ಚಾಮರಾಜನಗರ, ಅಕ್ಟೋಬರ್ 16: ಭರ್ಜರಿ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿದ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳ್ನು ನೀಡಿದೆ. ಮಹಿಳೆಯರಿಗೆ ಬಸ್ ಫ್ರೀ, ಉಚಿತ ವಿದ್ಯುತ್, ತಿಂಗಳಿಗೆ 2 ಸಾವಿರ ರೂ. ಮಹಿಳೆಯರ ಖಾತೆಗೆ ಹಣ ವರ್ಗಾವಣೆ, ಅನ್ನಭಾಗ್ಯ, ಸ್ಕಾಲರ್ ಶಿಪ್ ಎಂದು ಗ್ಯಾರಂಟಿಗಳ ಮೇಲೆ ಗ್ಯಾರಂಟಿಗಳನ್ನು ನೀಡಿದೆ. ಈ ಹಣದುಬ್ಬರ ಸರಿದೂಗಿಸಲು ಬೆಲೆಗಳ ಏರಿಕೆ ಕೂಡ ಮಾಡಿದೆ. ಆದರೆ ಕೇಂದ್ರ ಸರ್ಕಾರ ಜಿಎಸ್ಟಿ ಯಾವಾಗ ಕಡಿತ ಮಾಡಿತೋ ಕೆಲ ರಾಜ್ಯದ ಸರ್ಕಾರಗಳು ಒದ್ದಾಡತೊಡಗಿವೆ. ಜಿಎಸ್ಟಿ ಪರಿಷ್ಕರಣೆಯಿಂದ ಆಗಬಹುದಾದ ನಷ್ಟವನ್ನು ಸರಿದೂಗಿಸಲು ಸರ್ಕಾರ ಈಗ ಅಬಕಾರಿ ಇಲಾಖೆಗೆ ಸೂಚನೆ ಕೊಟ್ಟಿದ್ದು, ಇಲಾಖೆಯ ಸಿಬ್ಬಂದಿ ಬಾರ್ ಮಾಲೀಕರ ಪ್ರಾಣ ಹಿಂಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮದ್ಯ ಮಾರಾಟ ಹೆಚ್ಚಳಕ್ಕೆ ಬಾರ್ ಮಾಲೀಕರ ಮೇಲೆ ಅಬಕಾರಿ ಇಲಾಖೆ ಒತ್ತಡ

ದು ಲೀಟರ್ ಮದ್ಯ ಮಾರಾಟ ಮಾಡುವಲ್ಲಿ 10 ಲೀಟರ್ ಮಾರಾಟ ಮಾಡಿ ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳು ಮೀಟಿಂಗ್ ಮಾಡಿ ಬಾರ್ ಲೈಸೆನ್ಸ್ ಹೊಲ್ಡರ್ಗಳಿಗೆ ಕಟ್ಟಪ್ಪಣೆ ಹೊರಡಿಸಿದ್ದಾರೆ. ಇದರಿಂದ ಕೆಂಡಾಮಂಡಲರಾಗಿರುವ ಬಾರ್ ಮಾಲೀಕರು ರಾಜ್ಯ ಸರ್ಕಾರ ಹಾಗೂ ಅಬಕಾರಿ ಇಲಾಖೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಡಿಯದೆ ಇರುವವರನ್ನು ನಾವು ಹೇಗೆ ಕರೆತಂದು ವ್ಯಾಪಾರ ಮಾಡುವುದು? ವರ್ಷದಿಂದ ವರ್ಷಕ್ಕೆ ಸೇಲ್ಸ್ 10 ಪಟ್ಟು ಹೆಚ್ಚು ಮಾಡಿ ಅಂದರೆ ಹೇಗೆ ಸಾಧ್ಯ? ರಾಜ್ಯ ಸರ್ಕಾರ ತನ್ನ ಬೊಕ್ಕಸ ತುಂಬಿಸಿಕೊಳ್ಳಲು ಮದ್ಯ ಮಾರಾಟಗಾರರ ವಿರುದ್ದ ಒತ್ತಡ ಹಾಕುವುದು ಸರಿಯಲ್ಲ ಎಂದು ಸರ್ಕಾರ ಹಾಗೂ ಅಬಕಾರಿ ಇಲಾಖೆ ವಿರುದ್ದ ಹರಿ ಹಾಯ್ದಿದ್ದಾರೆ.