ಮಹರ್ಷಿ ವಾಲ್ಮೀಕಿಯವರ ಸಂದೇಶ, ತತ್ವಗಳಡಿ ಬದುಕು ಸಾಗಿಸಿ: ಫಕೀರಪ್ಪ ವಜ್ರಬಂಡಿ

Ravi Talawar
ಮಹರ್ಷಿ ವಾಲ್ಮೀಕಿಯವರ ಸಂದೇಶ, ತತ್ವಗಳಡಿ ಬದುಕು ಸಾಗಿಸಿ:  ಫಕೀರಪ್ಪ ವಜ್ರಬಂಡಿ
WhatsApp Group Join Now
Telegram Group Join Now
ಕುಕನೂರು : ಮಹರ್ಷಿ ವಾಲ್ಮೀಕಿಯವರು 24 ಸಾವಿರ ಶ್ಲೋಕಗಳಿಂದ ಒಡಗೂಡಿದ ರಾಮಾಯಣ ಮಹಾ ಕಾವ್ಯ ರಚಿಸಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇಂತಹ ಮಹನೀಯರ ಸಂದೇಶ, ತತ್ವಗಳ ಅಡಿಯಲ್ಲಿ ಪ್ರತಿಯೊಬ್ಬರು ಬದುಕು ಸಾಗಿಸಬೇಕಿದೆ ಎಂದು ನಿವೃತ್ತ ಉಪನ್ಯಾಸಕಕರು ಹಾಗೂ ಸಾಹಿತಿಗಳಾದ ಫಕೀರಪ್ಪ ವಜ್ರಬಂಡಿ ಹೇಳಿದರು.
ಅವರು ಕುಕನೂರು ಪಟ್ಟಣದಲ್ಲಿ ತಾಲೂಕ ಆಡಳಿತ ತಾಲೂಕ ಪಂಚಾಯತ್ ಸಮಾಜ ಕಲ್ಯಾಣ ಇಲಾಖೆ ಹಾಗೂ ಪಟ್ಟಣ ಪಂಚಾಯತ ಕುಕನೂರು ಇವರ ಸಹಯೋಗದಲ್ಲಿ ಜರುಗಿದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಮ್ಮ  ಉಪನ್ಯಾಸದಲ್ಲಿ ಮಾತನಾಡಿ ಶಿಕ್ಷಣದಿಂದ ವ್ಯಕ್ತಿಗಳ ವ್ಯಕ್ತಿತ್ವ ಮಾರ್ಪಡುತ್ತದೆ. ಸಮಾಜದಲ್ಲಿ ಯುವಕರು ಶಿಕ್ಷಣವಂತರಾದಾಗ ಮಾತ್ರ ಸಮುದಾಯಗಳು ಆರ್ಥಿಕವಾಗಿ ಅಭಿವೃದ್ದಿ ಹೊಂದಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ತ್ಯಾಗದ ಮನೋಭಾವ  ಬೇಡ ಜನಾಂಗದವರಲ್ಲಿ ಹುಟ್ಟಿನಿಂದ ಬೆಳೆದು ಬಂದಿದೆ. ಕಣ್ಣಪ್ಪನು ಒಬ್ಬ ಬೇಡ ಜನಾಂಗದವರಾಗಿದ್ದು ಭಕ್ತಿಗೆ ಹೆಸರಾದವರು, ಅವರು ಸಹ ತ್ಯಾಗದ ಮನೋಭಾವನೆ ಹೊಂದಿದವರಾಗಿದ್ದರು, ಗಂಡುಗಲಿ ಕುಮಾರ ರಾಮ ತನ್ನ ರಾಜ್ಯಭಾರದ ಸಂದರ್ಭದಲ್ಲಿ ಸಮಾಜಕ್ಕೆ ಸಾಮರಸ್ಯ ಭೋಧಿಸಿದವರು.
ಇತಂಹ ಮಹಾನ್ ವ್ಯಕ್ತಿಗಳ ಸಾಲಿನಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಗಲ,ಗಲಿಯ ಬೇಡ ಜನಾಂಗದವರ ಶೌರ್ಯ ಈಡಿ ಭಾರತದ ಇತಿಹಾಸದಲ್ಲಿ ಬರೆದಿರುವುದನ್ನು ಸ್ಮರಿಸಲೇಬೇಕಿದೆ ಎಂದರು.
ಬೇಡ ಸಮುದಾಯ ಶ್ರೇಷ್ಠ ರಾಜ ಮಹಾರಾಜರಾಗಿದ್ದವರು ಇಂದಿನ ದಿನಗಳಲ್ಲಿ ದುಸ್ಥಿತಿ ತಲುಪಿ ವಾಲಿಕಾರ, ತಳವಾರರಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಖೇದ ವ್ಯಕ್ತ ಪಡಿಸಿದರು. ನಾಯಕ ಜನಾಂಗ ಎಂದು ಸ್ವಾರ್ಥಿಗಳಲ್ಲ ಸಮಾಜಕ್ಕಾಗಿ ತಮ್ಮ ಜೀವನ ಮುಡುಪಾಗಿಟ್ಟ ಸಮಾಜವಾಗಿದೆ ಎಂದರು.
ಮೊದಲು ಮನುಷ್ಯನಲ್ಲಿ ಮಾನವಿ ಸಂಬಂಧಗಳು ಗಟ್ಟಿಗೊಳ್ಳಬೇಕು. ಮುಂದಿನ ಜನಾಂಗಕ್ಕೆ ಕೊಡುಗೆ ನೀಡುವವರಾಗಿ ಇಂದಿನ ಯುವ ಪೀಳಿಗೆ ಬೆಳೆಯಬೇಕು ಎಂದು ಕರೆ ನೀಡಿದರು.
ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ಮಕ್ಕಳ ಚಲನ ವಲನಗಳ ಕುರಿತು ಜಾಗೃತಿವಹಿಸಿ ಅಂದಾಗ ಮಾತ್ರ ಸಮಾಜದಲ್ಲಿ ಮಕ್ಕಳ ಉನ್ನತಿ ಸಾಧ್ಯ ಎಂದು ಕಿವಿ ಮಾತನ್ನು ಹೇಳಿದರು.
ನಂತರ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಶಿಧರ ಸಕ್ರಿ ಪ್ರಾಸ್ತಾವಿಕವಾಗಿ ಮಾತನಾಡಿ ಪರಿಶಿಷ್ಟ ಪಂಗಡದ ಯೋಜನೆಯ ಸೌಲಭ್ಯಗಳಾದ ವಿದ್ಯಾರ್ಥಿ ವೇತನ, ವಸತಿಯುತ ಶಿಕ್ಷಣ, ಮಹರ್ಷಿ ಆಶ್ರಮ ಶಾಲೆ, 1 ರಿಂದ10ರ ವರೆಗೆ ಉಚಿತ ಶಿಕ್ಷಣ, ಶಾಸಕರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದರಿಂದ 35ಕೋಟಿ ರೂ ವೆಚ್ಚದಲ್ಲಿ  400 ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ಸುಸಜ್ಜಿತ ಶಾಲಾ ಸಂಕಿರ್ಣ ನಿರ್ಮಿಸಲಾಗುವುದು ಎಂದರು.
ವಿದ್ಯಾರ್ಥಿಗಳಿಗೆ  7500ದಿಂದ 10ಸಾವಿರ ವರೆಗೆ ಪೊತ್ಸಾಹ ಧನ ನೀಡಲಾಗುವುದು ಜೊತೆಗೆ ಬಾಲ, ಮತ್ತು ಜಿಡಗ ವಿದ್ಯಾರ್ಥಿಗಳಿಗೆ ಸೇರಿದಂತೆ ಪಿಯು ವಿದ್ಯಾರ್ಥಿಗಳಿಗೆ 25ಸಾವಿರ,ವಿಶ್ವ ವಿದ್ಯಾಲಯಕ್ಕೆ 50ಸಾವಿರ ನೀಡಲಾಗುವುದು ಇವುಗಳ ಸಧ್ಬಳಕೆಯನ್ನು  ಸಮುದಾಯದ ವಿದ್ಯಾರ್ಥಿಗಳು ಪಡೆದುಕೊಂಡು ಮುಂದೆ ಬರಬೇಕು ಎಂದರು.
*ಪ್ರಭುದ್ದ ಯೋಜನೆ :* ವಿದೇಶಿದಲ್ಲಿ ಪ್ರವೇಶ ಪರೀಕ್ಷೆಗಳಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ 25ಲಕ್ಷಗಳ ವರೆಗೆ ಸಹಾಯ ಧನ, ವಿಮಾನ ವೆಚ್ಚ ನೀಡಲಾಗುವುದು.
10ಸಾವಿರ ಶಿಷ್ಯ ವೇತನ ಕಾನೂನು ಪದವಿಗೆ ನೀಡಲಾಗುವುದು.
 *ವಾಲ್ಮೀಕಿ ಅಭಿವೃದ್ದಿ ನಿಗಮ :* ಸ್ವಾವಲಂಬಿ ಸಾರತಿ, ಕಿರು ಸಾಲ, ಭೂ ಒಡೆತನ ಯೋಜನೆ ಸೇರಿದಂತೆ ವಿವಿಧ ಸವಲತ್ತುಗಳು , ಅಂತರ್ ಜಾತಿಯ ಮದುವೆಗೆ ಪ್ರೋತ್ಸಾಹ ಧನ ಮೂರು ಲಕ್ಷದ ವರೆಗೆ ನೀಡಲಾಗುವುದು.ಸಾಮೂಹಿಕ ಸರಳ ವಿವಾಹಕ್ಕೆ ಆರ್ಥಿಕ ಕನಿಷ್ಠ ಹತ್ತು ಜೋಡಿ ಮದುವೆಯಲ್ಲಿ ಮದುವೆಯಾದರೆ ಐವತ್ತು ಸಾವಿರ ಪ್ರೊತ್ಸಹ ಧನ ನೀಡಲಾಗುವುದು. ಹೀಗೆ ಹತ್ತು ಹಲವು ಯೋಜನೆಗಳಿಂದ ಸಮಾಜ ಶ್ರೇಯೋಭಿವೃದ್ದಿ ಹೊಂದಲಿ ಎಂದು ಹೇಳಿದರು.
ನಂತರ ಗ್ರೇಡ್ -2 ತಹಶೀಲ್ದಾರ ಮುರುಳಿಧರ ಕುಲಕರ್ಣಿ ವಾಲ್ಮೀಕಿ ಅವರ ಕುರಿತು ಮಾತನಾಡಿದರು.ಈ ವೇಳೆ ಎಸ್ ಎಸ್ ಎಲ್ ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಹಿಳೆಯರ ಕುಂಭ, ಕಳಸ ಹಾಗೂ ಭಾಜಾ, ಬಜೇಂತ್ರಿ, ಡೊಳ್ಳು ವಾಧ್ಯ ಮೇಳಗಳೊಂದಿಗೆ ಮಹರ್ಷಿ ವಾಲ್ಮೀಕಿಯವರ ಭಾವ ಚಿತ್ರ ಮೆರವಣಿಗೆ ನಡೆಯಿತು.
ಈ ಸಂದರ್ಭದಲ್ಲಿ ಜೆಸ್ಕಾಂ ಇಲಾಖೆಯ ಅಧಿಕಾರಿ ನಾಗರಾಜ,  ರಾಮಣ್ಮ ಮುಂದಲಮನಿ, ರಾಮಣ್ಣ ಯಡ್ಡೋಣಿ, ಸಂಜೀವಪ್ಪ ಸಂಗಟಿ, ಮಂಗಳೇಶ ಮಂಗಳೂರು, ಪ್ರಕಾಶ ತಹಶೀಲ್ದಾರ, ಭರಮಪ್ಪ ತಳವಾರ, ಬಸನಗೌಡ ಪೋಲಿಸ್ ಪಾಟೀಲ್, ಹನಮಪ್ಪ ಮರಡಿ, ಶ್ರೀಕಾಂತ ಬಿಳಗಿ, ಕನಕಪ್ಪ ಬ್ಯಾಡರ್, ಭೀಮಣ್ಣ ಹವಳಿ, ಎಚ್.ಕೆ ಹೈತಾಪೂರ, ಸುಭಾಸ ಪೂಜಾರ ಸೇರಿದಂತೆ ಸಮಾಜದ ಹಿರಿಯರು, ಯುವಕರು, ಮಹಿಳೆಯರು ಮುಖಂಡರು ಇದ್ದರು.ಕಾರ್ಯಕ್ರಮದಲ್ಲಿ ಮಾರುತಿ ಜಿವಣ್ಣವರ್ ಸ್ವಾಗತಿಸಿದರು. ಶಿಕ್ಷಕ ಶರಣಪ್ಪ ವೀರಾಪೂರ ನಿರೂಪಿಸಿ ವಂದಿಸಿದರು.
WhatsApp Group Join Now
Telegram Group Join Now
Share This Article