ಗುರ್ಲಾಪೂರ(27):- ಅ. 30 ರಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಕಬ್ಬು ಬೆಳೆಗಾರ ರೈತ ರಿಂದ ರಸ್ತೆ ಬಂದು ಮಾಡಿ ಕಬ್ಬು ಬೆಲೆ ನಿಗದಿಗಾಗಿ ಬೃಹತ್ ಪ್ರತಿಭಟನೆ ಪೂರ್ವಭಾವಿ ಸಭೆಯು ಅ. 27 ರಂದು ಗ್ರಾಮದ ಶ್ರೀ ಮಲ್ಲಿಕಾರ್ಜುನ ರಂಗ ಮಂಟಪದಲ್ಲಿ ಜರುಗಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷರಾದ ಚೂನಪ್ಪ ಪೂಜಾರಿ ಮಾತನಾಡಿ ಮಹಾರಾಷ್ಟ್ರ ರಾಜ್ಯದ ಫ್ಯಾಕ್ಟರಿ ಮಾಲಕರು ಪ್ರತಿ ಟನ್ ಗೆ 3500 ರೂ ಕೊಡಬೇಕಾದರೆ, ಕರ್ನಾಟಕದ ಫ್ಯಾಕ್ಟರಿ ಮಾಲಕರು ಏಕೆ ಬೆಲೆ ನಿಗದಿ ಮಾಡುತ್ತಿಲ್ಲ.? ಈ ತಾರತಮ್ಯವನ್ನು ಖಂಡಿಸಿ ಕಳೆದ 15 ದಿನಗಳಿಂದ ಫ್ಯಾಕ್ಟರಿ ಬಂದ್ ಮಾಡಿಸಿ ಪ್ರತಿಭಟಿಸುತಿದ್ದೇವೆ, ಇದು ಬೆಲೆ ನಿಗದಿ ಯಾಗುವವರೆಗೂ ಮುಂದುವರಿಯುತ್ತದೆ. ರೈತರು ಸಾಲ ಸೂಲ ಮಾಡಿ ಬೆವರು ಹರಿಸಿ ವರ್ಷಕ್ಕೆ ಒಮ್ಮೆ ಬರುವ ಕಬ್ಬು ಬೆಳೆಗೆ ಫ್ಯಾಕ್ಟರಿ ಮಾಲಕರು ಯೋಗ್ಯ ಬೆಲೆ ಕೊಡದಿದ್ದರೆ ರೈತರ ಬಾಳು ಬೀದಿಗೆ ಬರುತ್ತದೆ. ರೈತರಿಂದಲೇ ಶಾಸಕ ಮಂತ್ರಿಯಾಗಿ ಐಷಾರಾಮಿ ಜೀವನ ಅನುಭವಿಸುತ್ತಿದ್ದೀರಿ.
ಅ. 30 ರಂದು ಬೆಲೆ ನಿಗದಿಗಾಗಿ ಗುರ್ಲಾಪುರ ಕ್ರಾಸ್ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದೇವೆ, ಸುಮಾರು ಒಂದು ಲಕ್ಷ ಜನ ಸೇರುವ ನಿರೀಕ್ಷೆ ಇದೆ, ಸ್ಥಳದಲ್ಲಿಯೇ ಸಕ್ಕರೆ ಸಚಿವರು,ಜಿಲ್ಲಾ ಉಸ್ತುವಾರಿ ಸಚಿವರು,ಜಿಲ್ಲಾಧಿಕಾರಿಗಳು, ಫ್ಯಾಕ್ಟರಿ ಮಾಲಕರು, ಎಮ್ ಡಿ ಗಳು ಬಂದು ಬೆಲೆ ನಿಗದಿ ಮಾಡಬೇಕು, ಇಲ್ಲದಿದ್ದರೆ ಹೋರಾಟ ಉಗ್ರ ರೂಪ ತಾಳುವುದು, ಪ್ರತಿಭಟನೆಗೆ ಬರುವ ಎಲ್ಲ ರೈತ ಬಾಂಧವರಿಗೆ ಗುರ್ಲಾಪುರ ರೈತರಿಂದ ಅನ್ನಪ್ರಸಾದ ವ್ಯವಸ್ಥೆ ಇರುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಸತ್ಯಪ್ಪ ಮಲ್ಲಾಪುರ, ಶ್ರೀಶೈಲ್ ಅಂಗಡಿ, ಕುಮಾರ ಮರಡಿ, ಪಾಂಡು ಬಿರನಗಡ್ಡಿ, ಮಲ್ಲಪ್ಪ ಅಂಗಡಿ, ದುಂಡಪ್ಪ ಮುಗಳಖೋಡ, ಕೆ ಆರ್ ದೇವರ ಮನಿ, ಚನ್ನಪ್ಪ ಮುಗಳಕೋಡ, ಭೀಮಪ್ಪ ದೇವರಮನಿ, ಶ್ರೀಶೈಲ್ ಕೌಜಲಗಿ, ಐವೈ ಮುಗಳಖೋಡ, ಶ್ರೀಶೈಲ್ ಮುಗಳಖೋಡ, ಈಶ್ವರ್ ಮುಗಳಖೋಡ, ರಂಗಪ್ಪ ಪಾಲಬಾವಿ, ಪ್ರಕಾಶ್ ಸುಳ್ಳನವರ, ಸದಾಶಿವ್ ನೇಮಗೌಡರ, ನಾಗರಾಜ್ ಮುಗಳಖೋಡ, ಮಲ್ಲಪ್ಪ ಮುಗಳಖೋಡ, ಹಾಲಸಿದ್ದ ಮರಾಠೆ ಅನೇಕರು ಉಪಸ್ಥಿತರಿದ್ದರು.


