ಬೆಟಗೇರಿ ೪ : ಒಂದು ಸಂಸ್ಥೆಯು ಮುಂದುವರೆಯಲು ಶಿಕ್ಷಣ ಸಂಸ್ಥೆಯ ಜೊತೆಗೆ ನಾಗರತ್ನಾ ಸಿ.ಜಿ. ಯವರಂತಹ ಕಾಯಕ ಜೀವಿಗಳು ಅಷ್ಟೆ ಮುಖ್ಯಎಂದು ಶ್ರೀ ರುದ್ರಣ್ಣ ಗುಳಗುಳೆ ಅವರು ಇಂದು ನಗರದ ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆಯ ಸಂಯುಕ್ತ ಪ. ಪೂ. ಮಹಾವಿದ್ಯಾಲಯದ ಪ್ರೌಢಶಾಲಾ ವಿಭಾಗದಲ್ಲಿ ಶ್ರೀಮತಿ ನಾಗರತ್ನಾ ಸಿ.ಜಿ. ದ್ವಿತಿಯ ದರ್ಜೆ ಸಹಾಯಕರ ಸೇವಾ ನಿವೃತ್ತಿ, ಬೀಳ್ಕೊಡುಗೆ ಹಾಗೂ ಷಷ್ಟ್ಯಬ್ದಿ ಪೂರ್ತಿ ಸಮಾರಂಭವನ್ನು ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದ ಮುಖ್ಯಅತಿಥಿ ಸ್ಥಾನ ಅಲಂಕರಿಸಿ ಮಾತನಾಡುತ್ತಾ ನಮ್ಮ ಜೊತೆ ಕೊನೆಗೆ ಏನೂ ಬರುವದಿಲ್ಲ ನಾವು ಮಾಡಿದಂತಹ ಒಳ್ಳೆಯ ಕೆಲಸಗಳು ಮಾತ್ರ ಇರುತ್ತವೆ ಎಂದು ನುಡಿದರು. ಶಿಕ್ಷಣ ಸಂಸ್ಥೇಗೆ ಒಳ್ಳೆಯ ಸೇವೆಯನ್ನು ನೀಡಿದ ಶ್ರೀಮತಿ ನಾಗರತ್ನಾ ಸಿ.ಜಿ. ಅವರಿಗೆ ಅತಿಥಿಗಳು ಅಧ್ಯಕ್ಷರು ಸಂಸ್ಥಾಪಕರು ಸಮಸ್ತ ಸಿಬ್ಬಂದಿ ವರ್ಗದವರು ಶಾಲು ಹೊದಿಸಿ ಫಲಪುಷ್ಪ ಹಾಗೂ ನೆನೆಪಿನ ಕಾಣಿಕೆ ನೀಡಿ ಸನ್ಮಾನಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಮತಿ ವೈ. ಆರ್. ಹಿರೇಗೌಡರ ನಿವೃತ್ತ ಪ್ರಾಚಾರ್ಯರು ಮಾತನಾಡುತ್ತಾ ಒಂದು ಶಿಕ್ಷಣ ಸಂಸ್ಥೆ ನಡೆಸುವದು ಈಗಿನ ದಿನಮಾನದಲ್ಲಿ ಕಷ್ಟಸಾಧ್ಯವಾದ ಮಾತು ಈ ಶಿಕ್ಷಣ ಸಂಸ್ಥೆಯಲ್ಲಿ ಸತತ ೩೪ ವರ್ಷಗಳ ಕಾಲ ಅವಿರತ ಸೇವೆ ಗೈದ ಶ್ರೀಮತಿ ನಾಗರತ್ನಾ ಸಿ.ಜಿ. ಅವರಿಗೆ ಶುಭ ಹಾರೈಸಿದರು.
ಪ್ರಾರಂಭದಲ್ಲಿ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಸಂಸ್ಥೆಯ ಸಂಸ್ಥಾಪಕರಾದ ಗಣೇಶಸಿಂಗ್ ಬ್ಯಾಳಿಯವರು ಸಂಸ್ಥೆಗೆ ನಾಗರತ್ನಾ ಸಿ.ಜಿ. ಅವರು ಸಲ್ಲಿಸಿದ ಸೇವೆಯನ್ನು ಸ್ಮರಿಸುತ್ತಾ ನಾವು ಸಕಾರಾತ್ಮಕ ಇರಬೇಕು ಹೊರತು ನಕಾರಾತ್ಮಕ ಆಗಿರಬಾರದು ಇವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.
ಸನ್ಮಾನಗೊಂಡ ನಿವೃತ್ತ ದ್ವಿ.ದ. ಸಹಾಯಕರಾದ ಶ್ರೀಮತಿ ನಾಗರತ್ನಾ ಸಿ.ಜಿ. ಅವರು ಸನ್ಮಾನಕ್ಕೆ ಪ್ರತಿಯಾಗಿ ನನ್ನ ಸೇವೆಗೆ ಕಾರಣರಾದ ತಂದೆ-ತಾಯಿ ಕುಟುಂಬದ ಸದಸ್ಯರನ್ನು ಸ್ಮರಿಸುತ್ತಾ ಸಂಸ್ಥಾಪಕರಾದ ಗಣೇಶಸಿಂಗ್ ಬ್ಯಾಳಿ ಅವರನ್ನು ಅನ್ನ ನೀಡಿದ ಸಂಸ್ಥೆಯನ್ನು ಸ್ಮರಿಸಿ ನನ್ನ ಸುದೀರ್ಘ ಸೇವೆಯಲ್ಲಿ ಸಹಾಯ ಸಹಕಾರ ಸಲ್ಲಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.
ಪ್ರಾರಂಭದಲ್ಲಿ ಕಾರ್ಯಕ್ರಮ ನಾಡಗೀತೆಯೊಂದಿಗೆ ಪ್ರಾರಂಭವಾಗಿ ವಿದ್ಯಾರ್ಥಿಪ್ರತಿನಿಧಿಗಳಿಂದ ಮಾಲಾರ್ಪಣೆ ಜರುಗಿತು. ಎಸ್.ಎಸ್. ಬಡಿಗೇರ ಮುಖ್ಯಾದ್ಯಾಪಕರು ಹಾಗೂ ಎಸ್. ಆರ್.ವಾಲ್ಮೀಕಿ ಉಪನ್ಯಾಸಕರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶಿಕ್ಷಣ ಸಂಸ್ಥೆಯ ಸದಸ್ಯರಾದ ಸಿದ್ದಪ್ಪ ಹರಿಜನ, ಬಿ.ಎಲ್. ಹೊಸಳ್ಳೀ ನಿವೃತ್ತ ಶಿಕ್ಷಕರು, ಸಿ.ಎಂ. ಮಾರನಬಸರಿ ನಿವೃತ್ತ ಮುಖ್ಯಾಧ್ಯಾಪಕರು, ಆರ್.ಎಸ್. ರಜಪೂತ ನಿವೃತ್ತ ಶಿಕ್ಷಕರು, ವಿ.ಜಿ. ಕಾಂಬಳೇಕರ ನಿವೃತ್ತ ಶಿಕ್ಷಕರು, ಕೆ.ಎಂ. ಮೂಲಿಮನಿ ನಿವೃತ್ತ ಮುಖ್ಯಾಧ್ಯಾಪಕರು, ಎಸ್.ಎಂ. ಉಳ್ಳಾಗಡ್ಡಿ ಪ್ರಾಚಾರ್ಯರು, ಶಿವನಗೌಡ, ಈರಣ್ಣ ಅಂಗಡಿ, ಕವಿತಾ ಮಡಿಗಾರ, ರವೀಂದ್ರ ಮಿಠಡೆ, ಬಿ.ವೈ. ಕರಬಸಣ್ಣವರ, ಶ್ರೀಮತಿ ಅಕ್ಕಮ್ಮ, ಶ್ರೀಮತಿ ಪಾಟೀಲ, ಸಿ.ಜಿ. ನಾಗರತ್ನಾರವರ ಸಮಸ್ತ ಕುಟುಂಬವರ್ಗದವರು ಉಪಸ್ಥಿತರಿದ್ದರು.
ಡಿ.ಎಸ್. ನಾಯಕ ಉಪನ್ಯಾಸಕರು ಸಂಯೋಜಿಸಿದ ಕಾರ್ಯಕ್ರಮ, ಹನುಮಾನಸಿಂಗ್ ಬ್ಯಾಳಿ ಸಹ ಶಿಕ್ಷಕರ ವಂದನಾರ್ಪಣೆಯೊಂದಿಗೆ ಮುಕ್ತಾಯವಾಯಿತು.
ಶ್ರೀ ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆಯಲ್ಲಿ ಶ್ರೀಮತಿ ನಾಗರತ್ನಾ ಸಿ.ಜಿ. ಅವರಿಗೆ ಬೀಳ್ಕೊಡುಗೆ


