ತುಂಗಭದ್ರಾ ಡ್ಯಾಂ ಚೈನ್ ಬದಲಾವಣೆಗೆ ತಜ್ಞರ ಸೂಚನೆ

MK HasiruKranti
ತುಂಗಭದ್ರಾ ಡ್ಯಾಂ ಚೈನ್ ಬದಲಾವಣೆಗೆ ತಜ್ಞರ ಸೂಚನೆ
WhatsApp Group Join Now
Telegram Group Join Now
ಬಳ್ಳಾರಿ, ಮಾ.23. ತುಂಗಭದ್ರಾ ಬೋರ್ಡ್ ಮಾಡಬೇಕಾದುದನ್ನು ಸಕಾಲಕ್ಕೆ ಮಾಡದೇ ಇದ್ದುದು ಈಗ ಸಮಸ್ಯೆಯಾಗಿ ಪರಿಣಮಿಸಿದೆ.
ಜಲಾಶಯದ ಗೇಟುಗಳನ್ನು ಬದಲಾಯಿಸುತ್ತಿದೆ. ಆದರೆ ಗೇಟುಗಳ ಚೈನ್ ಬದಲಾಯಿಸಲು ಮುಂದಾಗಿದ್ದಿಲ್ಲ. ಇ೮ಗ ತಜ್ಞರ ಸಲಹೆಯಂತೆ ನೂತನ ಚೈನ್ ಅಳವಡಿಕೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಕ್ರಸ್ಟ್ ಗೇಟ್ ಬದಲಾಯಿಸಲು ಮುಂದಾಗಿ, ಚೈನ್ ಬದಲಾಯಿ ಸುವುದನ್ನು ಟೆಂಡರ್ನಲ್ಲಿ ಕೈಬಿಟ್ಟಿತು. ಕ್ರಸ್ಟ್ ಗೇಟ್ ಅಳವಡಿಸಲು 41 ಕೋಟಿ ರೂ ಟೆಂಡರ್ಕರೆದರೂ ಚೈನ್ ಬದಲಾಯಿ ಸುವ ಟೆಂಡರ್ ಕರೆದಿರಲಿಲ್ಲ. ಐದಾರು ಕೋಟಿ ಉಳಿಸಲು ಹಳೆಯ ಚೈನ್ ಬಳಕೆ ಮಾಡಿದರಾಯಿತು ಎನ್ನುವ ಸಣ್ಣತನ ಪ್ರದರ್ಶನ ಮಾಡಿತ್ತು. ಆದರೆ, ಈಗ ಹಳೆಯ ಚೈನ್ಗಳು ಸವೆದಿವೆ ಎನ್ನುವು ದನ್ನು ತಜ್ಞರ ಸಮಿತಿ ತುಂಗಭದ್ರಾ ಬೋರ್ಡ್ ಗಮನಕ್ಕೆ ತಂದಿರುವುದರಿಂದ ಚೈನ್ ಬದಲಾವಣೆಗೆ ಟೆಂಡರ್ ಕರೆಯಲು ಮುಂದಾಗಿದೆಯಂತೆ.
WhatsApp Group Join Now
Telegram Group Join Now
Share This Article