ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಗಜಾನನ ಮಂಗಸೂಳಿ

Ravi Talawar
ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಗಜಾನನ ಮಂಗಸೂಳಿ
WhatsApp Group Join Now
Telegram Group Join Now
ಅಥಣಿ : ರೋಟರಿ ಸಂಸ್ಥೆಯು ಕಳೆದ 27  ವರ್ಷಗಳಿಂದ ವಿವಿಧ ಸಾಮಾಜಿಕ ಸೇವೆಗಳನ್ನು ಸಲ್ಲಿಸುತ್ತಾ ಬಂದಿದೆ. ಪರಿಸರ ಸಂರಕ್ಷಣೆಯ ಹಿತ ದೃಷ್ಟಿಯಿಂದ  ಪಟ್ಟಣದ ಹೊರವಲಯದ ಜ್ಯೋತಿಬಾ ದೇವಸ್ಥಾನದ ಆವರಣದಲ್ಲಿ  ರೋಟರಿ ಉದ್ಯಾನವನ ಸ್ಥಾಪನೆ ಮಾಡುವ ಮೂಲಕ  ಇಲ್ಲಿ 350ಕ್ಕೂ ಅಧಿಕ ವಿವಿಧ ಜಾತಿಯ ಗಿಡಗಳನ್ನು  ಸಂರಕ್ಷಣೆ ಮಾಡುವ ಸಂಕಲ್ಪ ಹೊಂದಲಾಗಿದೆ ಎಂದು  ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ  ಗಜಾನನ ಮಂಗಸೂಳಿ ಹೇಳಿದರು.
 ಅವರು ಗುರುವಾರ  ಪಟ್ಟಣದ ಹೊರವಲಯದ ಅಬ್ಬಿಹಾಳ ರಸ್ತೆಯಲ್ಲಿರುವ  ಜ್ಯೋತಿಬಾ ದೇವಸ್ಥಾನದ ಗುಡ್ಡದಲ್ಲಿ  ರೋಟರಿ ಉದ್ಯಾನವನ ನಾಮಕರಣ ಹಾಗೂ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮುಂದಿನ ಪೀಳಿಗೆಗೆ  ಶುದ್ಧವಾದ ಗಾಳಿ ಮತ್ತು ನೀರು ದೊರಕಬೇಕಾದರೆ  ಪರಿಸರವನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ನಮ್ಮ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ, ಇಲ್ಲವೇ ತಂದೆ-ತಾಯಿಯ ಸ್ಮರಣೆಯ ಹೆಸರಿನಲ್ಲಿ  ಗಿಡಗಳನ್ನು ನೆಟ್ಟು  ಅವುಗಳನ್ನ ಪೋಷಿಸಬೇಕು. ಗಿಡಗಳನ್ನು ನೆಡುವುದು ಕೇವಲ  ಫೋಟೋ ಕಾರ್ಯಕ್ರಮಕ್ಕೆ ಸೀಮಿತವಾಗದೇ  ಅವುಗಳ ಬೆಳವಣಿಗೆಗೂ  ಶ್ರಮಿಸಬೇಕು ಎಂದು ರೋಟರಿ ಸದಸ್ಯರಿಗೆ ಸಲಹೆ  ನೀಡಿದರು.
 ಶ್ರೀ ಜ್ಯೋತಿಬಾ ದೇವಸ್ಥಾನದ  ಆವರಣದಲ್ಲಿ ಪ್ರಶಾಂತವಾದ ವಾತಾವರಣ ಮತ್ತು ಶುದ್ಧವಾದ ಆಮ್ಲಜನಕ ದೊರಕುವ ಪವಿತ್ರ ಸ್ಥಾನವಾಗಿದೆ. ಇಲ್ಲಿ ಇನ್ನೂ ಭಕ್ತರ ಸಂಖ್ಯೆ ಹೆಚ್ಚಾಗುವ ನಿಟ್ಟಿನಲ್ಲಿ  ದೇವಸ್ಥಾನದ ಜೀರ್ಣೋದ್ಧಾರ, ಮಕ್ಕಳ ಆಟಿಕೆ ಸಾಮಗ್ರಿಗಳನ್ನ ಅಳವಡಿಸುವುದು ಅಗತ್ಯವಾಗಿದೆ. ಈಗಾಗಲೇ ದೇವಸ್ಥಾನ ಕಮಿಟಿಯವರ ಅಪೇಕ್ಷೆಯಂತೆ ತಂತಿ ಬೇಲಿಯನ್ನು ರೋಟರಿ ಸಂಸ್ಥೆಯಿಂದ ನಿಮ್ಮಿಸಲಾಗಿದ್ದು, ಮುಂಬರುವ ದಿನಗಳಲ್ಲಿ  3 ಲಕ್ಷ ರೂಪಾಯಿ ವೆಚ್ಚದಲ್ಲಿ ಆಟಿಕೆ ಸಾಮಗ್ರಿಗಳನ್ನು ಅಳವಡಿಸಲಾಗುವುದು. ದೇವಸ್ಥಾನದ ಅಭಿವೃದ್ಧಿ ವಿಚಾರದಲ್ಲಿ  ಎಲ್ಲರೂ ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಶ್ರಮಿಸೋಣ  ಎಂದರು.
 ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ  ಶೆಟ್ಟರ ಮಠದ ಮರುಳುಸಿದ್ದ ಸ್ವಾಮೀಜಿ ಮಾತನಾಡಿ  ಕೊರೋನಾ ಸಂದರ್ಭದಲ್ಲಿ  ಆಕ್ಸಿಜನ್ ಕೊರತೆಯಿಂದ ಅನೇಕ ಜನರು ಪ್ರಾಣವನ್ನು ಕಳೆದುಕೊಂಡ ಸಂದರ್ಭವನ್ನು ನಾವೆಲ್ಲರೂ ನೋಡಿದ್ದೇವೆ. ಮುಂದಿನ ಜನಾಂಗಕ್ಕೆ ಶುದ್ಧವಾದ ಗಾಳಿ ನೀರು ಆಹಾರ  ದೊರಕಬೇಕಾದರೆ ಪ್ರತಿಯೊಬ್ಬರೂ  ಗಿಡಮರಗಳನ್ನು ನೆಟ್ಟು ಅವುಗಳನ್ನು ಬೆಳೆಸಬೇಕೆಂದು ಕರೆ ನೀಡಿದರು.
   ಶಿಕ್ಷಣ ಪ್ರೇಮಿ, ಮುಖಂಡರ ಶಿವಾನಂದ ದಿವಾನಮಳ ಪ್ರಾಸ್ತಾವಿಕವಾಗಿ ಮಾತನಾಡಿ ದೇವಸ್ಥಾನದ ಆವರಣದಲ್ಲಿ ರೋಟರಿ ಸಂಸ್ಥೆ ಹಾಗೂ ಸಾಮಾಜಿಕ ಅರಣ್ಯ ವಲಯದ ಅಧಿಕಾರಿಗಳ ಮೂಲಕ ವಿವಿಧ ಗಿಡದ ಮರಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಿರುವುದು ಮಹತ್ವದ ಕಾಯಕವಾಗಿದೆ. ರೋಟರಿ ಸಂಸ್ಥೆಗೆ ಹಾಗೂ ಸಾಮಾಜಿಕ ಅರಣ್ಯ ವಲಯದ ಅಧಿಕಾರಿಗಳಿಗೆ ದೇವಸ್ಥಾನ ಅಭಿವೃದ್ಧಿ ಸಮಿತಿ ಸದಸ್ಯರಿಗೆ ಅಭಿನಂದಿಸಿದರು.
 ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ  ಅಧ್ಯಕ್ಷ  ಸಚಿನ ದೇಸಾಯಿ, ಇನ್ನರ್ ವ್ಹಿಲ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ  ಪೂರ್ಣಿಮಾ ಪಾಂಗಿ,  ಇನ್ನರ್ ವ್ಹಿಲ್ ಸಂಸ್ಥೆಯ ಅಧ್ಯಕ್ಷ  ಸುನೀತಾ ದೇಸಾಯಿ, ಸಾಮಾಜಿಕ ಅರಣ್ಯ ವಲಯ ಅಧಿಕಾರಿ ಪ್ರಶಾಂತ್ ಗೌರಾಣಿ, ಉಪ ವಲಯ ಅರಣ್ಯ ಅಧಿಕಾರಿ  ಎಸ್ ಎಂ, ಮುಂಜಿ, ಎ ಬಿ ಕುಂಬಾರ, ದೇವಸ್ಥಾನ ಕಮಿಟಿಯ ಅಧ್ಯಕ್ಷ  ಬಸವರಾಜ ಮಾಧಗುಡಿ, ಸುನಿಲ್ ದೇಸಾಯಿ, ಗುರುಲಿಂಗ ಬಾಷಿಂಗಿ, ಬಾಬು ಚಮಕೇರಿ, ಗಿರೀಶ್ ದಿವಾನಮಳ, ಕುಮಾರ ಗೋಟ್ಟಿ, ಸಂದೀಪ ಪಾಟೀಲ, ರೋಟರಿ ಸಂಸ್ಥೆಯ ಸದಸ್ಯರಾದ  ಮೇಘರಾಜ ಫಾರಮರ, ಅರುಣ ಸೌದಾಗರ, ಶೇಖರ ಕೋಲಾರ, ಅರುಣ ಯಲಗುದ್ರಿ, ಶ್ರೀಕಾಂತ ಅಥಣಿ, ಡಾ. ಪಿ ಪಿ ಮಿರಜ, ಡಾ. ಆನಂದ  ಗುಂಜಿಗಾವಿ, ರಮೇಶ  ಬುಲಬುಲೆ, ಆನಂದ ತೊಣಪಿ, ಸುರೇಶ್ ಬಳ್ಳೊಳ್ಳಿ, ಬಾಹುಬಲಿ ಆಂಡೋಳಿ, ಬಾಹುಬಲಿ ಆಸ್ಕಿ, ಸುನಿಲ್ ದೇಸಾಯಿ, ಅವಿನಾಶ ಜಾದವ, ಡಾ. ಆನಂದ್ ಕುಲಕರ್ಣಿ, ಡಾ. ಸಚಿನ್ ಮಿರಜ, ಬಾಳಪ್ಪಣ್ಣ ಬುಕಿಟಗಾರ, ತೃಪ್ತಿ ಕುಲಕರ್ಣಿ, ಸುಮೇತ ಮಿರಜ, ವೈಶಾಲಿ ಮಠಪತಿ, ಶೋಭಾ ಕೋಲಾರ, ಪ್ರಭಾವತಿ ಬಳ್ಳೊಳ್ಳಿ, ಮಧು ಮಂಗಸುಳಿ, ಭಾರತಿ ಕೋರೆ, ರೂಪಾಲಿ ಆಸ್ಕಿ,  ಪದ್ಮಾ  ಅಥಣಿ,  ರೇಣುಕಾ ಸೌದಾಗರ, ಅರಣ್ಯ ಇಲಾಖೆಯ ವೀಕ್ಷಕ ಸಂಪತ್ ಜಾಧವ, ಶಿವಾಜಿ ಕಾಳೆ  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
#######
 ಅರಣ್ಯ ಇಲಾಖೆಯಿಂದ  ಈ ಬಾರಿ  30 ಸಾವಿರಕ್ಕೂ ಅಧಿಕ ಗಿಡಮರಗಳನ್ನು ನೆಡುವ ಸಂಕಲ್ಪ ಹೊಂದಿದ್ದೇವೆ, ಶಾಸಕರಾದ ಲಕ್ಷ್ಮಣ ಸವದಿ ಅವರ ಮಾರ್ಗದರ್ಶನದಲ್ಲಿ ತಾಲೂಕಿನ ಅನೇಕ ಪ್ರೌಢಶಾಲೆ, ಹಾಸ್ಟೆಲ್ ಗಳಲ್ಲಿ, ನಾಗರಿಕ ಸೌಲಭ್ಯ ಸ್ಥಳಗಳಲ್ಲಿ, ರಸ್ತೆ ಬದಿಗೆ, ದೇವಸ್ಥಾನದ ಆವರಣಗಳು ಸೇರಿದಂತೆ  ಅನೇಕ ಸ್ಥಳಗಳಲ್ಲಿ ಈಗಾಗಲೇ 20 ಸಾವಿರಕ್ಕೂ ಅಧಿಕ ಗಿಡಗಳನ್ನು  ನೀಡಲಾಗಿದೆ. ಗಜಾನನ ಮಂಗಸುಳಿ  ಅವರ ಅವರ ಸಹಕಾರದ ಮೂಲಕ  ಜ್ಯೋತಿಬಾ ದೇವಸ್ಥಾನದ ಆವರಣದಲ್ಲಿ  ರೋಟರಿ ಉದ್ಯಾನವನ ಸ್ಥಾಪನೆ ಮಾಡಿ  350ಕ್ಕೂ ಅಧಿಕ ಗಿಡಗಳನ್ನು  ನೆಟ್ಟು ಸಂರಕ್ಷಣೆ ಮಾಡಲಾಗುತ್ತಿದೆ.
 – ಪ್ರಶಾಂತ್ ಗೌರಾಣಿ, ಸಾಮಾಜಿಕ ಅರಣ್ಯ
         ಅಧಿಕಾರಿ, ಅಥಣಿ.
WhatsApp Group Join Now
Telegram Group Join Now
Share This Article