ಬಳ್ಳಾರಿ ಮೇ 21 : ಕೃಷಿ ಇಲಾಖೆಯಿಂದ ಇತ್ತೀಚಿನ ದಿನಗಳಲ್ಲಿ ರೈತರಿಗೆಹಳೆ ದಾಸ್ತಾನಿನ ಬೀಜಗಳನ್ನು ವಿತರಣೆ ಮಾಡುತ್ತಿರುತ್ತಾರೆ. ಹಳೆ ಬೀಜಗಳನ್ನು ಬಿತ್ತನೆ ಮಾಡುವುದರಿಂದ ಬೆಳೆ ಇಳುವರಿ ಕಡಿಮೆ ಬರುತ್ತಿದ್ದು, ರೈತರಿಗೆ ತುಂಬಾ ನಷ್ಟವಾಗುತ್ತಿದೆ. ಇದರ ಬಗ್ಗೆ ಸಾಕಷ್ಟು ಬಾರಿ ಸಂಬಂಧಿಸಿದ ಕೃಷಿ ಅಧಿಕಾರಿಗಳಿಗೆ ಮನವಿ ಮಾಡಿದರು ಸಹಯಾವುದೇ ಕ್ರಮ ಕೈಗೊಂಡಿರುವುದಿಲ್ಲ.
ಕಾರಣ ಇತ್ತೀಚಿನ ದಿನಗಳಲ್ಲಿ ಬಂದಿರುವ ಹೊಸ ತಳಿ ಹೈಬ್ರಿಡ್ಬೀಜಗಳನ್ನು ಆದಷ್ಟು ಬೇಗನೆ ರೈತರಿಗೆ ವಿತರಿಸಲು ವ್ಯವಸ್ಥೆ ಮಾಡಬೇಕು.ಎ.ಪಿ.ಎಂ.ಸಿ. ಮಾರುಕಟ್ಟೆ ಹತ್ತಿರ ಮೆಣಸಿನಕಾಯಿ ಮಾರುಕಟ್ಟೆ ವ್ಯವಸ್ಥೆ ಮಾಡುವುದಾಗಿ ಬಳ್ಳಾರಿಯಆಲದಹಳ್ಳಿ ಹತ್ತಿರ ಜಮೀನುಗಳನ್ನು ಹಿಂದಿನ ಸರ್ಕಾರ ಜಮೀನುಗಳನ್ನು ತೆಗೆದುಕೊಂಡಿರುತ್ತಾರೆ. ಈಗಿನಸರ್ಕಾರವು ಮೆಣಸಿನಕಾಯಿ ಮಾರುಕಟ್ಟೆಯನ್ನು ಸರ್ಕಾರದ ವತಿಯಿಂದ ಮಾಡಿಕೊಡಬೇಕು ಇದರಿಂದಇಲ್ಲಿನ ಸುತ್ತಮುತ್ತಲಿನಲ್ಲಿ ಒಣ ಮೆಣಸಿನಕಾಯಿ ಬೆಳೆಯುವ ರೈತರಿಗೆ ತುಂಬಾ ಅನುಕೂಲವಾಗಲಿದೆ ಮತ್ತು ಇಲ್ಲಿನ ರೈತರು ಬ್ಯಾಡಗಿ,ಹುಬ್ಬಳಿಗೆ ಬಳ್ಳಾರಿಯಿಂದ ಮೆಣಸಿನಕಾಯಿ ಮಾರಲು ತೆರೆಳುತ್ತಿದ್ದಾರೆ ಇದರಿಂದ ರೈತರಿಗೆ ಖರ್ಚುಹೆಚ್ಚಾಗುತ್ತಿದೆ ಇದರ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮುಖ್ಯಂಮತ್ರಿ ಹಾಗೂ ಕೃಷಿ ಸಚಿವರುಹಾಗೂ ಸಂಬಂಧಪಟ್ಟ ಅಧಿಕಾರಿಗಳು, ಆದಷ್ಟು ಬೇಗನೆ ರೈತರಿಗೆ ಹೊಸ ತಳಿ ಹೈಬ್ರಿಡ್ ಬೀಜಗಳನ್ನುರೈತರಿಗೆ ವಿತರಣೆ ಮಾಡಲು ವ್ಯವಸ್ಥೆಗೊಳಿಸಬೇಕು ಮತ್ತು ಶೀಘ್ರದಲ್ಲಿ ಒಣ ಮೆಣಸಿನಕಾಯಿ ಮಾರುಕಟ್ಟೆಯನ್ನು ಬಳ್ಳಾರಿಯಲ್ಲಿ ಶೀಘ್ರದಲ್ಲಿ ಪ್ರಾರಂಭ
ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷರಾದ ಸಂಗನಕಲ್ ಕೃಷ್ಣಮೂರ್ತಿ ಮತ್ತು ಇತರರು ಹೊಸಪೇಟೆಗೆ ಆಗಮಿಸಿದ ಮುಖ್ಯಮಂತ್ರಿ ಮತ್ತು ಕೃಷಿ ಸಚಿವರಿಗೆ
ಮನವಿ ಪತ್ರವನ್ನು ಸಲ್ಲಿಸಿದರು.
ಈ ವಿಷಯದ ಬಗ್ಗೆ ನಿರ್ಲಕ್ಷವಹಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಎಲ್ಲಾ ರೈತರುಗಳು ಕೂಡಿ ಪ್ರತಿಭಟನೆಯನ್ನುಹಮ್ಮಿಕೊಳ್ಳಲಾಗುವುದೆಂದು ಈ ಮೂಲಕ ಸರ್ಕಾರಕ್ಕೆ ತಿಳಿಯಪಡಿಸುತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಬೇವಿನ ಗಿಡದ ಇರಿ ಸ್ವಾಮಿ ಎರಿಸ್ವಾಮಿ, ಮಾರೆಣ್ಣ, ಗಾದಿಲಿಂಗ ಸೇರಿದಂತೆ ಇತರರಿದ್ದರು