ನೇಸರಗಿ: ಸತತವಾಗಿ 3 ದಶಕಗಳಿಂದ ಸಹಕಾರಿ ರಂಘದಲ್ಲಿ ಹಾಗೂ ಬೆಳಗಾವಿ ಡಿಸಿಸಿ ಬ್ಯಾಂಕನಲ್ಲಿ ಉಪಾಧ್ಯಕ್ಷನಾಗಿ, ನಿರ್ದೇಶಕನಾಗಿ, ಕಿತ್ತೂರು ಕ್ಷೇತ್ರದ ಶಾಸಕನಾಗಿ ಬೆಳೆಯಲು ರೈತರ, ಪಿಕೆಪಿಎಸ್ ಸದಸ್ಯರ, ಪಧಾಧಿಕಾರಿಗಳ, ಸಾರ್ವಜನಿಕರ ಪ್ರೇರಣೆ, ಸಹಕಾರ, ಅಭಿಮಾನದಿಂದ ನಾನು ಬೆಳೆದಿದ್ದೇನೆ ಅವರ ಪ್ರೇರಣೆ ಕಾರ್ಯಕ್ಕೆ ಸ್ಪಂದಿಸಿ ನಿರಂತರ ಕೆಲಸ ಕಾರ್ಯಗಳನ್ನು ಮಾಡುತ್ತೇನೆ ಎಂದು ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು.
ಅವರು ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ ಬೈಲಹೊಂಗಲ ತಾಲೂಕಿನಿಂದ ನಿರ್ದೇಶಕರ ನಿರ್ದೇಶಕರ ಸ್ಥಾನಕ್ಕೆ ದಿ. 19 ರಂದು ನಡೆದ ಚುನಾವಣೆಯಲ್ಲಿ ಸ್ಪರ್ದಿಸಿ ಹೆಚ್ಚಿನ ಮತಗಳನ್ನು ಪಡೆದು ಮುನ್ನಡೆ ಸಾಧಿಸಿರುವ ಅವರನ್ನು ಬೈಲಹೊಂಗಲ, ಕಿತ್ತೂರು ತಾಲೂಕಿನ ಪಿಕೆಪಿಎಸ್ ಸದಸ್ಯರು, ಅಧ್ಯಕ್ಷರು, ಕಾರ್ಯದರ್ಶಿ, ರೈತರು, ಅಭಿಮಾನಿಗಳು, ಕಾರ್ಯಕರ್ತರ ಸನ್ಮಾನ ಸ್ವೀಕರಿಸಿ ಮಾತನಾಡಿ ಕೋರ್ಟ್ ಆದೇಶದಂತೆ ತಾಲೂಕಿನ ಎರಡು ಪಿಕೆಪಿಎಸ್ ಸಿಂಧುತ್ವದ ಕುರಿತು ಕೋರ್ಟ್ ತೀರ್ಪು ಅ 28 ರವರೆಗೆ ನಮ್ಮ ಸ್ಥಾನ ಘೋಷಣೆ ತಡೆ ಹಿಡಿದಿದ್ದು ಇದು ಹುಕ್ಕೇರಿ, ಬೈಲಹೊಂಗಲ, ಕಿತ್ತೂರು, ನಿಪ್ಪಾಣಿ ತಾಲೂಕಿನ ನಿರ್ದೇಶಕರ ಆಯ್ಕೆ ತಡೆ ಹಿಡಿದಿದೆ ಎಂದರು. ಮುಂದಿನ ದಿನಗಳಲ್ಲಿ ಕಿತ್ತೂರು ಹಾಗೂ ಬೈಲಹೊಂಗಲ ತಾಲೂಕಿನ ಜನರ ಋಣ ನನ್ನ ಮೇಲೆ ಇದ್ದು ಅವರ ಕೆಲಸ ಕಾರ್ಯಗಳಿಗೆ ಸದಾ ಸ್ಪಂದಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ನೇಸರಗಿ ಪಿಕೆಪಿಎಸ್ ಅಧ್ಯಕ್ಷ ರಾಜಶೇಖರ ಯತ್ತಿನಮನಿ, ಮುಖಂಡರಾದ ಎಮ್ ವಾಯ್ ಸೋಮಣ್ಣವರ, ವೀರಪಣ್ಣ ಚೋಭಾರಿ, ಎಸ್ ಎಮ್ ಪಾಟೀಲ, ಎಮ್ ಟಿ ಪಾಟೀಲ,ಪ್ರಕಾಶ ಮೂಗಬಸವ,ನಿಂಗನಗೌಡ ದೊಡ್ಡಗೌಡರ, ಈಶ್ವರ ಉಳ್ಳೆಗಡ್ಡಿ,ಬಾಳಾಸಾಹೇಬ ದೇಸಾಯಿ,ಆರ್ ಸಿ ಪಾಟೀಲ, ಸುನೀಲ್ ಮರಕುಂಬಿ, ಕುಮಾರಗೌಡ ಪಾಟೀಲ, ಮಹಾಂತೇಶ ಎಣಗಿ, ಅಜ್ಜಪ್ಪ ಎತ್ತಿನಮನಿ, ಫಕ್ಕಿರಪ್ಪ ಸೋಮಣ್ಣವರ, ಮಹಾಂತೇಶ ಸತ್ತಿಗೇರಿ, ಗಂಗಪ್ಪ ಕಾಡಣ್ಣವರ, ಪ್ರಕಾಶ ತೋಟಗಿ, ವಿಶ್ವನಾಥ ಕೂಲಿನವರ,ಮಹಾಂತೇಶ ಮೋಹರೆ,ಅಡಿವಪ್ಪ ಹೊಸಮನಿ, ಶ್ರೀಕಾಂತ ತರಗಾರ,ಯಲ್ಲಪ್ಪ ತಳವಾರ, ಬೈಲಹೊಂಗಲ, ಕಿತ್ತೂರು ತಾಲೂಕಿನ ಸಹಕಾರಿ ಸಂಘಗಳ ಅಧ್ಯಕ್ಷರು, ಸದಸ್ಯರು, ಕಾರ್ಯದರ್ಶಿಗಳು, ರಾಜಕೀಯ ಮುಖಂಡರು, ರೈತರು, ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.