ಶಿವಮೊಗ್ಗ, ಏಪ್ರಿಲ್ 08: ಶೋಭಾ ಎಂಬುವವರು ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಆಗಿದ್ದ ಸಂದರ್ಭದಲ್ಲಿ ನಕಲಿ ಚಿನ್ನ ಅಡವಿಟ್ಟು 62 ಕೋಟಿ ರೂ. ಸಾಲಕೊಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ದಾಳಿ(ED Raid) ನಡೆಸಿದ್ದಾರೆ. ಶಿವಮೊಗ್ಗದಲ್ಲಿ 8ಕ್ಕೂ ಹೆಚ್ಚಿನ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಶಿವಮೊಗ್ಗದ ಗೋಪಾಲಗೌಡ ಬಡಾವಣೆಯಲ್ಲಿರುವ ಶೋಭಾ ನಿವಾಸದ ಮೇಲೆ ಇಂದು ದಾಳಿ ನಡೆದಿದೆ.
ಬ್ಯಾಂಕ್ನ ವಾಹನ ಚಾಲಕನಾಗಿದ್ದ ಶಿವಕುಮಾರ್ ಮನೆ ಮೇಲೂ ಕೂಡ ದಾಳಿ ನಡೆಸಲಾಗಿದೆ. 2 ಕಡೆ ದಾಳಿ ನಡೆಸಿ ಪರಿಶೀಲನೆ ಮಾಡುತ್ತಿದ್ದಾರೆ. 2014ರ ಜೂನ್ನಲ್ಲಿ ಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಈ ಹಗರಣ ನಡೆದಿತ್ತು. ಇದೇ ವೇಳೆ ಬ್ಯಾಂಕ್ ನ ವಾಹನ ಚಾಲಕನಾಗಿದ್ದ ನಿವಾಸದ ಮೇಲು ದಾಳಿ ನಡೆಸಲಾಗಿದೆ. ಕಾಮಾಕ್ಷಿ ಬೀದಿಯ ಶಿವಕುಮಾರ್ ಎಂಬುವರ ಮನೆ ಮೇಲು ಇಡಿ ತಂಡದ ಪ್ರತ್ಯೇಕ ದಾಳಿ ನಡೆಸಿದೆ. ಏಕಕಾಲಕ್ಕೆ ಎರಡು ಪ್ರತ್ಯೇಕ ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ.
ಶಿವಮೊಗ್ಗ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಮಂಜುನಾಥ್ ಗೌಡಗೂ ಇಡಿ ಶಾಕ್ ನೀಡಿದೆ. ಬೆಂಗಳೂರಿನಲ್ಲಿ ಇಡಿ ಅಧಿಕಾರಿಗಳಿಂದ ಮಂಜುನಾಥ್ ಗೌಡ ವಿಚಾರಣೆ ನಡೆಸಲಾಗುತ್ತಿದೆ. ಅಪೆಕ್ಸ್ ಬ್ಯಾಂಕ್ನ ಗೆಸ್ಟ್ ಹೌಸ್ನಲ್ಲಿ ಮಂಜುನಾಥ್ ಗೌಡ ವಿಚಾರಣೆ ಮಾಡುತ್ತಿದ್ದಾರೆ. 10ಕ್ಕೂ ಹೆಚ್ಚು ಇಡಿ ಅಧಿಕಾರಿಗಳಿಂದ ಮಂಜುನಾಥ್ಗೌಡ ವಿಚಾರಣೆ ನಡೆಸುತ್ತಿದ್ದಾರೆ.