ನೇಸರಗಿ: ಕಲೆಗಾಗಿ ಗುರಿ ಹೊಂದಿ ದೃಷ್ಟಿಯಿಂದ ಸೆರೆಹಿಡಿದು, ಕುಂಚದಿಂದ ಭಾವಚಿತ್ರ ರಚಿಸುವ ಕಲಾವಿದರ ಸಾಲಲ್ಲಿ ಇಂದು ನೇಸರಗಿ ಗ್ರಾಮದ ಪ್ರತಿಭಾನ್ವಿತ ಕಲಾವಿದ ಫಕ್ಕಿರಪ್ಪಾ ಸೋಮಣ್ಣವರ ತಮ್ಮ ಪರಿಶ್ರಮದಿಂದ ಇಂದು ಉನ್ನತ ಸ್ಥಾನಕ್ಕೆ ಬಂದಿದ್ದಾರೆ.
ಅವರು ಸೋಮವಾರ ದಿ. 09-12-2024 ರಂದು ಬೆಳಗಾವಿಯ ಸುವರ್ಣಾಸೌಧದಲ್ಲಿ ಆರಂಭವಾದ ಚಳಿಗಾಲದ ಅಧಿವೇಶನದಲ್ಲಿ ಅನುಭವ ಮಂಟಪದ ಹಾಗೂ ರಾಜ್ಯದ ಮುಖ್ಯ ಮಂತ್ರಿ ಸಿದ್ರಾಮಯ್ಯ ಅವರ ಭಾವಚಿತ್ರವನ್ನು ಸಿ ಎಮ್ ಸಿದ್ರಾಮಯ್ಯ ಅವರಿಗೆ ಅರ್ಪಿಸಿ ಅವರಿಂದ ಭೇಷ್ ಒಳ್ಳೇಯ ಕಲಾವಿದ ಎನ್ನಿಸಿಕೊಂಡು ನೇಸರಗಿ ಗ್ರಾಮಕ್ಕೆ ಕೀರ್ತಿ ತಂದರು.
ಹಿಂದೆ ಇವರ ಗುರುಗಳಾದ ನಿವೃತ್ತ ಕಲಾ ಶಿಕ್ಷಕರಾದ ಎ ಬಿ. ಉಪ್ಪಾರ ಅವರು ಅನೇಕ ಕಲಾಕೃತಿ ರಚಿಸಿ ಅದರಲ್ಲೂ ಡಾ. ರಾಜಕುಮಾರ ಅವರ ಭಾವಚಿತ್ರ ರಚಿಸಿ ಡಾ. ರಾಜರಿಂದ ಕಾಣಿಕೆ ಪಡೆದಿದ್ದರು.
ಈ ಸಂದರ್ಭದಲ್ಲಿ ವಿಧಾನಸಭೆ ಸ್ಪೀಕರ್ ಯು ಟಿ. ಖಾದರ, ಶಾಸಕ ಅಶೋಕ ಪಟ್ಟಣ ಇತರರು ಉಪಸ್ಥಿತರಿದ್ದರು.ಫಕ್ಕೀರಪ್ಪಾ ಸೋಮಣ್ಣವರ ಅವರ ಕಲಾ ಸಾಧನೆಗೆ ರಾಘವೇಂದ್ರ ಯೂತ್ ಕ್ಲಬ್ ನೇಸರಗಿ, ನೇಸರಗಿ ಗ್ರಾಮದ ಹಿರಿಯರು ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ.