ಬಳ್ಳಾರಿ, ಫೆ.19: ಪರೀಕ್ಷೆಯಂದ್ರೇ ಭಯಬೇಡ, ಬೋರ್ಡ್ ಪರೀಕ್ಷೆ ಎಂದರೆ ಸ್ವಲ್ಪ ಭಯ ಇರೋದು ಸಹಜ. ಮಕ್ಕಳ ಮೇಲೆ ಒತ್ತಡ ಹಾಕಬೇಡಿ ಎಂದು ಪೋಷಕರಿಗೆ ಡಿಸಿ ನಾಗೇಂದ್ರ ಪ್ರಸಾದ್ ಅವರು ಮನವಿ ಮಾಡಿದ್ದಾರೆ.
ಅಚರು ಇಂದು ಹೊಸ ಡಿಸಿ ಸಭಾಂಗಣದಲ್ಲಿ ಸುದ್ದಿಗೋಷ್ಟಿ ನಡೆಸಿ ಎಸ್ ಎಸ್ ಎಲ್ ಸಿ ಪರೀಕ್ಷೆಗಳನ್ನು ನಡೆಸಲು ಸಕಲ ಸಿದ್ದತೆ ಮಾಡಿಕೊಂಡಿದೆ ಎಂದು ಹೇಳಿದರು.
ಪರೀಕ್ಷೆ ಸುಧಾರಣೆ ವಿಚಾರದಲ್ಲಿ ಸಾಕಷ್ಟು ಕ್ರಮ ತೆಗೆದುಕೊಂಡಿದ್ದೇವೆ. ಮಕ್ಕಳಿಗೆ ಬರವಣಿಗೆ ಅಭ್ಯಾಸ ಮಾಡಿಸಿದ್ದೇವೆ. ಪ್ರಶ್ನೆ ಪತ್ರಿಕೆ ತೆಗೆದುಕೊಂಡು ಹೋಗುವ ವಾಹನಕ್ಕೆ ಜಿಪಿಎಸ್ ಅಳವಡಿಸಲಾಗ್ತಿದೆಂದರು.
ಜಿಪಂ ಸಿಇಓ ಮಾತನಾಡಿ ಪರೀಕ್ಷೆ ಕೇಂದ್ರದ ಔಟ್ ಸೈಡ್ ಮತ್ತು ಪ್ರಿನ್ಸಿಪಾಲ್ ಚೇಂಬರ್ ನಲ್ಲಿಯೂ ಸಿಸಿ ಕ್ಯಾಮರ ಅಳವಡಿಸಲಾಗ್ತಿದೆ. ಪ್ರಿಪ್ರರೇಟರಿ ಎಕ್ಸಾಂ ಕೂಡ ಕಟ್ಟು ನಿಟ್ಟಾಗಿ ಮಾಡಿದ್ದೇವೆ ಇದರಲ್ಲಿ ಯೂ ಸಹ ವಿದ್ಯಾರ್ಥಿನಿಯರ ರಿಸಲ್ಟ್ ಹೆಚ್ಚಾಗಿದೆ ಅದ್ರೇ ವಿದ್ಯಾರ್ಥಿಗಳ ರಿಸಲ್ಟ್ ಕಡಿಮೆ ಬಂದಿರೋ ಹಿನ್ನೆಲೆಯಲ್ಲಿ ಅವರಿಗೆ ವಿಶೇಷ ತರಗತಿಯನ್ನು ತೆಗೆದು ಕೊಳ್ಳಲಾಗ್ತಿದೆ. ಹಾಸ್ಟೆಲ್ ನಲ್ಲಿ ವಾರ್ಡನ್ ಗಳು ಕ್ಲಾಸ್ ತೆಗೆದುಕೊಳ್ಳುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗ್ತಿದೆ.. ಈ ವರ್ಷ ಫಲಿತಾಂಶ ಹೆಚ್ಚಾಗುವ ನಿರೀಕ್ಷೆಯಿದೆ.ಲ ಇದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಮಾರ್ಚ 18 ರಿಂದ ಆರಂಭಗೊಳ್ಳಲಿವೆ. ಇದಕ್ಕಾಗಿ ಜಿಲ್ಲೆಯಲ್ಲಿ 65 ಪರೀಕ್ಷಾ ಕೇಂದ್ರಗಳ ಸಿದ್ದತೆ ಮಾಡಿದೆ. 803 ಸಿಸಿ ಕೆಮೆರಾ ಅಳವಡಿಸಿದೆ. ಜಿಲ್ಲೆಯ 149 ಶಾಲೆಗಳ 23271 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪೂರ್ವ ಸಿದ್ದತಾ ಪರೀಕ್ಷೆಯಲ್ಲಿ ಶೇ 62 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆಂದು ತಿಳಿಸಿದರು. ಎಡಿಸಿ ಮಹಮ್ಮದ್ ಝುಬೇರ್, ಎಸ್ಪಿ ಡಾ.ಸುಮನ್ ಪೆನ್ನೇಕರ್ ಉಪಸ್ಥಿತರಿದ್ದರು.


