ಹುಬ್ಬಳ್ಳಿ,ಜು.೨೪ : ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಫ್ಲೆಕ್ಸಿಬಲ್ ವರ್ಕ್ ಸ್ಪೇಸ್ ಒದಗಿಸುತ್ತಿರುವವರಲ್ಲಿ ಪ್ರೀಮಿಯಂ ಫ್ಲೆಕ್ಸಿಬಲ್ ವರ್ಕ್ ಸ್ಪೇಸ್ ಪರಿಹಾರಗಳನ್ನು ನೀಡುವ ಆರಂಭಿಕ ಅಂತರರಾಷ್ಟ್ರೀಯ ಬ್ರಾಂಡ್ ಗಳಲ್ಲಿ ಒಂದಾಗಿರುವ ಎಕ್ಸಿಕ್ಯೂಟಿವ್ ಸೆಂಟರ್ ಇಂಡಿಯಾ ಲಿಮಿಟೆಡ್ ಇದೀಗ ತನ್ನ ಡ್ರಾಫ್ಟ್ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ (ಡಿಆರ್‌ಎಚ್‌ಪಿ) ನ್ನು ಮಾರುಕಟ್ಟೆ ನಿಯಂತ್ರಕ ಸೆಕ್ಯುರಿಟೀಸ್ ಎಂಡ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಗೆ ಸಲ್ಲಿಸಿದೆ.
ಈ ಐಪಿಓ ?೨ ಮುಖಬೆಲೆಯ ಈಕ್ವಿಟಿ ಷೇರುಗಳ ಹೊಸ ಸಂಚಿಕೆ ಒಳಗೊಂಡಿದ್ದು, ಒಟ್ಟು ?೨,೬೦೦ ಕೋಟಿಗಳವರೆಗೆ ಸಂಗ್ರಹಿಸುವ ಗುರಿ ಹೊಂದಿದೆ. ಕಂಪನಿಯು ನಿವ್ವಳ ಆದಾಯವನ್ನು ಕಂಪನಿಯ ಕಾರ್ಪೊರೇಟ್ ಪ್ರೊಮೋಟರ್ ಗಳಲ್ಲಿ ಒಂದಾಗಿರುವ ಟಿಇಸಿ ಸಿಂಗಾಪುರ್ ನ ಎರಡು ಸ್ಟೆಪ್- ಡೌನ್ ಅಂಗಸಂಸ್ಥೆಗಳಾದ ಟಿಇಸಿ ಎಸ್ ಜಿ ಪಿ ಮತ್ತು ಟಿಇಸಿ ದುಬೈ ಖರೀದಿಯ ಭಾಗಶಃ ಪಾವತಿಗೆ ಹಣಕಾಸು ಒದಗಿಸಲು ತನ್ನ ನೇರ ಅಂಗಸಂಸ್ಥೆಯಾದ ಟಿಇಸಿ ಅಬುಧಾಬಿಯಲ್ಲಿ ಹೂಡಿಕೆ ಮಾಡಲು ಯೋಜನೆ ರೂಪಿಸಿದೆ. ಈ ವಹಿವಾಟು ಆಂತರಿಕ ಪುನರ್ರಚನೆ ಒಪ್ಪಂದದ ನಿಯಮಗಳಿಗೆ ಅನುಗುಣವಾಗಿ ನಡೆಯಲಿದೆ. ಉಳಿದ ಆದಾಯವನ್ನು ಸಾಮಾನ್ಯ ಕಾರ್ಪೊರೇಟ್ ಉದ್ದೇಶಗಳಿಗೆ ಹಂಚಿಕೆ ಮಾಡಲಾಗುವುದು..
ಮಾರ್ಚ್ ೩೧, ೨೦೨೫ ರಂತೆ ಕಂಪನಿಯು ಒಟ್ಟು ೭ ದೇಶಗಳ ೧೪ ನಗರಗಳಲ್ಲಿ ೮೯ ಕಾರ್ಯಾಚರಣಾ ಕೇಂದ್ರಗಳನ್ನು ಒಳಗೊಂಡಿದೆ.೨೦೨೫ರ ಆರ್ಥಿಕ ವರ್ಷದಲ್ಲಿ, ಕಂಪನಿಯು ೧,೫೫೦ ಕ್ಕಿಂತ ಹೆಚ್ಚು ವಿಶಿಷ್ಟ ಗ್ರಾಹಕರಿಗೆ ಸೇವೆ ಸಲ್ಲಿಸಿದೆ, ಇದರಲ್ಲಿ ಬಹುರಾಷ್ಟ್ರೀಯ ಕಾರ್ಪೊರೇಷನ್‌ಗಳು, ಪ್ರಮುಖ ಬ್ರಾಂಡ್ ಗಳು ಮತ್ತು ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು ಸೇರಿವೆ. ಈ ಕಂಪನಿಯ ಕೆಲವು ಪ್ರಮುಖ ಗ್ರಾಹಕರೆಂದರೆ: ಅನಾಪ್ಲಾನ್ ಮಿಡಲ್ ಈಸ್ಟ್ ಲಿಮಿಟೆಡ್, ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ, ಅಟ್ಯೇಟಿ ಐಟಿ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್, ಬಿಬಿವಿಎ, ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್, ಹೈನ್ಸ್, ಸ್ಯಾಂಡ್ ವಿಕ್, ಕ್ರಿಟಿಯೊ, ಕ್ರಂಚಿರೋಲ್, ಗ್ರೀನ್ ಓಕ್ ಇಂಡಿಯಾ ಇನ್ವೆಸ್ಟ್ ಮೆಂಟ್ ಅಡ್ವೈಸರ್ಸ್ ಪ್ರೈವೇಟ್ ಲಿಮಿಟೆಡ್, ಮಾಸ್ಟ್- ಜೇಗರ್ ಮೀಸ್ಟರ್ ಸರ್ವೀಸಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್, ನಾರ್ಥ್ ಲ್ಯಾಂಡ್ ಕಂಟ್ರೋಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಆರ್ಥೋಲೈಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ದಿ ಟ್ರೇಡ್ ಡೆಸ್ಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಟ್ರೂಕಾಲರ್, ಝಸ್ಕೇಲರ್, ಓಪನ್ ಟೆಕ್ಸ್ಟ್ ಮತ್ತು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ.ಮಾರ್ಚ್ ೩೧, ೨೦೨೫ ರಂದು ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಕಂಪನಿಯು ಒಟ್ಟು ೧,೩೪೬.೩೯೭ ಕೋಟಿಗಳ ಒಟ್ಟು ಆದಾಯವನ್ನು ವರದಿ ಮಾಡಿದೆ, ಇದು ಆರ್ಥಿಕ ವರ್ಷ೨೪ ರಲ್ಲಿ ಗಳಿಸಿದ ೧,೦೫೫.೩೧೯ ಕೋಟಿಗಳಿಗಿಂತ ಶೇ.೨೭.೫೮ ರ
ಸೆಬಿಯಲ್ಲಿ ಡಿಆರ್‌ಎಚ್‌ಪಿ ಸಲ್ಲಿಸಿದ ಎಕ್ಸಿಕ್ಯೂಟಿವ್ ಸೆಂಟರ್
