ರಾಯಬಾಗ: ಬಿಡಿಸಿಸಿ ಬ್ಯಾಂಕ್‌ದಿಂದ ಸಾಲ ಪಡೆದ ರೈತರು ಮತ್ತು ಗ್ರಾಹಕರು ನಿಗದಿತ ಸಮಯದಲ್ಲಿ ಸಾಲ ಮರುಪಾವತಿ ಮಾಡಿ, ಬ್ಯಾಂಕ್ ಬೆಳವಣಿಗೆಗೆ ಕೈಜೋಡಿಸಬೇಕೆಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಬ ಕುಲಗುಡೆ ಹೇಳಿದರು.
ಬುಧವಾರ ಪಟ್ಟಣದ ಬಿಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಮಾವಿನಹೊಂಡ ರೇವಣಸಿದ್ದೇಶ್ವರ ಪಿಕೆಪಿಎಸ್‌ನ ೧೧೬ ರೈತರಿಗೆ ೬೨ ಲಕ್ಷ ರೂ. ಬೆಳೆ ಸಾಲ ಚೆಕ್‌ಗಳನ್ನು ವಿತರಿಸಿ ಮಾತನಾಡಿದ ಅವರು, ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುತ್ತಿರುವ ಏಕೈಕ ರಾಜ್ಯ ಕರ್ನಾಟಕವಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು. ರೈತರು ತಮ್ಮ ಕಬ್ಬಿನ ಬಿಲ್ ಬಿಡಿಸಿಸಿ ಬ್ಯಾಂಕ್‌ಗೆ ಜಮೆ ಮಾಡುವಂತೆ ನೋಡಿಕೊಳ್ಳಬೇಕು. ಪಿಕೆಪಿಎಸ್‌ದಿಂದ ಟ್ರ್ಯಾಕ್ಟರ್ ಸಾಲ ನೀಡಲಾಗುತ್ತಿದೆ ಎಂದರು. ಶೀಘ್ರದಲ್ಲಿ ರಾಯಬಾಗ ತಾಲೂಕಿನ ನಿಪನಾಳ ಮತ್ತು ನಸಲಾಪೂರ ಗ್ರಾಮದಲ್ಲಿ ಬ್ಯಾಂಕ್ ಶಾಖೆಗಳು ಪ್ರಾರಂಭಗೊಳ್ಳಲಿವೆ ಎಂದು ತಿಳಿಸಿದರು.
ತಾಲೂಕಾ ನಿಯಂತ್ರಣಾಧಿಕಾರಿ ಎಸ್.ಬಿ.ಪಾಟೀಲ, ಶಾಖೆ ವ್ಯವಸ್ಥಾಪಕ ಬಿ.ಪಿ.ರಾಯಣ್ಣವರ, ಬಿಐಗಳಾದ ಮಂಜುನಾಥ ಜಂಬಗಿ, ಸುಧೀರ ನಂದಗಾಂವ, ಚಿದಾನಂದ ಬನಶಂಕರಿ, ಮಾವಿನಹೊಂಡ ರೇವಣಸಿದ್ದೇಶ್ವರ ಪಿಕೆಪಿಎಸ್ ಅಧ್ಯಕ್ಷ ವಿ.ಎಸ್.ಪೂಜಾರಿ, ಮಹೇಶ ಕೊರವಿ, ಮಹಾದೇವ ಲಕ್ಷ್ಮೇಶ್ವರ, ಚಂದ್ರಕಾಂತ ದೇಸಾಯಿ, ರೇವಪ್ಪ ಪೂಜಾರಿ, ಕಲ್ಲಪ್ಪ ಕಗ್ಗೂಡೆ, ಮಹಾದೇವ ಸಾರಾಪೂರೆ, ಮಲ್ಲಿಕಾರ್ಜುನ ಜಿರಲೆ, ವಿನೋದ ಪೂಜಾರಿ, ಅಲಗೊಂಡ ತಟ್ಟಿಮನಿ, ಮಹಾಂತೇಶ ಬೆಳಕೂಡೆ, ಮಹಾದೇವ ನಾಯಿಕ ಸೇರಿ ಅನೇಕರು ಇದ್ದರು.
ಫೋಟೊ: ೨೧ ರಾಯಬಾಗ ೧
ಫೋಟೊ ಶೀರ್ಷಿಕೆ: ರಾಯಬಾಗ: ಪಟ್ಟಣದ ಬಿಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಮಾವಿನಹೊಂಡ ರೇವಣಸಿದ್ದೇಶ್ವರ ಪಿಕೆಪಿಎಸ್‌ನ ರೈತರಿಗೆ ಬೆಳೆ ಸಾಲ ಚೆಕ್‌ಗಳನ್ನು ಬಿಡಿಸಿಸಿ ಅಧ್ಯಕ್ಷ ಅಪ್ಪಾಸಾಬ ಕುಲಗುಡೆ ವಿತರಿಸಿದರು. ಎಸ್.ಬಿ.ಪಾಟೀಲ, ಬಿ.ಪಿ.ರಾಯಣ್ಣವರ, ವಿ.ಎಸ್.ಪೂಜಾರಿ, ಮಂಜುನಾಥ ಜಂಬಗಿ, ಸುಧೀರ ನಂದಗಾಂವ, ಚಿದಾನಂದ ಬನಶಂಕರಿ, ಮಹಾದೇವ ಲಕ್ಷ್ಮೇಶ್ವರ, ಚಂದ್ರಕಾಂತ ದೇಸಾಯಿ, ಕಲ್ಲಪ್ಪ ಕಗ್ಗೂಡೆ, ಮಹಾದೇವ ಸಾರಾಪೂರೆ, ವಿನೋದ ಪೂಜಾರಿ, ಅಲಗೊಂಡ ತಟ್ಟಿಮನಿ ಇದ್ದರು.
ರೈತರು ಮತ್ತು ಗ್ರಾಹಕರು ನಿಗದಿತ ಸಮಯದಲ್ಲಿ ಸಾಲ ಮರುಪಾವತಿ ಮಾಡಿ: ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಬ ಕುಲಗುಡೆ
