ಜಿಲ್ಲಾ ವಕೀಲರ ಸಂಘದಿಂದ ಪದೋನ್ನತಿ ಹಾಗೂ ವರ್ಗಾವಣೆಗೊಂಡ ನ್ಯಾಯಾಧೀಶರಿಗೆ ಬೀಳ್ಕೊಡುಗೆ

Ravi Talawar
ಜಿಲ್ಲಾ ವಕೀಲರ ಸಂಘದಿಂದ ಪದೋನ್ನತಿ ಹಾಗೂ ವರ್ಗಾವಣೆಗೊಂಡ ನ್ಯಾಯಾಧೀಶರಿಗೆ ಬೀಳ್ಕೊಡುಗೆ
WhatsApp Group Join Now
Telegram Group Join Now

ಗದಗ01: ನಗರದ ಜಿಲ್ಲಾ ನ್ಯಾಯಾಲಯದ ಜಿಲ್ಲಾ ವಕೀಲರ ಸಂಘದ ಕಚೇರಿಯಲ್ಲಿ ಇಂದು ವಿವಿಧ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸಿ ಪದೋನ್ನತಿ ಹಾಗೂ ವರ್ಗಾವಣೆಗೊಂಡ ನ್ಯಾಯಾಧೀಶರಿಗೆ ಬೀಳ್ಕೊಡುಗೆ ಸಮಾರಂಭ ಜರುಗಿತು. ಸಮಾರಂಭದ ಮುಖ್ಯ ಅತಿಥಿಗಳಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಬಸವರಾಜ ಅಧ್ಯಕ್ಷರಾಗಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಮ್ ಐ ಹಿರೇಮನಿ ಪಾಟೀಲ್ ವಹಿಸಿಕೊಂಡಿದ್ದರು.

ಪದೋನ್ನತಿ ಹಾಗೂ ವರ್ಗಾವಣೆಗೊಂಡ ಮಾನ್ಯ ನ್ಯಾಯಾಧೀಶರುಗಳಾದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಕೆ ಗುರುಪ್ರಸಾದ್ ಇವರು ಬೆಂಗಳೂರು ಗ್ರಾಮೀಣ ನ್ಯಾಯಾಲಯಕ್ಕೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಪದೋನ್ನತಿ ಹೊಂದಿ ವರ್ಗಾವಣೆಗೊಂಡಿದ್ದಾರೆ ಪ್ರಧಾನ ಹಿರಿಯ ದಿವಾಣಿ
ನ್ಯಾಯಾಧೀಶರು ಸಿಜೆಎಂ ಶ್ರೀಮತಿ ಪ್ರೀತಿ ಸದ್ಗುರು ಸದರ್ ಜೋಷಿ ಇವರು ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ೧೭ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾಗಿ ಪದೋನ್ನತಿ ಹೊಂದಿ ವರ್ಗಾವಣೆಗೊಂಡಿದ್ದಾರೆ.

ಅಪರ ಹಿರಿಯ ದಿವಾಣಿ ನ್ಯಾಯಾಧೀಶರಾದ ಪ್ರಕಾಶ್ ಕುರುಪಟ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಧೀಶರಾಗಿ ೭೪ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾಗಿ ಪದೋನ್ನತಿ ಹೊಂದಿ ವರ್ಗಾವಣೆಗೊಂಡಿದ್ದಾರೆ. ಪ್ರಧಾನ ದಿವಾಣಿ ನ್ಯಾಯಾಧೀಶರಾದ ಅರುಣ್ ಚೌಗಲೆ ಯಾದಗಿರಿ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿದ್ದಾರೆ. ಒಂದನೇ ಜೆಎಂಎಫ್‌ಸಿ ನ್ಯಾಯಾಧೀಶರಾದ ಪುಷ್ಪು ಜೋಗೊಜಿ ಬಸವಕಲ್ಯಾಣಕ್ಕೆ ವರ್ಗಾವಣೆಗೊಂಡಿದ್ದಾರೆ. ವರ್ಗಾವಣೆ ಗೊಂಡ ಎಲ್ಲಾ ನ್ಯಾಯಾಧೀಶರಿಗೆ ಜಿಲ್ಲಾ ವಕೀಲರ ಸಂಘದಿಂದ ಸನ್ಮಾನಿಸಿ ಬೇಳ್ಕೊಡುಗೆ ಕೊಡಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಪ್ರಕಾಶ್ ಕಣಗಿನಹಾಳ ನಿರೂಪಿಸಿದರು

ಸಮಾರಂಭದಲ್ಲಿ ಗದಗ್ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಂ.ಐ. ಹಿರೇಮನಿಪಾಟೀಲ, ಉಪಾಧ್ಯಕ್ಷ ಎ.ಎಂ. ಹದ್ಲಿ, ಪ್ರಧಾನ ಕಾರ್ಯದರ್ಶಿ ಬಿ.ಎಚ್. ಮಾಡಲಗೇರಿ, ಜಂಟಿ  ಕಾರ್ಯದರ್ಶಿ ಪ್ರಕಾಶ ಕಣಗಿನಹಾಳ, ಖಜಾಂಚಿ ವಿ.ಎಚ್.ಮೇರವಾಡೆ, ಹಾಗೂ ವಕೀಲರು ಸಂಘದ ಎಲ್ಲ ಸದಸ್ಯರು ಉಪಸ್ಥಿತರಿದ್ದರು

WhatsApp Group Join Now
Telegram Group Join Now
Share This Article