4 ವರ್ಷದ ಅಪೇಕ್ಷಾಗೆ ತಾತ್ಕಾಲಿಕ ಹೃದಯ ಶಸ್ತ್ರಚಿಕಿತ್ಸೆ : ನೆರವಿನ ನಿರೀಕ್ಷೆಯಲ್ಲಿ ಕುಟುಂಬ

Ravi Talawar
4 ವರ್ಷದ ಅಪೇಕ್ಷಾಗೆ ತಾತ್ಕಾಲಿಕ ಹೃದಯ ಶಸ್ತ್ರಚಿಕಿತ್ಸೆ : ನೆರವಿನ ನಿರೀಕ್ಷೆಯಲ್ಲಿ ಕುಟುಂಬ
WhatsApp Group Join Now
Telegram Group Join Now
ಬೆಳಗಾವಿಯ ವಿನಾಯಕನಗರದಲ್ಲಿ ವಾಸಿಸುವ ಅಪೇಕ್ಷಾ ಕಿಶನ್ ರಾಠೋಡ ಎಂಬ 4 ವರ್ಷದ ಬಾಲಕಿ ಗಂಭೀರ ಹೃದಯದ ವೈಕಾರಿಯಿಂದ ಪೀಡಿತರಾಗಿದ್ದು, ತಕ್ಷಣ “ರಿಡೋ ಎಂವಿಆರ್” (Redo MVR – ಓಪನ್ ಹಾರ್ಟ್ ಸರ್ಜರಿ) ಮಾಡುವ ಅಗತ್ಯವಿದೆ.
ಅಪೇಕ್ಷಾ ಶಿಶುಕಾಲದಿಂದಲೇ ಅಸ್ವಸ್ಥವಾಗಿದ್ದು, ಈಗಾಗಲೇ ಒಂದು ಬಾರಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಆದರೆ ತೀವ್ರತೆಯು ಕಡಿಮೆಯಾಗದೆ, ಇತ್ತೀಚೆಗೆ ಪ್ರಭಾಕರ್ ಕೋರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ವೈದ್ಯರು ಪರೀಕ್ಷಿಸಿದಾಗ, ಹೃದಯದ ಕವಾಟದಲ್ಲಿ ರಂಧ್ರವಿದ್ದು, ತಾತ್ಕಾಲಿಕವಾಗಿ ಶಸ್ತ್ರಚಿಕಿತ್ಸೆ ಮಾಡುವ ಸಲಹೆ ನೀಡಿದ್ದಾರೆ.
ಈ ಶಸ್ತ್ರಚಿಕಿತ್ಸೆಗೆ ಸುಮಾರು ₹3 ರಿಂದ ₹4 ಲಕ್ಷ ವೆಚ್ಚವಾಗಲಿದೆ. ಆದರೆ ಅಪೇಕ್ಷಾರ ತಂದೆ ಕಿಶನ್ ರಾಠೋಡ ಅವರು ಬೆಳಗಾವಿಯ ಕ್ಯಾಂಪ್‌ನಲ್ಲಿ ಕೂಲಿ ಕೆಲಸ ಮಾಡುತ್ತಿರುವ ಸಾಮಾನ್ಯ ಕಾರ್ಮಿಕರಾಗಿದ್ದು, ಈ ವೆಚ್ಚವನ್ನು ಭರಿಸುವ ಸ್ಥಿತಿಯಲ್ಲಿ ಇಲ್ಲ.
ಅದರಿಂದ, ಮಾನವೀಯ ಮನೋಭಾವದಿಂದ, ದಾನಶೂರರು, ಸಮಾಜಸೇವಕರಿಗೆ ಹಾಗೂ ಸಮಾಜಮುಖಿ ಸಂಸ್ಥೆಗಳಿಗೆ ವಿನಮ್ರ ವಿನಂತಿ – ದಯವಿಟ್ಟು ಈ ಪುಟ್ಟ ಜೀವವನ್ನು ಉಳಿಸಲು ನೆರವಾಗಿರಿ.
ಆರ್ಥಿಕ ನೆರವಿಗಾಗಿ ಖಾತೆ ವಿವರಗಳು:
ಖಾತೆದಾರರ ಹೆಸರು: Kishan Rathod
ಖಾತೆ ಸಂಖ್ಯೆ: 2912101003379
ಐಎಫ್ಎಸ್ಸಿ ಕೋಡ್ (IFSC): CNRB0002912
ಬ್ಯಾಂಕ್: ಕಾನರಾ ಬ್ಯಾಂಕ್, ಹನುಮನ್ನಗರ ಶಾಖೆ
ಮೊಬೈಲ್: +91 97400 97027
WhatsApp Group Join Now
Telegram Group Join Now
Share This Article