ಹುಕ್ಕೇರಿ ತಾಲೂಕು ಮಟ್ಟದ ಕಾರಹುಣ್ಣಿಮೆ ವಿಜೃಂಭಣೆ: ಮಹಾಲಕ್ಷ್ಮಿ ಮಂದಿರದ ಆವರಣದಲ್ಲಿ ಎತ್ತುಗಳ ಪ್ರದರ್ಶನ

Ravi Talawar
ಹುಕ್ಕೇರಿ ತಾಲೂಕು ಮಟ್ಟದ ಕಾರಹುಣ್ಣಿಮೆ ವಿಜೃಂಭಣೆ: ಮಹಾಲಕ್ಷ್ಮಿ ಮಂದಿರದ ಆವರಣದಲ್ಲಿ ಎತ್ತುಗಳ ಪ್ರದರ್ಶನ
WhatsApp Group Join Now
Telegram Group Join Now
ಸಂಕೇಶ್ವರ :  ಹುಕ್ಕೇರಿ ತಾಲೂಕು ಮಟ್ಟದ ಕಾರಹುಣ್ಣಿಮೆ ನಿಮಿತ್ತ ವಿವಿಧ ಗ್ರಾಮಗಳಿನಿಂದ ಪಟ್ಟಣದ ಮಹಾಲಕ್ಷ್ಮಿ ಮಂದಿರದ ಆವರಣದಲ್ಲಿ ಎತ್ತುಗಳ ಪ್ರದರ್ಶನ ಅತೀ ವಿಜೃಂಭಣೆಯಿಂದ ಜರುಗಿತ್ತು.
ರೈತರ ಹಬ್ಬ ಎಂದು ಕರಿಯುವ ಕರಿ ಹಬ್ಬದಲ್ಲಿ ಹಲವಾರು ರೈತರು ಸಂತೋಷದಿಂದ ಭಾಗವಹಿಸಿದರು.
ಹಬ್ಬದ ನಿಮಿತ್ತ ರೈತರು ತಮ್ಮ ತಮ್ಮ ಎತ್ತುಗಳಿಗೆ ಹುರಮಂಜ ಹಚ್ಚಿ  ಶೃಂಗರಿಸಿ, ಸ್ಪರ್ಧೆಯಲ್ಲಿ ಭಾಗವಹಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕರಾದ ನಿಖಿಲ್ ಕತ್ತಿ ಹಾಗೂ ಮಾಜಿ ಸಚಿವ ಎ.ಬಿ.ಪಾಟೀಲ
ಗಣ್ಯ ವ್ಯಕ್ತಿಗಳಾದ ಸಂಜಯ ಶಿರಕೋಳಿ ನೆರವೇರಿಸಿದರು, ಮುಖ್ಯ ಅಥಿತಿಗಳಾ ಮಾಜಿ ಜಿ.ಪಂ ಸದಸ್ಯರಾದ ಪವನ ಕತ್ತಿ ಸಂಕೇಶ್ವರ ಪುರಸಭೆಯ ಮಾಜಿ ಅಧ್ಯಕ್ಷರಾದ ಶ್ರೀಕಾಂತ ಹತನೂರೆ, ಸದಸ್ಯರಾದ ಸುನೀಲ ಪರ್ವತರಾವ, ಶಿವಾನಂದ ಮುಡಶಿ, ಮುಖಂಡರಾದ ಕುಮಾರ ಬಸ್ತವಾಡಿ,
ಆನಂದ ಸಂಸುದ್ದಿ, ರೋಹನ ನೇಸರಿ ಶಂಕರ ಹೆಗಡೆ, ಬಸವರಾಜ ಬಸ್ತವಾಡಿ, ಅಪ್ಪಾಸಾಹೇಬ ಕರದನ್ನವರ, ಚಂದ್ರಶೇಖರ ಕಿಲ್ಲೆದಾರ, ಮಲಗೌಡಾ ಪಾಟೀಲ ಈ ವೇಳೆ ಕಮೀಟಿಯವರಾದ ಚಿದಾನಂದ ಕರದನ್ನವರ , ರಾಮು ಕಾಕೋಳಿ, ಕುಶೇಂದ್ರ ಮರಡಿ, ಕಾಡೇಶ ಬಸ್ತವಾಡಿ, ಗಂಗಾಧರ ಬೋರಗಲ್ಲಿ, ಮಾರುತಿ ಘಸ್ತಿ, ಸಾದಿಕ ನಸರಬಿ, ಅಪ್ಪಾಸಾಹೇಬ ಮುಲ್ತಾನಿ, ಅನೀಲ ಖಾತೆದಾರ, ಆಕಾಶ ಖಾಡೆ ಹಾಜರಿದ್ದರು.
ಹೋರಿಗಳ ಸ್ಪರ್ಧೆಗಳಲ್ಲಿ : ಹಲ್ಲು ಹಚ್ಚದ ಹೋರಿಗಳಲ್ಲಿ ಪ್ರಥಮವಾಗಿ ವಿರಾಟ ಮರಡಿ, ದ್ವಿತೀಯವಾಗಿ ಮಹಾಂತೇಶ ಮಿರಜಿ, ತೃತೀಯ ಪ್ರೀತಂ ಹೆಗ್ಗಾಯಿ, ಎರಡು ಹಲ್ಲು ಹಚ್ಚಿದ ಕರುಗಳಲ್ಲಿ ಪ್ರಥಮ ಮಹಾಂತೇಶ ಚೌಗಲಾ, ದ್ವೀತಿಯ ಚಿದಾನಂದ ಹಿರೇಮಠ, ತೃತೀಯ ಅಜ್ಜಪ್ಪಾ ಶೆಟ್ಟಿಮನಿ,
ನಾಲ್ಕು ಮತ್ತು ಆರು ಹಲ್ಲು ಹಚ್ಚಿದ ಹೋರಿಗಳಲ್ಲಿ ಪ್ರಥಮ ಶಶಿವಂತ ಮಗದುಮ್ಮ, ದ್ವೀತಿಯ ಆದಿತ್ಯ ಬೆಳವಿ, ತೃತೀಯ ಗೀರಿಶ ನಾಯಿಕ ಎತ್ತುಗಳ ಜೋಡಿಗಳಲ್ಲಿ  ಪ್ರಥಮ ಬಹುವನ್ನು ಸುರೇಶ ಖೋತ, ದ್ವೀತಿಯ ಮುನ್ನಾ ನದಾಪ, ತೃತೀಯ ಚಂದು ಕೋಳಿ ಅವರು ತಮ್ಮದಾಗಿಸಿಕೊಂಡರು.
WhatsApp Group Join Now
Telegram Group Join Now
Share This Article