ಬಳ್ಳಾರಿ,ಮೇ 15: ಬಳ್ಳಾರಿ ಮಹಾನಗರಪಾಲಿಕೆ ವ್ಯಾಪ್ತಿಯ ಸಾರ್ವಜನಿಕರು ಆಸ್ತಿ ತೆರಿಗೆ ಪಾವತಿ ಮೇಲಿನ ಶೇ.5 ರ ರಿಯಾಯಿತಿಯ ಅವಧಿಯನ್ನು ಜೂನ್ 30 ರವರೆಗೆ ವಿಸ್ತರಿಸಲಾಗಿದೆ. ಈ ಅವಕಾಶವನ್ನು ಸದುಪಯೋಗಪಡೆದುಕೊಂಡು ನಿಗಧಿತ ಅವಧಿಯಲ್ಲಿ ತೆರಿಗೆ ಪಾವತಿಸಿ ಬಳ್ಳಾರಿ ನಗರದ ಅಭಿವೃದ್ಧಿಗೆ ಸಹಕರಿಸಬೇಕು.
ಅದೇರೀತಿಯಾಗಿ ಇ-ಖಾತಾ ಅಭಿಯಾನವನ್ನು ಸಹ ಆಗಸ್ಟ್ 10 ರವರೆಗೆ ವಿಸ್ತರಿಸಿರುವುದರಿಂದ ಈವರೆಗೂ ಇ-ಖಾತಾ ಪಡೆದುಕೊಳ್ಳದೇ ಇರುವ ನಾಗರಿಕರು ಈ ಅವಕಾಶ ಸದುಪಯೋಗ ಪಡೆಕೊಳ್ಳಬೇಕು ಎಂದು ಬಳ್ಳಾರಿ ಮಹಾನಗರ ಪಾಲಿಕೆ ಕಚೇರಿಯು ಪ್ರಕಟಣೆಯಲ್ಲಿ ತಿಳಿಸಿದೆ.