ರೈತರ ಅಭಿವೃದ್ಧಿ, ಡಿಸಿಸಿ ಬ್ಯಾಂಕ ಉನ್ನತಿಕರಣಕ್ಕೆ ಮೊದಲ ಪ್ರಾಶಸ್ತ್ಯ : ಬಾಲಚಂದ್ರ ಜಾರಕಿಹೊಳಿ 

Ravi Talawar
ರೈತರ ಅಭಿವೃದ್ಧಿ, ಡಿಸಿಸಿ ಬ್ಯಾಂಕ ಉನ್ನತಿಕರಣಕ್ಕೆ ಮೊದಲ ಪ್ರಾಶಸ್ತ್ಯ : ಬಾಲಚಂದ್ರ ಜಾರಕಿಹೊಳಿ 
WhatsApp Group Join Now
Telegram Group Join Now

 

ನೇಸರಗಿ. ರೈತರ ಅಭಿವೃದ್ಧಿಗೆ ಬೆಳಗಾವಿ ಡಿ ಸಿ ಸಿ ಬ್ಯಾಂಕು ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ, ಟ್ರಾಕ್ಟರ್ ಮತ್ತು ರೈತ ಸಲಕರನೆಗಳಿಗೆ ಸಾಲ, ವಾಣಿಜ್ಯ ಸಾಲ, ಕೈಗಾರಿಕೆ ಸಾಲ, ಸಕ್ಕರೆ ಕಾರ್ಖಾನೆಗಳಿಗೆ ಸಾಲ ನೀಡುತ್ತಿದ್ದು ಅದರಲ್ಲಿ ಹೆಚ್ಚಿನ ಮಟ್ಟದಲ್ಲಿ ರೈತರಿಗೆ ಡಿ ಸಿ ಸಿ ಬ್ಯಾಂಕ ಸಾಲ ನೀಡಿದೆ. ಮುಂದಿನ ದಿನಗಳಲ್ಲಿ ಬ್ಯಾಂಕ ಅಭಿವೃದ್ಧಿಗೆ ಹೆಚ್ಚಿನ ಒಟ್ಟು ನೀಡಲಾಗುವದವು. ಕಳೆದ 30 ವರ್ಷಗಳ ಕಾಲ ಮಹಾಂತೇಶ ದೊಡ್ಡಗೌಡರ ಡಿ ಸಿ ಸಿ ಬ್ಯಾಂಕ ನಿರ್ದೇಶಕರಾಗಿ, ಬ್ಯಾಂಕಿನ ಉಪಾಧ್ಯಕ್ಷರಾಗಿ ಈ ಕ್ಷೇತ್ರದ ಶಾಸಕರಾಗಿ ರೈತ ಮತ್ತು ಜನಪರ ಕೆಲಸ ಮಾಡಿದ್ದಾರೆ ಅವರ ಸರಳ ವ್ಯಕ್ತಿತ್ವಕ್ಕೆ ಈ ಭಾಗದ ಸಹಕಾರಿಗಳು ಅವರನ್ನು ಬೆಂಬಲಿಸಿದ್ದಾರೆ ಹಾಗೂ ಮುಂದೆಯೂ ಬೆಂಬಲಿಸುತ್ತಾರೆ,ಧಣಿ ದಿ. ಡಿ ಬಿ ಇನಾಮದಾರ ಅವರ ಪುತ್ರ ವಿಕ್ರಂ ಇನಾಮದಾರ ಕಿತ್ತೂರು ತಾಲೂಕಾ ಕ್ಷೇತ್ರದಿಂದ ಡಿಸಿಸಿ ಬ್ಯಾಂಕ ನಿರ್ದೇಶಕರ ಚುನಾವಣೆಗೆ ಸ್ಪರ್ದಿಸುತ್ತಿದ್ದು ಅವರನ್ನು ಬೆಂಬಲಿಸಬೇಕು ಎಂದರು.

ಅವರು ಸಮೀಪದ ಗದ್ದಿಕರವಿನಕೊಪ್ಪ ಕ್ರಾಸ್ ಹತ್ತಿರ ಶ್ರೀ ಬಿ ಎಸ್ ಯಡಿಯೂರಪ್ಪ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಬೈಲಹೊಂಗಲ ಮತ್ತು ಕಿತ್ತೂರು ತಾಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷ, ಉಪಾಧ್ಯಕ್ಷರ, ಆಡಳಿತ ಮಂಡಳಿಯ ಸದಸ್ಯರ ಸೌಹಾರ್ದಯುತ ಸಭೆಯನ್ನು ಉದ್ದೇಸಿಸಿ ಮಾತನಾಡಿದರು.

ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಮಾತನಾಡಿ ಒಳ್ಳೆಯ ಹಿತದೃಷ್ಟಿಯಿಂದ 20 ವರ್ಷ ನಂಬಿ ಆಡಳಿತ ಚುಕಾಣಿ ಒಬ್ಬರಿಗೆ ಕೊಟ್ಟಿದ್ದು ಈಗ ಅವರಿಗೆ ನಮ್ಮ ಉಪಕಾರದ ವಿರುದ್ಧ ಹೋಗಿದ್ದಾರೆ ಎಂದರು.ಡಿಸಿಸಿ ಬ್ಯಾಂಕ ಮುಖಾಂತರ ಪಿ ಕೆ ಪಿ ಎಸ್ ಸಹಕಾರ ಸಂಘಗಳಿಗೆ ರಾಷ್ಟ್ರೀಯ ಬ್ಯಾಂಕುಗಳ ರೀತಿಯಲ್ಲಿ ರೈತರ ಹಾಗೂ ಗ್ರಾಮಸ್ಥರ ಎಲ್ಲ ಕೆಲಸ ಮಾಡಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವದು ಎಂದರು.

ಮಾಜಿ ಶಾಸಕ ಹಾಗೂ ಡಿ ಸಿ ಸಿ ಬ್ಯಾಂಕ ನಿರ್ದೇಶಕ ಮಹಾಂತೇಶ ದೊಡ್ಡಗೌಡರ ಮಾತನಾಡಿ ಪ್ರಸಕ್ತ ಬೈಲಹೊಂಗಲ ಮತ್ತು ಕಿತ್ತೂರು ತಾಲೂಕುಗಳಲ್ಲಿ ಸಹಕಾರಿ ಸಂಘಗಳನ್ನು ದುಪ್ಪಟ್ಟು ಮಾಡಿದ್ದು, ಕಳೆದ 30 ವರ್ಷಗಳಿಂದ ನನ್ನನ್ನು ನೀವೆಲ್ಲರೂ ನಮ್ಮ ತಂದೆ ದಿ. ಬಸವಂತರಾಯ ದೊಡ್ಡಗೌಡರು ತೀರಿದ ನಂತರ ನನ್ನನ್ನು ಇಪ್ಪತ್ತು ವರ್ಷಕ್ಕೆ ನಿರ್ದೇಶಕರನ್ನಾಗಿ ಮಾಡಿ ಬೆಳೆಸಿದ್ದೀರಿ ಮುಂದೆಯೂ ನನ್ನನ್ನು ಬೆಳೆಸುತ್ತಿರಿ ಎಂಬ ಪರಿಪೂರ್ಣ ವಿಶ್ವಾಸ ಇದೆ. ಕಿತ್ತೂರು ತಾಲೂಕಿನಲ್ಲಿ 33 ಪಿ ಕೆ ಪಿ ಎಸ್ ಸಂಘಗಳು ಚುನಾವಣೆಗೆ ಅರ್ಹವಾಗಿವೆ, ಅದರಲ್ಲಿ 18 ರಲ್ಲಿ ನಾವು ಜಯಗಳಿಸಬೇಕು. ಹಿಂದೆ ನನಗೆ ನೀಡಿದ ಸಹಕಾರ ವಿಕ್ರಮ ಇನಾಮದಾರ ಅವರಿಗೆ ನೀಡಬೇಕೆಂದು ಮತ್ತು ಬೈಲಹೊಂಗಲ ತಾಲೂಕಿನಲ್ಲಿ 68 ಪಿ ಕೆ ಪಿ ಎಸ್ ಗಳು ಅರ್ಹವಾಗಿವೆ. ಬೈಲಹೊಂಗಲ, ಕಿತ್ತೂರು ಸಹಕಾರಿ ಸಂಘಗಳ ಅಭಿವೃದ್ಧಿಗೆ ಸದಾ ನಾನು ಸಿದ್ದನಿದ್ದೇನೆ ಎಂದರು.

ಈ ಸಭೆಯಲ್ಲಿ ಮಾಜಿ ಶಾಸಕ ಜಗದೀಶ ಮೆಟಗುಡ್,ಯುವ ಮುಖಂಡ ಚಿದಾನಂದ ಸವದಿ,ಕಿತ್ತೂರು ಡಿಸಿಸಿ ಬ್ಯಾಂಕ್ ಅಭ್ಯರ್ಥಿ ವಿಕ್ರಂ ಇನಾಮದಾರ, ಡಿಸಿಸಿ ಬ್ಯಾಂಕ ಅಧ್ಯಕ್ಷ ಅಪ್ಪಸಾಹೇಬ ಕುಲಗೋಡ ಮಾತನಾಡಿದರು.ವೇದಿಕೆಯಲ್ಲಿ ಮಾಜಿ ಶಾಸಕ ಅರವಿಂದ ಪಾಟೀಲ, ಜೆಡಿಎಸ್ ಮುಖಂಡ ಶಂಕರ ಮಾಡಲಗಿ,ಬಸವರಾಜ ಪರವಣ್ಣವರ, ರಾಜು ಅಂಕಲಗಿ, ಅನೇಕ ಪಕ್ಷಗಳ ರಾಜಕೀಯ ಮುಖಂಡರು, ಬೈಲಹೊಂಗಲ ಮತ್ತು ಚನ್ನಮ್ಮನ ಕಿತ್ತೂರು ತಾಲೂಕಿನ ಸಹಕಾರಿ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ಸಹಕಾರಿ ಬಂದುಗಳು ಭಾಗವಹಿಸಿದ್ದರು.

WhatsApp Group Join Now
Telegram Group Join Now
Share This Article