ಮಳೆಗೆ ಹಾನಿಯಾದ ಮನೆಗಳಿಗೆ 5 ಲಕ್ಷ ಬೆಳೆ ಹಾನಿಯಾದ ರೈತರಿಗೆ 10 ಸಾವಿರ ಪರಿಹಾರ ಹಣ ನೀಡಬೇಕು ರೈತ ಮುಖಂಡ ಆನಂದ ಬೇವಿನ ಆಗ್ರಹ

Basavarj c
By Basavarj c
WhatsApp Group Join Now
Telegram Group Join Now

ಚನ್ನಮ್ಮನ ಕಿತ್ತೂರು: ರಾಜ್ಯದಲ್ಲಿ 2019 ರಿಂದ 2022 ರ ವರೆಗೆ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಎಂದೂ ಕೇಳರಿಯದಷ್ಟು ಪ್ರವಾಹ ಬಂದು ಅನೇಕ ಸಾವು ನೋವುಗಳು ಸಂಭವಿಸಿದ್ದವು, ಲಕ್ಷಾಂತರ ಜನ ಮನೆ ಜಾನುವಾರುಗಳನ್ನು ಕಳೆದುಕೊಂಡು ಬಿದಿ ಪಾಲಾಗಿದ್ದರು ಇದನ್ನು ಅರಿತು ಅಂದಿನ ಬಿಜೆಪಿ ಸರ್ಕಾರ ಜನರ ಸಮಸ್ಯೆಯನ್ನು ಅರಿತು ಅವರ ನೋವನ್ನು ಮನಗಂಡು ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ರೂ 5 ಲಕ್ಷ ಪರಿಹಾರ ಘೋಷಿಸಿ ಸಂತ್ರಸ್ತರಿಗೆ ಬಲ ತುಂಬಿತ್ತು.

ರೈತ ಮುಖಂಡ ಆನಂದ ಬೇವಿನ

ಇವತ್ತು ರಾಜ್ಯದಲ್ಲಿ ಅತಿರೇಖದ ಮಳೆಯಿಂದಾಗಿ ರಾಜ್ಯದಾದ್ಯಂತ ಸಾಕಷ್ಟು  ಮನೆಗಳು ಕುಸಿದು ಬಿದ್ದಿವೆ. ಹಲವು ಕಡೆಗಳಲ್ಲಿ ಪ್ರವಾಹದಿಂದ ಜನರ ಜೀವನ ಅಸ್ತವ್ಯಸ್ತವಾಗಿ ಮನೆಗಳಿಗೆ ಹಾನಿಯಾಗಿದ್ದು ಸರ್ಕಾರ ಕೇವಲ ಜನರ ಪರವಾಗಿ ನಿಲ್ಲಿವುದಲ್ಲದೆ ಹಿಂದಿನಂತೆ ಪುನರ್ವಸತಿ ಯೋಜನೆಯನ್ನು ಮತ್ತೆ ಮುಂದುವರೆಸಿ ಪೂರ್ಣ ಪ್ರಮಾಣದಲ್ಲಿ ಹಾನಿಯಾದ ಮನೆಗಳಿಗೆ 5 ಲಕ್ಷ ಪರಿಹಾರ, ಪ್ರವಾಹದಿಂದ ಜಾನುವಾರುಗಳು ಮರಣ ಹೊಂದಿದಲ್ಲಿ ಕನಿಷ್ಠ ಪರಿಹಾರ ಹಾಗೂ ಬೆಳೆ ಹಾನಿಯಾದ ರೈತರಿಗೆ ಎಕರೆಗೆ ತಲಾ 10 ಸಾವಿರ ಪರಿಹಾರವನ್ನು ಸರ್ಕಾರ ತಕ್ಷಣ ನೀಡಬೇಕು ಹಾಗೂ ನಿರಾಶ್ರಿತರಾದ ಕುಟುಂಬಗಳಿಗೆ ಗಂಜಿ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ರೈತ ಮುಖಂಡ ಆನಂದ ಬೇವಿನ ಪತ್ರಿಕೆ ಮೂಲಕ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

WhatsApp Group Join Now
Telegram Group Join Now
Share This Article