ಭಗೀರಥ ಜಯಂತಿ ಅಂಗವಾಗಿ ಜಾತ್ರೆ, ವಾರ್ಷಿಕೋತ್ಸವ ಮತ್ತು ಪ್ರತಿಭೆಗಳಿಗೆ ಪುರಸ್ಕಾರ

Ravi Talawar
ಭಗೀರಥ ಜಯಂತಿ ಅಂಗವಾಗಿ  ಜಾತ್ರೆ, ವಾರ್ಷಿಕೋತ್ಸವ ಮತ್ತು ಪ್ರತಿಭೆಗಳಿಗೆ ಪುರಸ್ಕಾರ
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.220034, 0.707076);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 36;
WhatsApp Group Join Now
Telegram Group Join Now

ಮಹಾಲಿಂಗಪುರ: ಮೇ ೨೪ ರಂದು ಶನಿವಾರ ಪಟ್ಟಣದ ಕೆಂಗೇರಿ ಮಡ್ಡಿ ಬಡಾವಣೆಯ ಭಗೀರಥ ಸಮುದಾಯ ಭವನದಲ್ಲಿ ಶ್ರೀ ಮಹರ್ಷಿ ಭಗೀರಥ ಜಯಂತಿ ಅಂಗವಾಗಿ ಜಾತ್ರೆ, ೧೫ ನೇ ವಾರ್ಷಿಕೋತ್ಸವ ಮತ್ತು ಸಮುದಾಯದ ಪ್ರತಿಭೆಗಳಿಗೆ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ ಎಂದು ಸ್ಥಳೀಯ ಭಗೀರಥ ಉಪ್ಪಾರ ಸಮಾಜದ ಹಿರಿಯರಾದ ಮಾನಿಂಗಪ್ಪಣ್ಣಾ ಲಾತೂರ ಹೇಳಿದರು.
ಬುಧವಾರ ಸ್ಥಳೀಯ ಪ್ರೆಸಿಡೆಂಟ್ ಹೋಟಲನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶನಿವಾರ ಮುಂಜಾನೆ ೭ ಗಂಟೆಗೆ ಶ್ರೀ ಗುರು ಮಹಾಲಿಂಗೇಶ್ವರ ದೇವಸ್ಥಾನದಿಂದ ಭಗೀರಥ ದೇವಸ್ಥಾನ ವರೆಗೆ ಸಕಲ ವಾದ್ಯ ಮೇಳ ಗಳು ಮತ್ತು ಕುಂಭಮೇಳ ಭಗೀರಥ ಭಾವ ಚಿತ್ರಕ್ಕೆ ಅದ್ಧೂರಿ ಸ್ವಾಗತ ನೀಡಲಿವೆ.ನಂತರ ಧಾರ್ಮಿಕ ಸಭೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ಜರುಗುವವು .
ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಶ್ರೀಗಳು, ಸಾನಿಧ್ಯವನ್ನು ಸ್ಥಳೀಯ ಸಹಜಾನಂದ ಶ್ರೀಗಳು, ಚಿಮ್ಮಡದ ಪ್ರಭು ಶ್ರೀಗಳು, ರನ್ನ ಬೆಳಗಲಿಯ ಸಿದ್ಧರಾಮ ಶ್ರೀಗಳು ವಹಿಸಿ, ಕಾರ್ಯಕ್ರಮ ಉದ್ಘಾಟನೆಯನ್ನು ತೇರದಾಳ ಶಾಸಕ ಸಿದ್ದು ಸವದಿ, ವಿಪ ಸದಸ್ಯೆ ಉಮಾಶ್ರೀ ಮತ್ತು ಕ್ಷೇತ್ರದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ನೆರೆವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನ್ಯಾ. ಸುರೇಶ್ ಲಾತೂರ ವಹಿಸಿದರೆ, ಸಂಘದ ರಾಜ್ಯಾಧ್ಯಕ್ಷ ನ್ಯಾ.ವಿ? ಲಾತೂರ ಮತ್ತು ನ್ಯಾ.ನಾಗಪ್ಪ ಲಾತೂರ ಕಾರ್ಯಕ್ರಮದ ನೇತೃತ್ವ ವಹಿಸುವರು.
ವಿಶೇ? ಆಮಂತ್ರಿತರಾಗಿ ಪಟ್ಟಣದ ಪ್ರಥಮ ಪ್ರಜೆ ಯಲ್ಲನ್ನಗೌಡ ಪಾಟೀಲ್, ಉಪಾಧ್ಯಕ್ಷೆ ಶೀಲಾ ಭಾವಿಕಟ್ಟಿ,ಪಿಕೆಪಿಎಸ್ ಅಧ್ಯಕ್ಷ ಬಸನಗೌಡ ಪಾಟೀಲ್, ಶೇಖರ ಅಂಗಡಿ, ಹೆಸ್ಕಾಂ ರಾಜೇಶ ಭಾಗೋಜಿ, ಖ್ಯಾತ ವೈದ್ಯರಾದ ಡಾ.ಅಜೀತ ಕನಕರಡ್ಡಿ, ಡಾ. ವಿಠ್ಠಲ ಭಾಗಿ ಮತ್ತು ಪುರಸಭೆ ಸ್ಥಾಯಿ ಸಮಿತಿ ಚೇರ್ಮನ್ ಅಬ್ದುಲ್ ರಜಾಕ್ ಬಾಗವಾನ, ಕಾನಿಪ ಸಂಘದ ಅಧ್ಯಕ್ಷ ಮಹೇಶ್ ಮಣ್ಣಯ್ಯನವರಮಠ, ಪರಪ್ಪ ಬ್ಯಾಕೋಡ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಮಹಾಲಿಂಗಪ್ಪ ಲಾತೂರ, ವಿ? ಲಾತೂರ, ಲಕ್ಷಣ ಮುಗಳಖೋಡ,ಮುತ್ತಪ್ಪ ಇಡ್ಲಿ, ಶಿವಾನಂದ ಬಿರಾಜನ್ನವರ, ಮಹಾಲಿಂಗ ಬಿ.ಲಾತೂರ, ನಿಂಗಪ್ಪ ಉಸಳಿ, ನಂದು ಲಾತೂರ ಸೇರಿದಂತೆ ಅನೇಕ ಸಮಾಜದ ಹಿರಿಯರು ಭಾಗವಹಿಸಿದ್ದರು. ಹೆಚ್ಚಿನ ಮಾಹಿತಿಗಾಗಿ ೮೧೨೩೭೩೨೮೬೯ ಮತ್ತು ೯೪೪೯೩೬೩೩೫೫ ಈ ನಂಬರಗಳಿಗೆ ಸಂಪರ್ಕಿಸಲು ಕೋರಲಾಗಿದೆ.
ಫೋಟೊ: ೨೧ ಎಂ.ಎಲ್.ಪಿ ೧
ಮಹಾಲಿಂಗಪುರ : ಸ್ಥಳೀಯ ಪ್ರೆಸಿಡೆಂಟ ಹೋಟೆಲ್ ನಲ್ಲಿ ಭಗೀರಥ ಸಮಾಜದ ಹಿರಿಯರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಹಾಲಿಂಗಪ್ಪ ಲಾತೂರ ಮಾತನಾಡಿದರು.

WhatsApp Group Join Now
Telegram Group Join Now
Share This Article