ಜೀವನದಲ್ಲಿ ಪ್ರತಿಯೊಬ್ಬರಿಗೂ ಗುರಿ ಮುಖ್ಯ : ಈರಣ್ಣ ಕಡಾಡಿ 

Hasiru Kranti
ಜೀವನದಲ್ಲಿ ಪ್ರತಿಯೊಬ್ಬರಿಗೂ ಗುರಿ ಮುಖ್ಯ : ಈರಣ್ಣ ಕಡಾಡಿ 
WhatsApp Group Join Now
Telegram Group Join Now
ಮೂಡಲಗಿ: ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಉನ್ನತ ಗುರಿ ಹೊಂದಿರಬೇಕು, ಆತ್ಮವಿಶ್ವಾಸ ಮತ್ತು ನಂಬಿಕೆಯಿಂದ  ಮುಂದುವರೆಯಬೇಕು. ಶಿಕ್ಷಣ ಎಂಬುದು ಪಠ್ಯ, ಪರೀಕ್ಷೆ, ಅಂಕಪಟ್ಟಿ, ಉದ್ಯೋಗ, ಸಂಬಳಕ್ಕೆ ಸೀಮಿತವಾಗದೆ ಜೀವನವನ್ನು ಕಟ್ಟಿಕೊಳ್ಳಲು ದಾರಿ ದೀಪವಾಗಬೇಕು. ಹೀಗಾದಾಗ ಬದುಕಿಗೆ ಒಂದು ಅರ್ಥವಿರುತ್ತದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಶನಿವಾರ ಜ-3 ರಂದು ತಾಲೂಕಿನ ಶಿವಾಪೂರ (ಹ) ಸಂಸದರ ಆದರ್ಶ ಗ್ರಾಮದಲ್ಲಿ ಹಿಂದೂಸ್ತಾನ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್‌ನ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿ.ಎಸ್.ಆರ್)  ಯೋಜನೆಯಡಿ ಮಂಜೂರಾದ ಒಟ್ಟು 19 ಲಕ್ಷ ರೂ.ಗಳ ಶಾಲಾ ಸಲಕರಣೆಗಳನ್ನು ವಿತರಿಸಿ ಮಾತನಾಡಿದ ಅವರು ಶಾಲೆಯಲ್ಲಿ ಮಕ್ಕಳು ಕಲಿಯುವುದಕ್ಕಿಂತ ಹೆಚ್ಚು ಮನೆ ಹಾಗೂ ಸಮಾಜದಿಂದ ಕಲಿಯುತ್ತಾರೆ. ಆದ್ದರಿಂದ ಉತ್ತಮ ನಡತೆ, ಸಂಸ್ಕಾರ, ಆಚಾರ, ವಿಚಾರ ಸಂಗತಿಗಳು ಸಿಗುವ ಹಾಗೇ ನೋಡಿಕೊಳ್ಳಬೇಕು. ಶಾಲೆಗೆ ಸೇರಿಸುವುದಷ್ಟೇ ತಮ್ಮ ಜವಾಬ್ದಾರಿ ಎಂದು ಅನೇಕ ಪೋಷಕರು ಭಾವಿಸಿದ್ದಾರೆ. ಇದು ತಪ್ಪು. ಮಕ್ಕಳ ಎಲ್ಲ ಚಟುವಟಿಕೆ ಗಮನಿಸಿ, ಸಕಾಲದಲ್ಲಿ ಅವರನ್ನು ತಿದ್ದಬೇಕಾಗಿರುವುದು ಪೋಷಕರ ಹೊಣೆಗಾರಿಕೆಯ ಭಾಗ ಎಂದು ಅಭಿಪ್ರಾಯಪಟ್ಟರು.
ಗ್ರಾಮೀಣ ಭಾಗದ ಶಾಲೆಗಳನ್ನು ಸಶಕ್ತಗೋಳಿಸುವ ನಿಟ್ಟಿನಲ್ಲಿ ಹಿಂದೂಸ್ತಾನ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ನ ಸಿ.ಎಸ್.ಆರ್ ನಿಧಿ ಯೋಜನೆಯಡಿ ಶಾಲೆಗಳಿಗೆ ಕಂಪ್ಯೂಟರ್, ಪ್ರೋಜೆಕ್ಟರ್, ಗ್ರೀನ್ ಬೋರ್ಡ್, ಡೆಸ್ಕ್, ಚೇರ, ಟೇಬಲ್ ಹೀಗೆ ಹಲವಾರು ಸಲಕರಣೆಗಳನ್ನು ಶಿವಾಪೂರ (ಹ) ಗ್ರಾಮ ಪಂಚಾಯತ ವ್ಯಾಪ್ತಿಯ ಎಲ್ಲ ಶಾಲೆಗಳಿಗೆ  ವಿತರಿಸಲಾಗಿದೆ. ಸರಕಾರಿ ಪ್ರೌಢ ಶಾಲೆಗೆ (4.68 ಲಕ್ಷ) ರೂ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ (4.37 ಲಕ್ಷ) ರೂ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೀಮವ್ವಾ ಗುಡಿ ತೋಟ-2 (3.39 ಲಕ್ಷ) ರೂ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ  ಮಡ್ಡಿ ತೋಟ-1  (3.57 ಲಕ್ಷ) ರೂ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮದಲಮಟ್ಟಿ ತೋಟ (3.1 ಲಕ್ಷ) ರೂ.ಗಳ ಸಲಕರಣೆಗಳನ್ನು ನೀಡಲಾಗಿದೆ ಎಂದರು.
ಶಿವಾಪೂರ (ಹ) ಗ್ರಾಮದಲ್ಲಿ ಈಗಾಗಲೇ ರಾಜ್ಯಸಭಾ ಸಂಸದರ ನಿಧಿಯಿಂದ ಅಡವಿಸಿದ್ದೇಶ್ವರ ಮಠದ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ ರೂ, ಮಾದರ ಸಮಾಜದ ಓಣಿಯ (ಹರಿಜನಕೇರಿ) ಶ್ರೀ ದುರ್ಗಾದೇವಿ ದೇವಸ್ಥಾನದ ಎದುರುಗಡೆ ಶೆಲ್ಟರ ನಿರ್ಮಾಣಕ್ಕೆ 5 ಲಕ್ಷ ರೂ, ಬಸ್ ಪ್ರಯಾಣಿಕರ ತಂಗುದಾಣ ನಿರ್ಮಾಣಕ್ಕೆ 5 ಲಕ್ಷ ರೂ, ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ 25 ಲಕ್ಷ ರೂ, ಕುಡಚಿ, ಬೆಳಗಲಿ, ಪಾಟೀಲ ಇವರ ತೋಟದ ರಸ್ತೆ ದುರಸ್ತಿಗೆ 60 ಸಾವಿರ ರೂ ಹೀಗೆ 1 ಕೋಟಿಗೂ ಹೆಚ್ಚು ಅನುದಾನವನ್ನು ನೀಡಿ ಗ್ರಾಮದ ಅಭಿವೃದ್ದಿಯಲ್ಲಿ ನಾನು ಕೂಡಾ ಅಳಿಲು ಸೇವೆ ಸಲ್ಲಿಸುತ್ತಿದ್ದೇನೆ. ಅದೇ ರೀತಿ ಬರುವಂತಹ ದಿನಗಳಲ್ಲಿ ಯುವಕರ ಅನುಕೂಲಕ್ಕಾಗಿ ಗ್ರಾಮದಲ್ಲಿ ಒಂದು ಓಪನ್ ಜಿಮ್ ಸೌಲಭ್ಯ ಒದಗಿಸಿ ಕೊಡಲು ನಾನು ಪ್ರಯತ್ನಿಸುತ್ತಿದ್ದೇನೆ, ಇನ್ನೂ ಹೆಚ್ಚು ಸೇವೆಯನ್ನು ಮಾಡಲು ನಾನು ಸಿದ್ದನಿದ್ದೇನೆ, ತಾವು ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಿದರು.
ಪ್ರಾಥಮಿಕವಾಗಿ ಮಾತನಾಡಿದ ಬಿಇಒ ಪ್ರಕಾಶ ಹೀರೆಮಠ ಇಂದಿನ ಶಿಕ್ಷಣ ಬಲವರ್ಧನೆ ಆಗಲಿಕ್ಕೆ ಎಲ್ಲ ತರಹದ ಸಲಕರಣೆಗಳನ್ನು ನೀಡಿದ್ದಾರೆ ಎಂದು ಸಂಸದರ ಕಾರ್ಯವನ್ನು ಶ್ಲಾಘೀಸಿದರು. ಸಾನಿಧ್ಯವನ್ನು ಅಡವಿ ಸಿದ್ದೇಶ್ವರ ಮಠದ ಪೂಜ್ಯರಾದ ಅಡವಿಸಿದ್ದರಾಮ ಸ್ವಾಮಿಜೀಗಳು ವಹಿಸಿದ್ದರು.
ಬೆಳಗಾವಿ ವಿಭಾಗದ ಎಚ್.ಪಿ.ಸಿ.ಎಲ್ ಮುಖ್ಯ ಪ್ರಾದೇಶಿಕ ವ್ಯವಸ್ಥಾಪಕ ವಿನಯಕಾಂತ ಅಬಿಗೇರಿ, ಸೇಲ್ಸ್ ಅಧಿಕಾರಿ ಸಾಯಿ ಚರಣ, ಮಲಗೌಡ ಪಾಟೀಲ, ಈಶ್ವರ ಬೆಳಗಲಿ,ಕೆಂಪಣ್ಣ ಮುಧೋಳ, ಶಿವಬಸು ಜುಂಜರವಾಡ, ಶಿವಬಸು ಬೆಳಗಲಿ, ಅಜ್ಜಪ್ಪ ಬೆಂಡವಾಡ, ಶೇಖಪ್ಪ ರಡೆರಟ್ಟಿ, ಶಿವಬಸು ತುಕ್ಕನ್ನವರ, ಮಹಾದೇವ ಬೆಳಗಲಿ ಮಲ್ಲಪ್ಪ ಜುಂಜರವಾಡ, ಸುಭಾಸ ಸೋನವಾಲ್ಕರ, ಬಸವರಾಜ ಮದಲಮಟ್ಟಿ, ಶ್ರೀಕಾಂತ ಕೌಜಲಗಿ, ಬಸವರಾಜ ಸಾಯನ್ನವರ, ಮಹಾಂತೇಶ ಕುಡಚಿ, ಪಿ.ಡಿ.ಒ ಬಬಲಿ, ಈರಯ್ಯ ಹಿರೇಮಠ, ನಿರ್ವಾಣಿ ಹೆಬ್ಬಾಳ, ಪರಪ್ಪ ಗಿರೆಣ್ಣವರ, ಲಕ್ಕಪ್ಪ ಕಬ್ಬೂರ ಸೇರಿದಂತೆ  ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article