ಪ್ರಿಯಂಕಾ ಪ್ರಮಾಣವಚನ ಸಂತಸದ ಕ್ಷಣವನ್ನು ಕಣ್ತುಂಬಿಕೊಂಡ ಅಭಿಮಾನಿಗಳು

Ravi Talawar
ಪ್ರಿಯಂಕಾ ಪ್ರಮಾಣವಚನ ಸಂತಸದ ಕ್ಷಣವನ್ನು ಕಣ್ತುಂಬಿಕೊಂಡ ಅಭಿಮಾನಿಗಳು
WhatsApp Group Join Now
Telegram Group Join Now
ಬೆಳಗಾವಿ: ನವದೆಹಲಿಯ ಸಂಸತ್ ಭವನದಲ್ಲಿ ಪ್ರಿಯಂಕಾ ಜಾರಕಿಹೊಳಿ ಅವರು ನೂತನ ಸಂಸದೆಯಾಗಿ ಪ್ರಮಾಣವಚನ ಸ್ವೀಕಾರ ಮಾಡಿರುವ ಕ್ಷಣವನ್ನು ಅವರು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಟಿವಿ, ಮೋಬೈಲ್‌ ಸೇರಿದಂತೆ ಎಲ್‌ ಇಡಿ ಪರದೆ ಮೇಲೆ ಕಣ್ತುಂಬಿಕೊಂಡರು.
ಹೌದು… ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಜೊಲ್ಲೆ ವಿರುದ್ಧ ಬಹು ಅಂತರದಿಂದ ಗೆದ್ದು ಬೀಗಿದ ಪ್ರಿಯಂಕಾ ಜಾರಕಿಹೊಳಿ ಅವರು ಇಂದು  ನವದೆಹಲಿಯ ಸಂಸತ್ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದೇ ಹಿನ್ನಲೆಯಲ್ಲಿ ಅವರ ಅಭಿಮಾನಿಗಳು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಬೆಳಗಾವಿ ಕಾಂಗ್ರೆಸ್‌ ಭವನ ಹಾಗೂ ಚಿಕ್ಕೋಡಿಯಲ್ಲಿ ಕಾಂಗ್ರೆಸ್‌ ಕಚೇರಿ ಎದುರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂತಸ ಪಟ್ಟರು.
ಸಿಂಗಾರಗೊಂಡ ಕಾಂಗ್ರೆಸ್‌ ಭವನ: ಅತ್ತ ನೂತನ ಸಂಸದರಾಗಿ ಪ್ರಿಯಂಕಾ ಜಾರಕಿಹೊಳಿ ಪ್ರಮಾಣವಚನ ಸ್ವೀಕಾರ ಮಾಡುವ ಕಾರ್ಯಕ್ರಮ ನಡೆಯುತ್ತಿದ್ದರೆ, ಇತ್ತ ಬೆಳಗಾವಿಯಲ್ಲಿ ಕಾಂಗ್ರೆಸ್‌ ಭವನವನ್ನು ಕಾಂಗ್ರೆಸ್‌ ಕಾರ್ಯಕರ್ತರು ವಧುವನಗಿತ್ತಿಯಂತೆ ಸಿಂಗಾರ ಮಾಡಿದ್ದರು.  ಅಲ್ಲದೇ ಪ್ರಿಯಂಕಾ ಅವರು ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಂತೆ  ಕೈ ಕಾರ್ಯಕರ್ತರು ಸಂತಸಗೊಂಡು ಪಟಾಕಿ ಸಿಡಿಸಿ ಗುಲಾಲು ಎರಚಿ ತಮ್ಮ ಸಂತೋಷವನ್ನು ಮುಗಿಲ್ಲೇತ್ತರದಲ್ಲಿ ಹಾರಾಡುವಂತೆ ಮಾಡಿದರು.
ಪ್ರಿಯಂಕಾಗಿದೆ  ಅಪಾರ ಜನಬೆಂಬಲ: ತಂದೆಯಂತೆ ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪ್ರಿಯಂಕಾ ಅವರು ಹಳ್ಳಿಯ ಮುಗ್ಧ ಜನರನ್ನು ಕಾಣುವ ರೀತಿಯೇ ಬೇರೆ. ಯಾರೇ ಆದರು ನಮ್ಮ ಮನೆ ಮಗಳು ಎಂದು ಇಷ್ಟಪಡುವ ರೀತಿಯಲ್ಲಿ ನಡವಳಿಕೆ ಹೊಂದಿರುವ ಇವರ ವ್ಯಕ್ತಿತ್ವ. ಈಗಾಗಲೇ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಗೆದ್ದಿರುವ ಅವರು ಅಧಿಕೃತವಾಗಿ ದೆಹಲಿಯಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.  ಆದರೆ ಗೆದ್ದ ಕ್ಷೇತ್ರಾದ್ಯಂತ ಎಲ್ಲಡೆ  ಪ್ರಿಯಂಕಾ ಅವರಿಗೆ ಅಪಾರ ಜನಬೆಂಬಲವೂ ವ್ಯಕ್ತವಾಗುತ್ತಿದೆ.
ಅತೀ ಚಿಕ್ಕ ವಯಸ್ಸಿನಲ್ಲಿಯೇ ಎಂಪಿಯಾಗಿ ದಾಖಲೆ ಬರೆದ ಪ್ರಿಯಂಕಾ: ಲೋಕೋಪಯೋಗಿ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಪುತ್ರಿ ಪ್ರಿಯಂಕಾ ಜಾರಕಿಹೊಳಿ ಅವರು ಕೇವಲ 27 ನೇ ವಯಸ್ಸಿನಲ್ಲೇ ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ  ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್‌ ಜೊಲ್ಲೆ ಅವರನ್ನು ಸೋಲಿಸಿ ಅತಿ ಕಿರಿಯ ಸಂಸದೆ ಎಂಬ ಕೀರ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇಂದು ಪ್ರಮಾಣವಚನ ಸ್ವೀಕಾರ ಮಾಡಿದ ಪ್ರಿಯಂಕಾ ಜಾರಕಿಹೊಳಿ ಅವರಿಗೆ  ಬೆಳಗಾವಿ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಅವರಿಗೆ ಶುಭಕೋರುವ ಸಂದೇಶಗಳು ಸಾಗರದಂತೆ ರವಾನೆಯಾಗುತ್ತಿವೆ. ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ವಿವಿಧ ಸ್ವಾಮೀಜಿಗಳು ಹಾಗೂ ಹಿರಿಯ ರಾಜಕಾರಣಿಗಳು ನೂತನ ಸಂಸದೆಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ಅವರ ಅಭಿಮಾನಿಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚಿನ ನೂತನ ಸಂಸದೆಗೆ ಶುಭ ಕೋರುತ್ತಿದ್ದಾರೆ.
WhatsApp Group Join Now
Telegram Group Join Now
Share This Article