ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಿ:  ಪ್ರೊ. ಸಿ.ಎಂ. ತ್ಯಾಗರಾಜ್

Ravi Talawar
ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಿ:  ಪ್ರೊ. ಸಿ.ಎಂ. ತ್ಯಾಗರಾಜ್
WhatsApp Group Join Now
Telegram Group Join Now
 ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ  ಉದ್ಘಾಟನೆ

ಬೆಳಗಾವಿ: ದುಶ್ಚಟ ಮತ್ತು ಮದ್ಯವ್ಯಸನದಿಂದ ಹಲವಾರು ಕುಟುಂಬಗಳು ಸಮಸ್ಯೆಗೆ ಸಿಲುಕಿವೆ.  ವ್ಯಸನ ಮುಕ್ತ ಸಮಾಜ ನಿರ್ಮಿಸಲು ಎಲ್ಲರೂ ಕೈ ಜೋಡಿಸಬೇಕು. ಯುವಜನೋತ್ಸವಗಳು ಮನುಷ್ಯನಲ್ಲಿ ಸ್ಫೂರ್ತಿ ತುಂಬುತ್ತವೆ. ಜೀವನದಲ್ಲಿ ಸ್ಫೂರ್ತಿಯೇ ನಮ್ಮ ಶಕ್ತಿ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೋ.ಸಿ.ಎಂ. ತ್ಯಾಗರಾಜ್  ಅವರು ಹೇಳಿದರು.
ನಗರದ ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈ ಭಾರತ ಕೇಂದ್ರ ಹಾಗೂ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ  ಆಯೋಜಿಸಲಾದ ಬೆಳಗಾವಿ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು. ಎಲ್ಲರೂ ಒಂದಾದಾಗ ಮಾತ್ರ ಸಂಸ್ಕಾರಯುತ್ತವಾದ ಸಮಾಜ ನಿರ್ಮಿಸಲು ಸಾಧ್ಯ, ಅದು ಯುವಕರಲ್ಲಿ ಕೈಯಲ್ಲಿದೆ ಎಂದು ತಿಳಿಸಿದರು.

ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ದೃಡ ಸಂಕಲ್ಪದಿಂದ ಸಮಾಜದಲ್ಲಿ ಬದಲಾವಣೆ ಕಾಣಲಿದೆ.   ಸಮಾಜದಲ್ಲಿ ಮಾದಕವಸ್ತುಗಳ ನಿರ್ಮೂಲನೆಯಾಗುವಲ್ಲಿ ಯುವಕರ ಪಾತ್ರ ಹಿರಿದಾಗಿದೆ. ವಿದ್ಯಾರ್ಥಿ ಸಮಯ ಅತ್ಯಂತ ಮೌಲ್ಯವಾಗಿದ್ದು ಈ ಸಮಯದಲ್ಲಿ ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೇ ಉತ್ತಮ ಜೀವನ ನಡೆಸಬೇಕು. ಹೊಸತನದಿಂದ ತಮ್ಮಲ್ಲಿರುವ ಶಕ್ತಿ ಅರಳಿ, ಜಾಗತೀಕ ಮನ್ನಣೆ ಪಡೆಯುತ್ತದೆ. ಕ್ರಿಯಾಶಕ್ತಿ, ಜ್ಞಾನಶಕ್ತಿ, ಕಲಾ ಶಕ್ತಿ ಬೆಳೆದು ಅದುವೇ ಜೀವನದ ವಿಧಾನವಾಗುತ್ತದೆ ಎಂದರು.

ಶಾಸಕ ಆಸೀಫ್ ಸೇಠ್  ಅವರು ಮಾತನಾಡಿ,   ಯುವಪೀಳಿಗೆಯೂ ಮೊಬೈಲ್ ಗೀಳಿ ಬಿಟ್ಟು  ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಿದೆ. ಜೊತೆಗೆ ಹಬ್ಬ ಹರಿದಿನ, ಕ್ರೀಡೆಗಳು, ಸಾಂಸ್ಕೃತೀಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಬೇಕು. ಶಿಕ್ಷಕರು, ಪಾಲಕರು ಮತ್ತು ಹಿರಿಯರ ಕನಸನ್ನು ಈಡೇಸಿರುವ ಬೆಳಕಾಗಿ ನೀವು ನಿಲ್ಲಬೇಕು ಎಂದು  ಹೇಳಿದರು.

ಪೊಲೀಸ್‌ ಸಿಪಿಐ ಕಾಲಿಮಿರ್ಚಿ ಅವರು ಮಾತನಾಡಿ,  ಪೊಲೀಸ್ ಠಾಣೆಗಳೂ ಮೊದಲೂ ಭಯದ ಕೇಂದ್ರಗಳಾಗಿದ್ದವು. ಆದರೇ, ಈಗ ಇಲಾಖೆ 112 ಸಹಾಯವಾಣಿಯ ಮೂಲಕ ನಿಮ್ಮ ಮನೆ ಬಾಗಿಲಿಗೆ ಬರಲಿದೆ. ಸಾರ್ವಜನಿಕರ ಸಮಸ್ಯೆ ಪೊಲೀಸ ಇಲಾಖೆ ಸಮಸ್ಯೆಯಾಗಿದೆ. ಅದನ್ನು ಪರಿಹರಿಸಲು ಸದಾ ಪೊಲೀಸ್ ಇಲಾಖೆ ಸಕ್ರಿಯವಾಗಿದೆ ಎಂದರು.

ಈ ವೇಳೆ ಶಾಸಕರಾದ ಆಸೀಫ್ ಸೇಠ್ ಅವರ ಅಧ್ಯಕ್ಷತೆಯಲ್ಲಿ ವಹಿಸಿದರು.ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಸಿ.ಎಂ. ತ್ಯಾಗರಾಜ್, ಕುಲಸಚಿವರಾದ ಸಂತೋಷ ಕಾಮಗೌಡ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕರಾದ ಬಿ. ಶ್ರೀನಿವಾಸ, ಸಂಗೊಳ್ಳಿ ರಾಯಣ್ಣ ವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಸ್.ಸಿ. ಪಾಟೀಲ್,   ಸಿಪಿಐ ಕಾಲಿಮಿರ್ಚಿ ಹಾಗೂ ರಾಷ್ಟ್ರೀಯ ಯವ ಪ್ರಶಸ್ತಿ ಪುರಸ್ಕೃತರಾದ ಮಲ್ಲೇಶ ಚೌಗಲಾ,  ರಾಜ್ಯ ಯವ ಪ್ರಶಸ್ತಿ ಪುರಸ್ಕೃತರಾದ ಸಿದ್ದಣ್ಣ ದುರದುಂಡಿ,  ವಿಠ್ಠಲ ಮುರಕ್ಕಿಬಾವಿ, ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತರು ಹಾಗೂ ಇತರರು ಇದ್ದರು.

WhatsApp Group Join Now
Telegram Group Join Now
Share This Article