡ್ಡೆ, ಲಕ್ಷ್ಮೀನಗರ, ಸೋಮಸಮುದ್ರ ಮಾರ್ಗದಿಂದ ಕೊಳಗಲ್ ಮಾರ್ಗಕ್ಕೆ ರೈಲ್ವೆ ಟ್ರ್ಯಾಕ್
ಹಾಕುವುದಕ್ಕೆ ಡ್ರೋನ್ ಸರ್ವೆ ಕಾರ್ಯ ಮಾಡಿ ಮಾರ್ಕ್ ಮಾಡಿರುತ್ತಾರೆ. ಈ ಟ್ರ್ಯಾಕ್ ವ್ಯಾಪ್ತಿಗೆ ಒಳಪಡುವ ಪ್ರದೇಶದಲ್ಲಿ ಕೇವಲ ಒಂದು ಮತ್ತು ಎರಡು ಎಕರೆ ಹಾಗೂ ತುಂಡು ನೀರಾವರಿ ಭೂಮಿಗಳನ್ನು
ಹೊಂದಿರುವ ಅದರಲ್ಲೂ ಎಸ್.ಸಿ, ಎಸ್.ಟಿ ರೈತರು ಹೆಚ್ಚಿನ ಸಂಖ್ಯೆಯಲ್ಲಿರುವವರು ಅಲ್ಪ ಜಮೀನುಗಳನ್ನು
ಜೀವನೋಪಾಯಕ್ಕಾಗಿ ಹೊಂದಿರುತ್ತಾರೆ. ಈ ಜಮೀನುಗಳಲ್ಲಿ ರೇಲ್ವೆ ಟ್ರ್ಯಾಕ್ ಬಂದಲ್ಲಿ ಈ ರೈತ ಕುಟುಂಬಗಳೆಲ್ಲಾ ಬೀದಿಗೆ ಬೀಳುವ ಸಂಭವವಿದೆ .ಅಲ್ಲದೇ ಈ ಪ್ರದೇಶದಲ್ಲಿ ಅನೇಕ ವಾಣಿಜ್ಯ ಮತ್ತು ವಸತಿ ಲೇಔಟ್ ಗಳು ಇದ್ದು ಇವುಗಳ ಅಭಿವೃದ್ಧಿಯೂ ಸಹ ಕುಂಠಿತವಾಗುತ್ತದೆ.
ಆದ್ದರಿಂದ ತಾವುಗಳು ರೈತರ ಸಂಕಷ್ಟಗಳತ್ತ ಗಮನಹರಿಸಿ ಬಳ್ಳಾರಿ ಗ್ರಾಮಾಂತರ ಪ್ರದೇಶದ ನೀರಾವರಿ ಜಮೀನುಗಳನ್ನು ಹೊರತುಪಡಿಸಿ ನೀರಾವರಿ ಪ್ರದೇಶವಲ್ಲದ ಹಗರಿಯಿಂದ
ಓಬುಳಾಪುರ ರೇಲ್ವೆ ಟ್ರ್ಯಾಕ್ ಗೆ ಹೊಂದಾಣಿಕೆಯಾಗುವಂತೆ ಹೊಸ ರೇಲ್ವೆ ಟ್ರ್ಯಾಕ್ ಮಾರ್ಗವನ್ನು ಬದಲಾವಣೆ ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿಗಳಲ್ಲಿ ಮನೆ ಪತ್ರವನ್ನು ನೀಡಿ ಒತ್ತಾಯಿಸಿದರು. ಈ ಸಂದರ್ಭದಲ್ಲಿ, ಜಯ ಪ್ರಕಾಶ್ ರೆಡ್ಡಿ, ಓಂಕಾರಪ್ಪ, ಕರಿಯಪ್ಪ, ಚಂದ್ರಪ್ಪ, ವಿರುಪಾಕ್ಷಿ, ಸುರೇಶ್ ಹಳ್ಳಿ ಬಸಪ್ಪ, ಚಂದ್ರಪ್ಪ, ನಾಗರಾಜ, ಮಲ್ಲನಗೌಡ, ಯಂಕಾರೆಡ್ಡಿ, ಸದಾಶಿವ, ಸಣ್ಣ ಪಂಪಣ್ಣ, ಫಕ್ಕಿರೇಶ್, ಅಹಮದ್ ಖಾನ್ ಮತ್ತು ಬಸವನಗೌಡ ಸೇರಿದಂತೆ ಮೇಲ್ಕಂಡ ಗ್ರಾಮಗಳ ನೂರಾರು ರೈತರಿದ್ದರು.