ಬೈಲಹೊಂಗಲ: ಸಮೀಪದ ಹೊಸೂರ ಗ್ರಾಮದ ಯುವ ರೈತ ಮಲ್ಲಪ್ಪ ಉಳವಪ್ಪ ಕುದರಿಕಾರ (47) ತನ್ನ ಎರಡು ಎಕರೆ ಜಮೀನಿನಲ್ಲಿ ಬೆಳೆದ ಸೋಯಾಬಿನ್ ಸಂಪೂರ್ಣವಾಗಿ ಕಿಟಗಳ ಬಾದೆಯಿಂದ ಹಾಳಾಗಿದ್ದು ಸ್ಥಳಿಯ ಪಿಕೆಪಿಎಸ್ ಮತ್ತು ಕೆವಿಜಿ ಬ್ಯಾಂಕ್ ನಲ್ಲಿ ಪಡೆದ ಬೆಳೆಸಾಲ ಹಾಗೂ ಬಿತ್ತನೆಗೆ ಮಾಡಿದ ಕೈಗಡ ಸಾಲ ತಿರಸಲಾಗದು ಎಂದು ಮನನೊಂದು ವಿಷಕಾರಿ ಕಳೆನಾಶಕ ಸೇವಿಸಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದರು ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಅಸುನಿಗಿದರು. ಈ ಕುರಿತು ಮುರಗೋಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರು ತಾಯಿ, ಪತ್ನಿ, ಪುತ್ರ ಪುತ್ರಿ ಮತ್ತು ಅಪಾರ ಬಂಧುಬಳಗ ಹೊಂದಿದ್ದಾರೆ.