ಪ್ರತಿ ಮಗುವಿನಲ್ಲೂ ಅಸಾಧಾರಣ ಪ್ರತಿಭೆ ಅಡಗಿರುತ್ತದೆ  : ಇಂದಿರಾ ಪ್ರಿಯದರ್ಶಿನಿ

Sandeep Malannavar
ಪ್ರತಿ ಮಗುವಿನಲ್ಲೂ ಅಸಾಧಾರಣ ಪ್ರತಿಭೆ ಅಡಗಿರುತ್ತದೆ  : ಇಂದಿರಾ ಪ್ರಿಯದರ್ಶಿನಿ
WhatsApp Group Join Now
Telegram Group Join Now
ಬಳ್ಳಾರಿ. ಫೆ.17 : ಪ್ರತಿ ಮಗುವಿನಲ್ಲೂ ಅಸಾಧಾರಣ ಪ್ರತಿಭೆ ಅಡಗಿರುತ್ತದೆ  ಅದನ್ನು ಗುರುತಿಸಿ ಬೆಳೆಸುವುದು ಶಿಕ್ಷಕರ ಹಾಗೂ ಪೋಷಕರ ಜವಾಬ್ದಾರಿಯಾಗಿರುತ್ತದೆ ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಿದಲ್ಲಿ ಅವರು ಭವಿಷ್ಯದಲ್ಲಿ ಉನ್ನತ ಸಾಧನೆಗಳನ್ನು ಮಾಡಲು ಸಹಕಾರಿಯಾಗುತ್ತದೆ ಇಂತಹ
ಸಮಾರಂಭಗಳು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಇಂದಿರಾ ಪ್ರಿಯದರ್ಶಿನಿ ಅಭಿಪ್ರಾಯ ಪಟ್ಟರು.
ಅವರು ನಗರದ ಶ್ರೀ ವಾಸವಿ ವಿದ್ಯಾಲಯದಲ್ಲಿ ಯು.ಕೆ.ಜಿ. ವಿದ್ಯಾರ್ಥಿಗಳ ಗ್ರಾಜುವೇಶನ್ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಗ್ರಾಜುವೇಶನ್ ಡೇ ಪ್ರಮಾಣ ಪತ್ರಗಳನ್ನು  ವಿತರಿಸಿ ಮಾತನಾಡಿದರು. ಮಕ್ಕಳು ತಮ್ಮ ಜೀವನದ ಮೊದಲ ಸಾಧನೆಯನ್ನು ಹೆಮ್ಮೆಯಿಂದ ಆಚರಿಸಿದರು.
ಮುಖ್ಯ ಅತಿಥಿಯಾದ ಸೊರಪ್ಪು ಲಲಿತಾ ರವರು ಮಾತನಾಡಿ, ಮಕ್ಕಳಲ್ಲಿ ಅಡಗಿರುವ  ಪ್ರತಿಭೆಯನ್ನು  ಪ್ರೀತಿ ಪ್ರೋತ್ಸಾಹ ಮತ್ತು ಮಾರ್ಗದರ್ಶನದಿಂದ ಮಾತ್ರ ತಮ್ಮ ಗುರಿಗಳನ್ನು ಸಾಧಿಸಬಲ್ಲರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯರಾದ ವೀರೇಶ್‌ .ಯು, ರವರು ಮಾತನಾಡಿ, ಯು.ಕೆ.ಜಿ. ವಿದ್ಯಾರ್ಥಿಗಳ ಈ ಪದವಿ ಪ್ರಧಾನ ದಿನವು ಅವರ ಜೀವನದಲ್ಲಿ ಒಂದು ಮಹತ್ವದ ಹಂತ, ಚಿಕ್ಕವಯಸ್ಸಿನಿಂದಲೇ ಮಕ್ಕಳಲ್ಲಿ ಆತ್ಮವಿಶ್ವಾಸ, ಸೃಜನಶೀಲತೆ ಹಾಗೂ ಮೌಲ್ಯಗಳನ್ನು ಬೆಳೆಸುವುದು ಅತ್ಯಗತ್ಯ.
ಈ ಹಂತದಿಂದ ಮಕ್ಕಳು ಹೊಸ ಶಿಕ್ಷಣದ ಪಯಣಕ್ಕೆಕಾಲಿಡುತ್ತಿರುವುದು, ಪೋಷಕರು ಮತ್ತು ಶಿಕ್ಷಕರು  ಅವರ ಜೊತೆ ನಿಂತು ಮಾರ್ಗದರ್ಶನ ನೀಡಬೇಕು ಎಂದು ಹೇಳುತ್ತಾ, ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿಸಂದರ್ಭದಲ್ಲಿ ಸ್ಪೀಕ್ ಮತ್ತು ಶೈನ್ ಇನ್ ಸ್ಟ್ರಾಪೇಸ್ಟ್ -2026 ಸ್ಪರ್ಧೆಯಲ್ಲಿ ವಿಜೇತರದವರಿಗೆ ಪ್ರಮಾಣ ಪತ್ರ ಹಾಗೂ ಚೆಕ್‌ ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಾಸವಿ ಎಜ್ಯುಕೇಷನ್ ಟ್ರಸ್ಟ್  ಅಧ್ಯಕ್ಷರಾದ ವಿಟ್ಟಾ ಕೃಷ್ಣ ಕುಮಾರ್, ಕಾರ್ಯದರ್ಶಿ ಪಿ.ಎನ್. ಸುರೇಶ್,  ಸಿಬ್ಬಂದಿ ವರ್ಗ, ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಿಂಡರ್ ಗಾರ್ಟನ್ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಮಕ್ಕಳ ಈ ನೃತ್ಯ ಹಾಡು ಹಾಗೂ ಮನರಂಜನಾ ಪ್ರದರ್ಶನಗಳು ಉಪಸ್ಥಿತರಿದ್ದವರ ಮನಸೆಳೆದವು.
ಕಾರ್ಯಕ್ರಮದ ಅಂತ್ಯದಲ್ಲಿ ವಿದ್ಯಾರ್ಥಗಳು, ಶಿಕ್ಷಕರು ಹಾಗೂ ಗಣ್ಯರೊಂದಿಗೆ ಗ್ರೂಪ್ ಫೋಟೋ
ತೆಗೆದುಕೊಳ್ಳಲಾಯಿತು. ಮತ್ತು ವಿದ್ಯಾರ್ಥಿಗಳಿಗೆ ಟ್ರಸ್ಟ್ ವತಿಯಿಂದ ಸಿಹಿ ಹಂಚಲಾಯಿತು. ಕಾರ್ಯಕ್ರಮವನ್ನು ಶಿಕ್ಷಕಿ  ಜಬೀನಾ ಬೇಗಂ  ನಿರ್ವಹಿಸಿದರು.
WhatsApp Group Join Now
Telegram Group Join Now
Share This Article